ಇತ್ತೀಚಿನ ಸುದ್ದಿ
ಜುಲೈ 23: ಕೊಂಚಾಡಿ ಮಂದಾರಬೈಲು ದುರ್ಗಾಪರಮೇಶ್ವರಿ ವೆಂಕಟರಮಣ ದೇಗುಲದಲ್ಲಿ ಸಚ್ಚಿದಾನಂದ ಪ್ರಭುಜೀ ಪ್ರವಚನ
22/07/2023, 14:04

ಮಂಗಳೂರು(reporterkarnataka.com): ಉತ್ತಮ ಬದುಕಿಗಾಗಿ ಭಗವದ್ಗೀತಾ ಸಾರಾಮೃತ ಪ್ರವಚನ ಕಾರ್ಯಕ್ರಮ ನಗರದ ದೇರೆಬೈಲ್ ಕೊಂಚಾಡಿಯ ಸಮೀಪದ ಮಂದಾರಬೈಲು ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇಗುಲದಲ್ಲಿ ಪ್ರತಿ ಭಾನುವಾರ ಸಂಜೆ 5ರಿಂದ 6 ಗಂಟೆ ವರೆಗೆ ನಡೆಯಲಿದೆ.
ಈ ಸರಣಿ ಕಾರ್ಯಕ್ರಮದ ಅಂಗವಾಗಿ ಜುಲೈ 23ರಂದು ಭಾನುವಾರ ದೇಗುಲದಲ್ಲಿ ಮಂಗಳೂರಿನ ಇಸ್ಕಾನ್ ರಾಧಾ ಗೋವಿಂದ ದೇವಸ್ಥಾನದ ಸಚ್ಚಿದಾನಂದ ಪ್ರಭುಜೀ ಪ್ರವಚನ ನೀಡಲಿದ್ದಾರೆ.