ಇತ್ತೀಚಿನ ಸುದ್ದಿ
ಕಾಶೀ ಮಠದಲ್ಲಿ ವಿನಾಯಕ ಚತುರ್ಥಿ: ಮಹಾಗಣಪತಿ ದೇವರ ಮೃತ್ತಿಕಾ ವಿಗ್ರಹ ಪ್ರತಿಷ್ಠಾಪನೆ
31/08/2022, 18:46

ಚಿತ್ರ: ಮಂಜು ನೀರೇಶ್ವಾಲ್ಯ
ಮಂಗಳೂರು(reporterkarnataka.com) : ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಾತುರ್ಮಾಸ ವ್ರತ ಆಚರಿಸುತ್ತಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಮಠದಲ್ಲಿ ಗಣೇಶಚತುರ್ಥಿ ಪ್ರಯುಕ್ತ ಶ್ರೀ ಮಹಾಗಣಪತಿ ದೇವರ ಮೃತ್ತಿಕಾ ವಿಗ್ರಹವನ್ನು ಶ್ರೀಗಳವರು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.
ಐದು ದಿನಗಳ ಪರ್ಯಂತ ಆಚರಣೆ ನಡೆಯಲಿದ್ದು ಸಾವಿರಾರು ಭಜಕರು ಭಾಗವಹಿಸಲಿರುವರು.