6:50 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಜುಲೈ 9 ಮತ್ತು 10: ಬೀದಿ ಬೈಲೂರು ಮಹಾಲಿಂಗೇಶ್ವರ ದೇವಸ್ಥಾನ ಸಾನ್ನಿಧ್ಯ ಸಂಕೋಚ ಹಾಗೂ ಶಿಲಾ ಮೆರವಣಿಗೆ

08/07/2023, 12:17

ಬೈಲೂರು(reporterkarnataka.com): ಬೈಲೂರು ಬೀದಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ಶ್ರೀ ಮಹಾಲಿಂಗೇಶ್ವರ ದೇವರ
ಸಾನ್ನಿಧ್ಯ ಸಂಕೋಚ ಕಾರ್ಯಕ್ರಮ ಜು.9 ಮತ್ತು 10 ರಂದು ಬ್ರಹ್ಮಶ್ರೀ ಬೈಲೂರು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮಗಳು: ಜು.9 ರಂದು ಸಾಯಂಕಾಲ 5ರಿಂದ ದೇವತಾ ಪ್ರಾರ್ಥನೆ, ಪುಣ್ಯಹವಾಚನ, ಮೂಲಾಲಯದಲ್ಲಿ ವಾಸ್ತು ಪೂಜಾ, ಬಲಿ, ವಾಸ್ತು ಹೋಮ, ಪ್ರಾಕಾರ ಬಲಿ, ಬಾಲಾಲಯದಲ್ಲಿ ಸಪ್ತಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ಬಲಿ, ವಾಸ್ತು ಹೋಮ, ಪ್ರಾಕಾರ ಬಲಿ ನಡೆಯಲಿದೆ.
ಜು. 10ರಂದು ಬೆಳಿಗ್ಗೆ 5:30ರಿಂದ ಪುಣ್ಯಹವಾಚನ, ಗಣಯಾಗ, ಪಂಚವಿಂಶತಿ, ಕಲಶ ಪ್ರಧಾನ ಹೋಮ, ಸಂಹಾರ ತತ್ವ ಹೋಮ, ಗಣಪತಿ ಸನ್ನಿಧಿಯಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಪ್ರಸನ್ನ ಪೂಜೆ, 8:30 ಕ್ಕೆ ಸಂಕೋಚ ಕಲಶಾಭಿಷೇಕ ಮಹಾಲಿಂಗೇಶ್ವರ ದೇವರ ಧ್ಯಾನ ಸಂಕೋಚ, ಮಹಾ ಗಣಪತಿ ದೇವರ ಬಿಂಬ ಬಾಲಾಲಯ ಪ್ರತಿಷ್ಠೆ,ಶಿಲಾ ಮುಹೂರ್ತ, ಪ್ರಸಾದ ವಿತರಣೆ ನಡೆಯಲಿದೆ. ಪುಣ್ಯ ಕಾರ್ಯದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ಜೀಣೋದ್ಧಾರ ಸಮಿತಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಗ್ರಾಮಸ್ಥರು ವಿನಂತಿಸಿದ್ದಾರೆ.
ಶಿಲಾ ಮೆರವಣಿಗೆ: ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶಿಲಾಮುಹೂರ್ತದ ಪೂರ್ವಭಾವಿಯಾಗಿ ಶಿಲಾ ಮೆರವಣಿಗೆಯು ಜು.9 ರಂದು ಬೆಳಿಗ್ಗೆ 9:30ಕ್ಕೆ ಸರಿಯಾಗಿ ಬೈಲೂರು ಕೆಳಪೇಟೆಯಿಂದ ನಡೆಯಲಿದೆ. ಮೆರವಣಿಗೆಯಲ್ಲಿ ಪೂರ್ಣಕುಂಭದೊಂದಿಗೆ ಮಹಿಳೆಯರು, ಭಜನಾ ತಂಡಗಳು, ಕೆರಳ ಚೆಂಡೆ ಹಾಗೂ ಸ್ಥಳೀಯ ಚೆಂಡೆ ತಂಡಗಳು ಪಾಲ್ಗೊಳ್ಳಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು