ಇತ್ತೀಚಿನ ಸುದ್ದಿ
ಪತ್ರಕರ್ತ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರಿಗೆ ರವಿ ಬೆಳಗೆರೆ ಪ್ರಶಸ್ತಿ, ಅನು ಅಕ್ಕಗೆ ಸಮಾಜ ಸೇವೆ ರತ್ನ ಪ್ರದಾನ
13/04/2026, 20:55
ರಾಯಚೂರು(reporterkarnataka.com):ಪತ್ರಿಕೋದ್ಯಮದಲ್ಲಿ ಮಾಡಿದ ಅನುಪಮ ಸೇವೆಯನ್ನು ಗುರುತಿಸಿ ಪತ್ರಕರ್ತ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಅವರಿಗೆ ರವಿ ಬೆಳಗೆರೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಸ್ಕಿಯಲ್ಲಿ ಸಮಾಜ ಸೇವೆಗೆ ಮುಂದಾದ ಗೀತ ಗಾಯನ ಸಮೂಹ ಐದನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಮತ್ತು ಸಂಭ್ರಮ ಸಂಸ್ಕೃತಿಕ ವೇದಿಕೆ ಐವತ್ತನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಮಾಜದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.




ಬೆಂಗಳೂರಿನ ಜ್ಞಾನ ವಿಕಾಸ ಗುರುಕುಲದಲ್ಲಿ ಗೀತ ಗಾಯನ ಸಮೂಹ ಸಂಭ್ರಮ ಸಂಸ್ಕೃತಿಕ ವೇದಿಕೆಯ ಕಾರ್ಯಕ್ರಮವನ್ನು ಜ್ಞಾನ ವಿಕಾಸ ಗುರುಕುಲದಲ್ಲಿ ನಡೆಸಲಾಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಜಾನಪದ ಕಲಾತಂಡಗಳು, ಸಾಹಿತಿಗಳು, ಕವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರ್ದೇಶಕ ಹಾಗೂ ಸಂಸ್ಥಾಪಕ ಅಧ್ಯಕ್ಷ ನಾಗಲಿಂಗ ಮೂರ್ತಿ, ಕೆ. ಆರ್. ಪ್ರಕಾಶ್ ಅವರ ನೇತೃತ್ವದಲ್ಲಿ ಮುಖ್ಯ ಅತಿಥಿಗಳಿಂದ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಲಾಯಿತು.
ಕೆಚ್ಚೆದೆಯ ಕನ್ನಡತಿ ಎಂದು ಪ್ರಸಿದ್ಧಿ ಅನು ಅಕ್ಕ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.












