ಇತ್ತೀಚಿನ ಸುದ್ದಿ
ಜಿಲ್ಲಾ ಮಟ್ಟದ ಕ್ರಿಕೆಟ್: ವಾಗ್ದೇವಿ ಶಾಲೆಯ 4 ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ
01/10/2024, 19:51

ರಶ್ಮಿ ಶ್ರೀಕಾಂತ್ ನಾಯಕ್
ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಶಾಲಾ ಶಿಕ್ಷಣ ಇಲಾಖೆ
ಸೆ. 30ರಂದು ಭದ್ರಾವತಿಯಲ್ಲಿ
ನಡೆಸಿದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಜಿಲ್ಲಾ ಮಟ್ಟದ ಕ್ರಿಕೆಟ್ ಆಯ್ಕೆಯಲ್ಲಿ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯ ನಾಲ್ವರು ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅನುಜ್ ( 9 ನೆಯ ತರಗತಿ), ಉತ್ಸವ್ ಗೌಡ (8 ನೆಯ ತರಗತಿ), ವರ್ಚಸ್ (8 ನೆಯ ತರಗತಿ) ಮತ್ತು ಪೂರ್ವ (7 ನೆಯ ತರಗತಿ) ಇವರು ಅತ್ಯುತ್ತಮವಾಗಿ ತಮ್ಮ ಆಟವನ್ನು ಪ್ರದರ್ಶಿಸಿ ಶೈಕ್ಷಣಿಕ ವಿಭಾಗವಾಗಿರುವ ಬೆಂಗಳೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಮಾರ್ಗದರ್ಶನವನ್ನು ನೀಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕರಿಸಿದ ಸಿಟಿ ಕ್ರಿಕೆಟ್ ಕ್ಲಬ್ ನ ಮುಖ್ಯಸ್ಥರಾದ ಅಬ್ದುಲ್ ಕಲಾಂ ಆಜಾದ್ ರವರಿಗೆ ಹಾಗೂ ತರಬೇತಿದಾರರಾದ ಸುಬ್ರಹ್ಮಣ್ಯ, ಅವರಿಗೆ ವಾಗ್ದೇವಿ ಶಿಕ್ಷಣ ಸಂಸ್ಥೆ ಅಭಿನಂದನೆ ಸಲ್ಲಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು,
ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿ ಮುಂದಿನ ಕ್ರೀಡೆಗೆ ಶುಭ ಹಾರೈಸಿದ್ದಾರೆ.