6:13 PM Wednesday19 - November 2025
ಬ್ರೇಕಿಂಗ್ ನ್ಯೂಸ್
ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ ಕೊಡಗಿನ ಪ್ರಮುಖ ಹಬ್ಬ ಪುತ್ತರಿಗೆ ದಿನಾಂಕ ನಿಗದಿ: ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ… ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ… Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ…

ಇತ್ತೀಚಿನ ಸುದ್ದಿ

Just Miss | ಚಿಕ್ಕಮಗಳೂರು: ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಮರವೇರಿ ಪ್ರಾಣ ಉಳಿಸಿಕೊಂಡ ಇಟಿಎಫ್ ಸಿಬ್ಬಂದಿ!

22/02/2025, 10:05

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕಾಫಿನಾಡ ಮಲೆನಾಡು ಭಾಗದಲ್ಲಿ ಆನೆ ಹಾವಾಳಿ ಮುಂದುವರೆದಿದ್ದು, ಆನೆ ದಾಳಿಯಿಂದ ಇ.ಟಿ.ಎಫ್. ( ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿಯೋರ್ವ ಮರಹತ್ತಿ ಜೀವ ಉಳಿಸಿಕೊಂಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಸಾಲೂರು ಅರಣ್ಯದಲ್ಲಿ ನಡೆದಿದೆ.


ಎನ್.ಆರ್.ಪುರ ತಾಲೂಕಿನಲ್ಲಿ ಇತ್ತಿಚೆಗೆ ಆನೆ ಹಾವಳಿ ಮಿತಿ ಮೀರಿದೆ. ಕಾಡಾನೆಗಳು ಪ್ರತಿನಿತ್ಯ ಪುಂಡಾಟ ಮೆರೆಯುತ್ತಿದ್ದು, ಮೂರು ತಿಂಗಳಲ್ಲಿ ಇಬ್ಬರು ಆನೆ ದಾಳಿಗೆ ತುತ್ತಾಗಿದ್ದಾರೆ.‌ ಶುಕ್ರವಾರ ಕೂಡ ಕಾಫಿತೋಟಕ್ಕೆ ಬಂದಿದ್ದ ಪುಂಡಾನೆಯೊಂದನ್ನ ಓಡಿಸಲು ಹೋಗಿದ್ದ ಇ.ಟಿ.ಎಫ್. ಸಿಬ್ಬಂದಿ ಮೇಲೆಯೇ ಆನೆಯೊಂದು ಅಟ್ಯಾಕ್ ಮಾಡಲು ಮುಂದಾಗಿದೆ. ಸಾಲೂರು ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಕಾಡಾನೆಯನ್ನು ಓಡಿಸುವ ವೇಳೆ ಆನೆ ಇಟಿಎಫ್ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಮುಂದಾಗಿದೆ. ತಕ್ಷಣ ಎಚ್ಚೆತ್ತ ಇಟಿಎಫ್ ಸಿಬ್ಬಂದಿಗಳು ಮರವನ್ನೇರಿ ಕುಳಿತು ಜೀವ ಉಳಿಸಿಕೊಂಡಿದ್ದಾರೆ. ಮರವೇರಿ ಕುಳಿತ ನಂತರವೂ ಕಾಡಾನೆ ಮರವನ್ನು ಅಲುಗಾಡಿಸಲು ಮುಂದಾಗಿದ್ದು, ಈ ದೃಶ್ಯವನ್ನು ಮರದ ಮೇಲೆ ಕುಳಿತುಕೊಂಡು ಆನೆ ನಿಗ್ರಹ ದಳದ ಸಿಬ್ಬಂದಿಗಳು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಈ ದೃಶ್ಯ ನೋಡಿದವರ ಮೈ ಜುಮ್ ಎನಿಸುವಂತಿದ್ದು, ಆನೆ ದಾಳಿ ಹಾಗೂ ಹಾವಳಿಯಿಂದ ಕಂಗೆಟ್ಟಿರೋ ಜನ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕಬೇಕೆಂದು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು