ಇತ್ತೀಚಿನ ಸುದ್ದಿ
ಜೆಡಿ ಇನ್ಸ್‌ಟ್‌ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಿಂದ ಶಿಷ್ಯವೇತನಕ್ಕೆ ಆಹ್ವಾನ
08/07/2021, 15:36
ಮಂಗಳೂರು(reporterkarnataka news): ದಕ್ಷಿಣ ಭಾರತಾದ್ಯಂತ1988ರಿಂದಲೂ ವಿಶಿಷ್ಟ ಡಿಸೈನ್ ಶಿಕ್ಷಣವನ್ನು ನೀಡುತ್ತಿರುವ ಜೆಡಿ ಇನ್ಸ್‌ಟ್‌ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ 2021ರ ಶೈಕ್ಷಣಿಕ ವರ್ಷಕ್ಕೆ ಪ್ರವೇಶಗಳನ್ನು ಪ್ರಾರಂಭಿಸಿದೆ.
38 ಹೆಚ್ಚು ಕಲಿಕಾ ಕೇಂದ್ರಗಳನ್ನು ಹೊಂದಿರುವ ಜೆಡಿ ಇನ್ಸ್‌ಟ್‌ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಂಬಂಧಿಸಿದ ವಿಷಯಗಳಲ್ಲಿ ಸೈದ್ಧಾಂತಿಕ ಮತ್ತು ಕೈಗಾರಿಕಾ ಪ್ರವೇಶದ ನೀಡುವ ಅತ್ಯುತ್ತಮ ಸಂಯೋಜನೆಯ ಪ್ರಖ್ಯಾತ ವಿನ್ಯಾಸ ಶಿಕ್ಷಣ ನೀಡುತ್ತಿದೆ. ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್, ಜ್ಯೂವೆಲ್ಲರಿ ಡಿಸೈನ್, ಫ್ಯಾಷನ್ ಕಮ್ಯುನಿಕೇಷನ್, ಫ್ಯಾಷನ್ ಅಂಡ್ ಲೈಫ್‍ಸ್ಟೈಲ್ ಎಂಟರ್‍ಪ್ರಿನ್ಯೂರ್‍ಶಿಪ್, ಫ್ಯಾಷನ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್, ವಿಶುಯಲ್ ಮರ್ಕೆಂಡೈಸಿಂಗ್, ಫ್ಯಾಷನ್ ಫೋಟೋಗ್ರಫಿ ಅಂಡ್ ಹೇರ್ ಅಂಡ್ ಮೇಕಪ್ ಆರ್ಟಿಸ್ಟ್ರಿಗಳಲ್ಲಿ ಪದವಿ, ಸ್ನಾತಕೋತ್ತದರ ಪದವಿ, ಡಿಪ್ಲೊಮಾ ಮತ್ತು ಪೋಸ್ಟ್ ಡಿಪ್ಲೋಮಾ ಕಾರ್ಯಕ್ರಮಗಳನ್ನು ನೀಡುತ್ತಿದೆ.
ಜೆಡಿ ಇನ್ಸ್‌ಟ್‌ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯ ದಕ್ಷಿಣದ ನಿರ್ದೇಶಕಿ ಸಾಂಡ್ರಾ ಸೆಕ್ವೇರಾ ಪ್ರಕಟಣೆಯಲ್ಲಿ ತಿಳಿಸಿದರು.