9:56 AM Sunday22 - September 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ 30 ಅಡಿ ಎತ್ತರದಿಂದ ಗ್ರಾಪಂ ಆವರಣಕ್ಕೆ ಕಾರು… ವಿಶ್ವ ವಿಜ್ಞಾನಿಗಳ ಪಟ್ಟಿ: ಬಳ್ಳಾರಿಯ ವಿಎಸ್‌ಕೆಯುನ ಮೂವರು ಪ್ರಾಧ್ಯಾಪಕರಿಗೆ ಸ್ಥಾನ ​ ಸರಕಾರದ ನೇಮಕಾತಿಯಲ್ಲಿ ಮೀಸಲಾತಿ ಪರಿಗಣಿಸಿ: ಪಂಪಾಪತಿ ಆಗ್ರಹ ನಂಜನಗೂಡು: 20 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಚಾಲನೆ ಬೆಂಗಳೂರಿನ ಇಸ್ಕಾನ್ ಶ್ರೀರಾಧಾಕೃಷ್ಣ ದೇವಸ್ಥಾನದಲ್ಲಿ ಬಾಲ್ಯದ ಕ್ಯಾನ್ಸರ್ ಜಾಗೃತಿ ಮಾಸಕ್ಕೆ ಚಿನ್ನದ ಹೊಳಪು ತೀರ್ಥಹಳ್ಳಿ: ಹಿಂದೂ- ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾದ ಛತ್ರಕೇರಿ ಗಣೇಶೋತ್ಸವ ಶೋಭಾಯಾತ್ರೆ ಮಿಸ್ಟರ್ ಕರಾವಳಿ, ಮಿಸ್ ಕರಾವಳಿ ಪ್ರಶಸ್ತಿ ರಂಜಿತ್ ಗಾಣಿಗ ಹಾಗೂ ರಿಷಾ ಟಾನ್ಯಾ… ಮೇಯರ್ ಆಯ್ಕೆ ಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್ ವಾಕ್ಸಮರ: ಕೊನೆಗೆ ನಿರಾಳ, ಕೂಲ್ ಕೂಲ್!! ತೀರ್ಥಹಳ್ಳಿ: ಸರ್ವಧರ್ಮ ಸಮನ್ವಯತೆಯಲ್ಲಿ ಸಂಭ್ರಮ- ಸಡಗರದ ಈದ್ ಮಿಲಾದ್ ಆಚರಣೆ ನಂಜನಗೂಡು: ಮುನಿರತ್ನ ವಿರುದ್ಧ ಜನ ಸಂಗ್ರಾಮ ಪರಿಷತ್ ಪ್ರತಿಭಟನೆ: ಶಾಸಕ ಸ್ಥಾನದಿಂದ ವಜಾಗೊಳಿಸಲು…

ಇತ್ತೀಚಿನ ಸುದ್ದಿ

ಜಯಶ್ರಿ ಕೊರಳಿಗೆ ಎಸ್ಸೆಸ್ಸೆಲ್ಸಿ ವಿಜಯ ಮಾಲೆ: 44ನೇ ವಯಸ್ಸಿನಲ್ಲಿ ಮಂಗಳೂರು ವಿವಿ ಕಾಲೇಜು ಅಟೆಂಡರ್ ಪಾಸ್ !

09/08/2021, 21:16

ಅನುಷ್ ಪಂಡಿತ್ ಮಂಗಳೂರು
info.reporterkarnata@gmail.com

ಕಲಿಯಬೇಕು ಎನ್ನುವ ಛಲ ಇದ್ದರೆ ವಯಸ್ಸು ಅಡ್ಡಿ ಬರೋದಿಲ್ಲ ಎನ್ನುವುದಕ್ಕೆ ತಾಜ ನಿದರ್ಶನ ಮಂಗಳೂರು ಯುನಿವರ್ಸಿಟಿ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಟೆಂಪರರಿ ಅಟೆಂಡರ್ ಜಯಶ್ರೀ ಅವರು.

ಹೌದು, ಕಲಿಯಬೇಕು ಎನ್ನುವ ಮನಸ್ಸಿದ್ದರೆ ವಯಸ್ಸಿನ ಮಾತಿಲ್ಲ ಎನ್ನುವಂತೆ ತನ್ನ 44 ವಯಸ್ಸಿನ ಕೆಲಸದ ಜತೆಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಿರ್ಣರಾಗಿದ್ದಾರೆ. ಮೂಲತ ವೆಲೆನ್ಸಿಯ ಸೂಟರ್ ಪೇಟೆಯಲ್ಲಿ ತನ್ನ ಪತಿ ಪ್ರದೀಪ್ ಅವರೊಂದಿಗೆ  ವಾಸಿಸುತ್ತಿದ್ದಾರೆ. ಪತಿ ಬ್ಯಾಂಕ್ ನಲ್ಲಿ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಯಶ್ರೀ ಅವರು 5ನೇ ತರಗತಿ ವರೆಗೆ ಕಲಿತಿದ್ದಾರೆ.10ನೇ ತರಗತಿಗೆ ನೇರವಾಗಿ ಪರೀಕ್ಷೆ ಬರೆದಿದ್ದಾರೆ. ಖಾಸಗಿ ಟ್ಯೂಶನ್ ಕ್ಲಾಸ್ ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ.

ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನದಲ್ಲೇ ಬೆಳೆದ ಇವರು ಮಂಗಳೂರಿನ ಪದಂಗಡಿಯ ಗಂಧಕಾಡ್ ಪರಿಸರದಲ್ಲಿ ದಿವಂಗತ ಸೀತಾರಾಮ ಹಾಗೂ ಜಾನಕಿ (75) ಅವರಿಗೆ 4 ಹೆಣ್ಣು ಹಾಗೂ1 ಗಂಡು ಮಕ್ಕಳು. ಮೂವರು ಅಕ್ಕಂದಿರ ನಂತರದವರೇ ಜಯಶ್ರೀ.

ಜಯಶ್ರೀ ಅವರೆ ಹೇಳುವ ಪ್ರಕಾರ ಯೂನಿವರ್ಸಿಟಿ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶೋಭಾ ಮೇಡಂ ಹಾಗೂ ಉದಯ ಕುಮಾರ್ ಇರ್ವತ್ತೂರು ಅವರೆ ಕಲಿಯಲು ದಾರಿ ತೋರಿಸಿದವರು. ಕಲಿಯುವ ವಯಸ್ಸಲ್ಲಿ ಕಲಿಯಲು ಮನಸಿದ್ದರೂ ಪ್ರೇರೇಪಣೆ ನೀಡುವರಾರಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ನನಗೆ ಪರ್ಮನೆಂಟ್ ಆದರೆ ಸಂತೋಷ ಜೀವನಕ್ಕೆ ದಾರಿಯಾಗುತ್ತದೆ ಎನ್ನುವ ಆಶಯ. ಈಗಿನ ಮಕ್ಕಳಿಗೆ ನಾನು ಹೇಳುವುದೊಂದೇ ಅವಕಾಶ ಸಿಕ್ಕಾಗ ಕಲಿಯಿರಿ ಮತ್ತೆ ಪರಿತಪಿಸ ಬೇಡಿ. ಕಳೆದು ಹೋದ ಸಮಯ ಮತ್ತೆ ಬಾರದು

ಜಯಶ್ರೀ, ಅಟೆಂಡರ್, ಮಂಗಳೂರು ವಿವಿ ಕಾಲೇಜು

ಇತ್ತೀಚಿನ ಸುದ್ದಿ

ಜಾಹೀರಾತು