ಇತ್ತೀಚಿನ ಸುದ್ದಿ
ಜುಲೈ 14ರಂದು ಚೆನ್ನೈಯಲ್ಲಿ ವಿಭಾ ಶ್ರೀನಿವಾಸ್ ನಾಯಕ್ ಸಂಗೀತ ಕಾರ್ಯಕ್ರಮ; ಸನ್ಮಾನ
12/07/2024, 20:36
ಮಂಗಳೂರು(reporterkarnataka.com): ಚೆನ್ನೈ ನಗರದ ಸಂಯುಕ್ತ ಗೌಡ ಸಾರಸ್ವತ ಸಭಾ ವತಿಯಿಂದ ಜೆ. ಎಸ್. ಪ್ರಭು ಹಾಗೂ ರಮಾಬಾಯಿ ಪ್ರಭು ಸ್ಮರಣಾರ್ಥ ಸಂಗೀತ ಕಾರ್ಯಕ್ರಮ ಜುಲೈ 14ರಂದು ಸಂಜೆ 6 ಗಂಟೆಯಿಂದ 7.45 ರ ವರೆಗೆ ಚೆನ್ನೈ ಟಿ ನಗರದ ಮ್ಯೂಸಿಕ್ ಹಾಲ್ ನಲ್ಲಿ ನಡೆಯಲಿದೆ.
ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಲಾವಿದೆ ವಿಭಾ ಶ್ರೀನಿವಾಸ್ ನಾಯಕ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಶಿರಸಿಯ ಭರತ್ ಹೆಗ್ಡೆ ಹಾರ್ಮೋನಿಯಂ ಹಾಗೂ ಮೂಡಬಿದಿರೆಯ ವಿಗ್ನೇಶ್ ಪ್ರಭು ತಬಲದಲ್ಲಿ ಸಾಥ್ ನೀಡಲಿದ್ದಾರೆ. ಸಂಯುಕ್ತ ಗೌಡ ಸಾರಸ್ವತ ಸಭಾ ಅಧ್ಯಕ್ಷ ಡಾ. ಎಸ್. ದಿನೇಶ್ ನಾಯಕ್ ಅವರು ಸಂಗೀತ ಕಲಾವಿದರನ್ನು ಸನ್ಮಾನಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.