11:05 PM Friday18 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಜೋಕಟ್ಟೆ : ರೈಲಿನಡಿಗೆ ಬೀಳುತ್ತಿದ್ದ ಆಡನ್ನು ರಕ್ಷಿಸಲು ಹೋದ ಯುವಕನ ಕಾಲಿನ ಮೇಲೆಯೆ ಹರಿಯಿತು ರೈಲು

28/08/2021, 21:40

ಮಂಗಳೂರು(ReporterKarnataka.com)

ರೈಲು ಹಳಿ ದಾಟುತ್ತಿರುವಾಗ ದೂರದಲ್ಲಿ ರೈಲು ಬರುತ್ತಿರುವುದು ಗಮನಿಸಿ ಅಲ್ಲೆ ಓಡಾಡುತ್ತಿದ್ದ ಆಡು ಮರಿಯನ್ನು ರಕ್ಷಿಸಲು ಹೋದ ಯವಕನ ಎರಡೂ ಕಾಲುಗಳು ತುಂಡಾಗಿ ಬಿದ್ದ ಘಟನೆ ಶನಿವಾರ ಜೋಕಟ್ಟೆ ಸಮೀಪ ನಡೆದಿದೆ.

ಚೇತನ್ ಕುಮಾರ್ ಎನ್ನುವ 21ರ ಹರೆಯದ ಯುವಕ ತನ್ನ ಪ್ರಾಣಿ ಪ್ರೇಮದಿಂದ ತನ್ನ ಪ್ರಾಣವನ್ನೇ ಪಣಕಿಟ್ಟಿದ್ದಾನೆ. ಸಣ್ಣ ಪ್ರಾಯದಲ್ಲೇ ಬಸ್ ಕ್ಲೀನರ್ ಕೆಲಸ ಮಾಡುತ್ತಲೇ ಕಷ್ಟದಲ್ಲಿ ಕಾಲೇಜು ಓದಿದ್ದ ಯುವಕ ಒಂದೂವರೆ ವರ್ಷದಿಂದ ಬಸ್ ಕಂಡಕ್ಟರನಾಗಿ ಸೇರಿಕೊಂಡಿದ್ದ. ಮನೆಯ ಐದು ಮಕ್ಕಳಲ್ಲಿ ಹಿರಿಯವನಾಗಿದ್ದ ಈತನ ದುಡಿಮೆಯಿಂದಲೇ ಕುಟುಂಬ ಸಾಗುತ್ತಿತ್ತು.

ಚೇತನ್ ಕುಮಾರ್ ಮನೆ ಇರುವುದು ಮಂಗಳೂರು ಹೊರವಲಯದ ಬೈಕಂಪಾಡಿ ಬಳಿಯ ಜೋಕಟ್ಟೆ ಸಮೀಪದ ಅಂಗರಗುಂಡಿ ಎಂಬಲ್ಲಿ. ಹೆದ್ದಾರಿಯಿಂದ ಮನೆಗೆ ತೆರಳಬೇಕಿದ್ದರೆ ಮೂರು ಕಿಮೀ ನಡೆಯಬೇಕಿತ್ತು. ದಿನವೂ ಬೆಳಗ್ಗೆ ಮೂರು ಕಿಮೀ ನಡೆದುಕೊಂಡೇ ಜೋಕಟ್ಟೆಯ ರೈಲು ಹಳಿಯನ್ನು ದಾಟಿಕೊಂಡು ಕೆಲಸಕ್ಕೆ ಬರುತ್ತಿದ್ದ. ಇಂದು ವೀಕೆಂಡ್ ಲಾಕ್ಡೌನ್ ಇದ್ದ ಕಾರಣ ಬಸ್ಸಿಗೆ ಜನ ಇರಲ್ಲ ಎಂದುಕೊಂಡು ತಡವಾಗಿ ಬಸ್ ಬಿಡಲು ನಿರ್ಧರಿಸಿದ್ದರು.

ಹಾಗಾಗಿ ಬೆಳಗ್ಗೆ 8.30ರ ಸುಮಾರಿಗೆ ನಡೆದುಕೊಂಡು ಬಂದು ಜೋಕಟ್ಟೆಯ ರೈಲು ಹಳಿ ದಾಟುತ್ತಿದ್ದಾಗ, ಅಲ್ಲೊಂದು ಆಡು ಮರಿ ಹಳಿಯ ಉದ್ದಕ್ಕೂ ಓಡುವುದು ಕಾಣಿಸಿತ್ತು. ಅದೇ ಸಂದರ್ಭದಲ್ಲಿ ದೂರದಲ್ಲಿ ರೈಲು ಬರುತ್ತಿದ್ದುದನ್ನು ಗಮನಿಸಿದ ಚೇತನ್ ಕುಮಾರ್, ಆಡು ಮರಿಯ ರಕ್ಷಣೆಗೆ ಧಾವಿಸಿದ್ದಾನೆ. ಓಡುತ್ತಲೇ ಆಡಿನ ಮರಿಯನ್ನು ಹೊರಕ್ಕೆ ದೂಡಿದ ಚೇತನ್ ಕುಮಾರ್ ಹಳಿಯಿಂದ ಹೊರಬೀಳುವಷ್ಟರಲ್ಲಿ ರೈಲು ಧಾವಿಸಿ ಬಂದಿದೆ. ಚೇತನ್ ಕಾಲಿನ ಮೇಲಿಂದಲೇ ರೈಲು ಹರಿದು ಹೋಗಿದ್ದು, ಎರಡೂ ಕಾಲುಗಳು ತುಂಡಾಗಿವೆ.

ಕೂಡಲೇ ಆತನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಪರಿಶೀಲಿಸಿ ಎರಡೂ ಕಾಲು ತುಂಡಾಗಿರುವುದನ್ನು ತಿಳಿಸಿದ್ದಾರೆ. ಯುವಕನ ದುಡಿಮೆಯಿಂದಲೇ ಬದುಕುತ್ತಿದ್ದ ಬಡ ಕುಟುಂಬಕ್ಕೆ ಈ ಘಟನೆಯಿಂದ ದಿಕ್ಕೇ ತೋಚದಂತಾಗಿದೆ.

ಇಬ್ಬರು ತಮ್ಮಂದಿರು ಮತ್ತು ಇಬ್ಬರು ತಂಗಿಯರು ಶಾಲೆ, ಕಾಲೇಜು ಕಲಿಯುತ್ತಿದ್ದಾರೆ. ತಂದೆ, ತಾಯಿ ಮತ್ತು ಇತರ ಮಕ್ಕಳಿಗೆಲ್ಲ ಅಣ್ಣನ ದುಡಿಮೆಯೇ ಆಧಾರವಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು