8:24 PM Tuesday21 - October 2025
ಬ್ರೇಕಿಂಗ್ ನ್ಯೂಸ್
ಹಾರಂಗಿ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ 95 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ… ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ Mysore | ಎಚ್. ಡಿ. ಕೋಟೆಯಲ್ಲಿ ಹುಲಿ ದಾಳಿ: ಎರಡೂ ಕಣ್ಣು ಕಳೆದುಕೊಂಡ… ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಹಿತ 5… Kodagu | ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಸಾಕ್ಷಿಯಾಗಲಿರುವ ಡಿಸಿಎಂ, ಸಚಿವರು, ಶಾಸಕರು ವಿರಾಜಪೇಟೆಯ ಪೆರಂಬಾಡಿ ಬಳಿ ಉದ್ಯಮಿ ಮೇಲೆ ಹಲ್ಲೆ, ದರೋಡೆ: ಪೊಲೀಸರು ಹೈ ಅಲರ್ಟ್ ಹಾಡು ನಿಲ್ಲಿಸಿದ ಯಕ್ಷ ಕೋಗಿಲೆ: ತೆಂಕುತಿಟ್ಟಿನ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ ನರೇಗಾ ಯೋಜನೆಯಡಿ ಕಾರ್ಮಿಕ ಆಯವ್ಯಯ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ Kodagu | ತುಲಾ ಸಂಕ್ರಮಣ: ತಲಕಾವೇರಿಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಆಭರಣ ಕಾವೇರಿಮನೆ ಚಂದನ್ ಗೆ ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ

ಇತ್ತೀಚಿನ ಸುದ್ದಿ

ಜುಲೈ 20 ಮತ್ತು 21: ಬೆಳಗಾವಿಯ ಎಂ ಚಂದರಗಿ ಹಿರೇಮಠದಲ್ಲಿ ಗುರುವಂದನ ಮತ್ತು ಗುರುಭಕ್ತರ ಸಮಾವೇಶ

11/07/2024, 21:33

ವಿರೂಪಾಕ್ಷ ಸ್ವಾಮಿ ಸಾಲಿಮಠ ಬೆಳಗಾವಿ

info.reporterkarnataka@gmail.com

ಗುರುಪೂರ್ಣಿಮೆ ನಿಮಿತ್ಯ ವಾಗಿ ಗುರುಭಕ್ತರ ಸಮಾವೇಶ ಹಿರೇಮಠ ಶ್ರೀ ಗಡದೀಶ್ವರ ಲೋಕ ಕಲ್ಯಾಣ ಫೌಂಡೇಶನ್ ಆಶ್ರಯದಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರು- ಶಿಷ್ಯರ ಬಾಂಧವ್ಯದ ಗುರುವಂದನ ಮತ್ತು ಗುರುಭಕ್ತರ ಸಮಾವೇಶ
ಕಾರ್ಯಕ್ರಮ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಎಂ ಚಂದರಗಿ ಶ್ರೀ ಗಡದೀಶ್ವರ ಸಂಸ್ಥಾನ ಹಿರೇಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 20 ಹಾಗೂ 21ರಂದು ಜರುಗಲಿದೆ.
ತಪೋ ರತ್ನ ಶ್ರೀ ಷ.ಬ್ರ. ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸಂಸ್ಥಾನ ಹಿರೇಮಠ ಕಟಕೋಳ ಎಂ. ಚಂದರಗಿ ಅವರ ಸಾನ್ನಿಧ್ಯದಲ್ಲಿ ಶ್ರೀ ಜಗದ್ಗುರು ರೇಣುಕಾ ಶ್ರೀ ಪ್ರಶಸ್ತಿ ಶ್ರೀ ಗುರು ಗಡದೀಶ್ವರ ಸದ್ಭಾವನ ಪ್ರಶಸ್ತಿ ಸಮಾರಂಭ ಕಾರ್ಯಕ್ರಮ ಜರುಗುವುದು.
20ರಂದು ಬೆಳಗ್ಗೆ 7:00ಗೆ ಭಕ್ತರಿಗೆ ಲಿಂಗ ದೀಕ್ಷೆ ಮತ್ತು ಜಂಗಮ ವಟಗಳಿಗೆ ಅಯ್ಯಾಚಾರ ಸಂಜೆ 5:00ಗೆ ಧರ್ಮ ಚಿಂತನಾಗೋಷ್ಠಿ ಕಾರ್ಯಕ್ರಮ ನಡೆಯುವುದು.
ಶಿವಾಚಾರ್ಯ‌‌ ರತ್ನ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು( ಸಂಸ್ಥಾನ ಹಿರೇಮಠ ಕಟಕೋಳ ಎಂ ಚಂದರಗಿ) ಅವರು ದಿವ್ಯ ಸಾನಿಧ್ಯವನ್ನು ವಹಿಸುವರು. ಶ್ರೀ ಷ.ಬ್ರ. ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು (ಸಂಸ್ಥಾನ ಹಿರೇಮಠ ಹುಕ್ಕೇರಿ ಬೆಳಗಾವಿ) ಇವರಗಳು ಸಾನಿಧ್ಯ ವಹಿಸುವರು.
ಎಂ ಚಂದ್ರಗಿ ಕಟಕೋಳ ಪೂಜ್ಯರ ಸನ್ನಿಧಾನದಲ್ಲಿ 20 ಹಾಗೂ 21ರಂದು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಚಂದರಗಿಯ ಚಂದಿರ ಪ್ರಶಸ್ತಿ ಹಾಗೂ ಶ್ರೀ ಗುರು ಗಡದೇಶ್ವರ ಸದ್ಭಾವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಮಸ್ಕಿ ತಾಲೂಕು ಅಧ್ಯಕ್ಷರಾದ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ದಂಪತಿಗೆ ಹಾಗೂ ಮಹಾಂತೇಶ್ ಪಟ್ಟಣಶೆಟ್ಟಿ ದಿದ್ದಿಗಿ ದಂಪತಿಗೆ ಶ್ರೀಗಳಿಂದ ಶ್ರೀರಕ್ಷೆ ಹಾಗೂ ಚಂದರಗಿ ಚೆಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇರುತ್ತದೆ.
ಶ್ರೀ ರೇಣುಕಾ ಗಡದೇಶ್ವರ ದೇವರು ಕಟಕೋಳ ಎಂ .ಚಂದರಗಿ‌ (ಧರ್ಮದರ್ಶಿಗಳು) ಶ್ರೀ ಚಂದ್ರಶೇಖರ ಸ್ವಾಮಿಗಳು (ಹಿರೇಮಠ ಲೋಕಾಪುರ )ಇವರ ಸಮ್ಮುಖದಲ್ಲಿ 21 ರಂದು ಪ್ರಾತಕಾಲ 6:00 ಗಂಟೆಗೆ ಶ್ರೀ ಗಡದೇಶ್ವರ ಕತೃಗದ್ದಿಗೆಗೆ ಹಾಗೂ 108 ಶಿವಲಿಂಗಗಳಿಗೆ ಮಹಾ ರುದ್ರಾಭಿಷೇಕ. ಸಹಾಸ್ರ ಬಿಲ್ವಾರ್ಚನೆ ಪೂಜ್ಯ ಗುರುಗಳ ಹಾಗೂ ಭಕ್ತರ ಸಾಮೂಹಿಕ ಶಿವಪೂಜೆ ಸಹಸ್ರ ಬಿಲ್ವಾರ್ಚನೆ ಹಾಗೂ ಶ್ರೀಗಳ ಸಮ್ಮುಖದಲ್ಲಿ ಜರುಗುವುದು ಹಾಗೂ ಶ್ರೀಗಳ 147ನೇಯ ತುಲಾಭಾರ ಸೇವೆಯನ್ನು ಪುಷ್ಪ ಹನುಮಂತಪ್ಪ ಬಿಜ್ಜರಿಗೆ ಸಾಕಿನ್ ರಾಮದುರ್ಗ ಮತ್ತು ‌ಶ್ರೀಗಳ 148ನೇ ತುಲಾ ಭಾರ ಸೇವೆಯನ್ನು ಗಂಗಯ್ಯ ಚನ್ನವೀರಯ್ಯ ಹಿರೇಮಠ ಯಶೋಧಾ ಗಂಗಯ್ಯ ಹಿರೇಮಠ ಸಾಕಿನ ಹುಬ್ಬಳ್ಳಿ ಇವರು ನೆರವೇರಿಸುವವರು.

ಇತ್ತೀಚಿನ ಸುದ್ದಿ

ಜಾಹೀರಾತು