ಇತ್ತೀಚಿನ ಸುದ್ದಿ
ಪತ್ರಕರ್ತ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠಗೆ ಬಸವ ಭೂಷಣ ರಾಷ್ಟ್ರ ಪ್ರಶಸ್ತಿ: ಆಗಸ್ಟ್ 10ರಂದು ಧಾರವಾಡದಲ್ಲಿ ಪ್ರದಾನ
07/08/2025, 21:43

ಬೆಂಗಳೂರು(reporterkarnataka.com): ವಿಶ್ವ ದರ್ಶನ ಫೌಂಡೇಶನ್ ಭಾವೈಕ್ಯತೆಗಾಗಿ ನೀಡುತ್ತಿರುವ ಬಸವ ಭೂಷಣ ರಾಷ್ಟ್ರಪ್ರಶಸ್ತಿಗೆ ಪತ್ರಕರ್ತ ವಿರೂಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಆಯ್ಕೆಗೊಂಡಿದ್ದಾರೆ.
ವಿಶ್ವ ದರ್ಶನ ಫೌಂಡೇಶನ್ ತನ್ನ ಪತ್ರಿಕೆ ಯ 5ನೇ ವಾರ್ಷಿಕೋತ್ಸವ ಅಂಗವಾಗಿ ಧಾರವಾಡದಲ್ಲಿ ರಂಗಾಯಣ ಭವನದಲ್ಲಿ ಆಗಸ್ಟ್ 10ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
10ರಂದು ಬೆಳಗ್ಗೆ 10 ಗಂಟೆಗೆ ವಿಶ್ವ ದರ್ಶನ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಸ್. ಎಸ್. ಪಾಟೀಲ್ ನೀಡುವ ಐಕಾನ್ ಅವಾರ್ಡ್ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಸ್ಕಿ ತಾಲೂಕು ಜಂಗಮ ಸಮಾಜದ ಯುವ ಮುಖಂಡರು ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್
ಜೋಷಿ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.