ಇತ್ತೀಚಿನ ಸುದ್ದಿ
ಜೀವನದಲ್ಲಿ ಜಿಗುಪ್ಸೆ: ಕಾರ್ಕಳದ ಕುಕ್ಕುಜೆಯಲ್ಲಿ ಯುವಕ ನೇಣಿಗೆ ಶರಣು
18/09/2022, 15:12

ಕಾರ್ಕಳ(reporterkarnataka.com):
ಕಾರ್ಕಳ ತಾಲೂಕಿನ ಕುಕ್ಕುಜೆ ಗ್ರಾಮದ ಪುಣಿಲ್ ಕಟ್ಟೆ ಎಂಬಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕುಕ್ಕುಜೆ ಗ್ರಾಮದ ಪುಣಿಲ್ ಕಟ್ಟೆ ನಿವಾಸಿ ಕೃಷ್ಣ(29) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ನಿನ್ನೆ ಮನೆಯ ಕೋಣೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.