ಇತ್ತೀಚಿನ ಸುದ್ದಿ
ಜೆಸಿಐ ಕಾಪು ಘಟಕ: 2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೆಸಿ ವಿಕ್ಕಿ ಪೂಜಾರಿ ಮಡುಂಬು ಆಯ್ಕೆ
05/02/2026, 22:44
ಉಡುಪಿ(reporterkarnataka.com): 28 ವರುಷಗಳನ್ನು ಪೂರೈಸಿರುವ ವಲಯ 15ರ ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿಗೆ ನೂತನ ಅಧ್ಯಕ್ಷ ಜೆಸಿ ವಿಕ್ಕಿ ಪೂಜಾರಿ ಮಡುಂಬು ಅವರು ಆಯ್ಕೆಯಾಗಿದ್ದಾರೆ.
ಪದ ಪ್ರಧಾನ ಸಮಾರಂಭವು ಜನವರಿ 31ರ ಶನಿವಾರ ಕಾಪು ಜೆಸಿಐ ಭವನದಲ್ಲಿ ಜರಗಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ವಲಯಾಧ್ಯಕ್ಷ ಜೆಸಿ ಸಂತೋಷ್ ಶೆಟ್ಟಿ ವಿಟ್ಲ, ವಲಯ ಪೂರ್ವಾಧ್ಯಕ್ಷ ಜೆಸಿ ರಾಕೇಶ್ ಕುಂಜೂರು, ವಲಯ ಉಪಾಧ್ಯಕ್ಷ ಜೆಸಿ ಅರುಣ್ ಮಾಂಜ, ನಿಕಟಪೂರ್ವ ಅಧ್ಯಕ್ಷೆ ಜೆಸಿ ಅನಿತಾ ಹೆಗ್ಡೆ ಉಪಸ್ಥಿತರಿದ್ದರು.
2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಗೃಹ ರಕ್ಷಕ ದಳದಲ್ಲಿ ಸೇವಾ ನಿರತರಾಗಿರುವ ಲಕ್ಷ್ಮೀ ನಾರಾಯಣ ರಾವ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
2026ನೇ ಸಾಲಿಗೆ ಜೆಸಿಐ ಕಾಪು ಘಟಕದ ಕಾರ್ಯದರ್ಶಿಯಾಗಿ ಜೆಸಿ ಶ್ರುತಿ ಶೆಟ್ಟಿ, ಲೇಡಿ ಜೆಸಿ ಕೋ-ಆರ್ಡಿನೆಟರ್ ಜೆಸಿ ಕವಿತಾ ಕುಂದರ್, ಜೂನಿಯರ್ ಜೆಸಿ ಅಧ್ಯಕ್ಷರಾಗಿ ಜೆಜೆಸಿ ಮನ್ವಿತ್ ಬಂಗೇರ, ಕೋಶಾಧಿಕಾರಿಯಾಗಿ ಜೆಸಿ ಶ್ರಾವ್ಯ ಜೆ. ಬಂಗೇರ ಕಾರ್ಯನಿರ್ವಹಿಸಲಿದ್ದಾರೆ.












