ಇತ್ತೀಚಿನ ಸುದ್ದಿ
ಜಿಯೋದಿಂದ ಗ್ರಾಹಕರಿಗೆ 39 ರೂ. ಮತ್ತು 69 ರೂ.ಗಳ ಅಗ್ಗದ ಹೊಸ ಪ್ಲಾನ್ : ಮಾಹಿತಿಗಾಗಿ ಮುಂದಕ್ಕೆ ಓದಿ
24/05/2021, 17:06
ನವದೆಹಲಿ(reporterkarnataka news):ಜಿಯೋ ತನ್ನ ಗ್ರಾಹಕರಿಗಾಗಿ ಅಗ್ಗದ ಎರಡು ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. 39 ರೂ. ಮತ್ತು 69 ರೂ.ಗಳ ಪ್ಲಾನ್ ಇದಾಗಿದೆ.
ಜಿಯೋ ಬಿಡುಗಡೆ ಮಾಡಿರುವ ಕಡಿಮೆ ಬೆಲೆಯ ಮೊದಲ ಪ್ಲಾನ್ ಆಗಿದೆ ಇದಾಗಿದೆ.
ಜಿಯೋ ಪರಿಚಯಿಸಿರುವ ನೂತನ 39 ಮತ್ತು 69 ರೂಪಾಯಿಯ ಈ ರೀಚಾರ್ಜ್ ಪ್ಲಾನಲ್ಲಿ ಕೆಲವು ಸೌಲಭ್ಯಗಳಿವೆ. ಅನಿಯಮಿತ ಉಚಿತ ಕರೆಯೊಂದಿಗೆ ಡೇಟಾ ಸೌಲಭ್ಯ ಸಿಗಲಿದೆ. 39 ರೂ ಪ್ರಿಪೇಯ್ಡ್ ಪ್ಲಾನ್ ಅಗ್ಗದ ಯೋಜನೆಯಾಗಿದೆ. ಈ ಪ್ಲಾನ್ ನಲ್ಲಿ ಅನ್ ಲಿಮಿಟೆಡ್ ಉಚಿತ ಕರೆಯೊಂದಿಗೆ 100MB ಹೈಸ್ಪೀಡ್ ಡೇಟಾ ಸಿಗಲಿದೆ. ಈ ಪ್ರಿಪೇಯ್ಡ್ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 100 ಉಚಿತ ಎಸ್‌ಎಂಎಸ್‌ನ (SMS) ಪ್ರಯೋಜನವನ್ನು ಕೂಡಾ ಪಡೆಯುತ್ತಾರೆ. 39 ರೂ.ಗಳ ಈ ಪ್ರಿಪೇಯ್ಡ್ ಯೋಜನೆಯ ಸಿಂಧುತ್ವ 14 ದಿನಗಳವರೆಗೆ ಇರಲಿದೆ. ಈ ಹಿಂದೆ, ಜಿಯೋಫೋನ್ ಬಳಕೆದಾರರಿಗಾಗಿ ಅಗ್ಗದ ಪ್ರಿಪೇಯ್ಡ್ ಯೋಜನೆ ಅಂದರೆ 75 ರೂಗಳ ಪ್ಲಾನ್ ಆಗಿತ್ತು.