9:48 AM Friday18 - October 2024
ಬ್ರೇಕಿಂಗ್ ನ್ಯೂಸ್
ಏಷ್ಯಾದ ಗೇಮಿಂಗ್ ಮತ್ತು ಅನಿಮೇಷನ್ ರಾಜಧಾನಿಯಾಗುವುದು ಕರ್ನಾಟಕದ ಗುರಿ: ಐಜಿಸಿ 2024ರಲ್ಲಿ ಸಚಿವ… ಬಿಳಾಲುಕೊಪ್ಪ-ಬಸರೀಕಟ್ಟೆ ರಸ್ತೆ ಕೆಸರುಮಯ: ಬಸ್ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ ಅ.19-21: ಎಸಿಪಿಐ ಮತ್ತು ಮಂಗಳೂರು ವಿವಿ ಕ್ರೈಸ್ತ ವಿದ್ಯಾಪೀಠದಿಂದ 47ನೇ ವಾರ್ಷಿಕ ಸಂಶೋಧನಾ… ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಪ್ರಬಲ ಹೋರಾಟಕ್ಕೆ ಸಜ್ಜು ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯಕ್ಕೆ ಹಳೆ ವಿದ್ಯಾರ್ಥಿನಿ, ಮಾಲ್ಡೀವ್ಸ್ ಗಣರಾಜ್ಯದ ಪ್ರಥಮ ಮಹಿಳೆ ಸಾಜಿದಾ… ನಿಂತಿದ್ದ ಗೂಡ್ಸ್ ರೈಲಿಗೆ ಮೈಸೂರು-ದರ್ಭಂಗಾ ಭಾಗಮತಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ: ಹಳಿ ತಪ್ಪಿದ… ತೀರ್ಥಹಳ್ಳಿಯಲ್ಲಿ ಸಂಭ್ರಮ- ಸಡಗರದ ಆಯುಧ ಪೂಜೆ: ಪೊಲೀಸ್ ಠಾಣೆಯಲ್ಲೂ ಬಂದೂಕು, ರಿವಾಲ್ವರ್ ಗಳಿಗೆ… ಸಾಲ ವಾಪಸ್ ಕೇಳಿದಕ್ಕೆ ಕಾರ್ಪೆಂಟರ್ ಅಮಾನುಷ ಕೊಲೆ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ… ಮಂಗಳೂರು: ಸರ್ಫಾಸಿ ಕಾಯಿದೆ ಮತ್ತು ಕೆನರಾ ಬ್ಯಾಂಕ್ ವಿರುದ್ಧ ಕಾಫಿ ಬೆಳೆಗಾರರ ಪ್ರತಿಭಟನೆ ತೀರ್ಥಹಳ್ಳಿ: ಸಾಲಬಾಧೆಯಿಂದ ಮನನೊಂದು ರೈತ ಅತ್ಮಹತ್ಯೆ

ಇತ್ತೀಚಿನ ಸುದ್ದಿ

ಜೋಕಟ್ಟೆ: ಭಾರೀ ಗಾಳಿ ಮಳೆಗೆ ತಡೆಗೋಡೆ ಕುಸಿದು ಮನೆ ನೆಲಸಮ: ನೆಂಟರಾಗಿ ಬಂದಿದ್ದ ಬಾಲಕ ದಾರುಣ ಸಾವು

25/07/2024, 14:39

ಮಂಗಳೂರು(reporterkarnataka.com): ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಜೋಕಟ್ಟೆ ಬಳಿ ಭಾರೀ ಗಾಳಿ ಮಳೆಗೆ ಮನೆಯ ಮೇಲೆ ತಡೆಗೋಡೆ ಕುಸಿದು 17 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ.
ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿಯಾದ ಶೈಲೇಶ್‌ ಎಂಬಾತ ಜೋಕಟ್ಟೆಯ ಸಂಬಂಧಿಕರ ಮನೆಗೆ ಆಗಮಿಸಿದ್ದ. ಊಟ ಮಾಡಿ ಎಲ್ಲರೂ ಮಲಗಿದ್ದರು. ತಡರಾತ್ರಿ ಭಾರೀ ಮಳೆಯಾಗುತ್ತಿದ್ದಾಗ ಪಕ್ಕದ ತಡೆಗೋಡೆ ಮನೆ ಮೇಲೆ ಕುಸಿದು ಬಿದ್ದಿದ್ದು ಮನೆ ನೆಲಸಮವಾಗಿದೆ. ಮನೆಯಲ್ಲಿ ಮಲಗಿದ್ದವರ ಮೇಲೆ ಮನೆಯ ಹಂಚು ಬಿದ್ದಿದ್ದು ಈ ವೇಳೆ ಶೈಲೇಶ್ ತೀವ್ರ ಗಾಯಗೊಂಡಿದ್ದ. ಅಗ್ನಿ ಶಾಮಕದಳದ సిబ్బంది ಕಾರ್ಯಾಚರಣೆ ನಡೆಸಿ ಬಾಲಕನನ್ನು ಹೊರತೆಗೆದು ಆಸ್ಪತ್ರೆಗೆ ಒಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾರೆ.

ಮನೆಯಲ್ಲಿದ್ದ ಸಂಜೀವ (55), ಸುರೇಶ್ (20), ಸವಿತಾ (19), ಒಂದು ವರ್ಷದ ಮಗು ಸಖಿ ಅವರಿಗೆ ಅಲ್ಪ ಸ್ವಲ್ಪ ಗಾಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು