ಇತ್ತೀಚಿನ ಸುದ್ದಿ
ಜಯನಗರ ಗಾರ್ಡನ್ ಸಿಟಿ ಆಸ್ಪತ್ರೆಗೆ ಕೇವಲ 8 ದಿನಗಳಲ್ಲಿ ಕಾಯಕಲ್ಪ; ಸಂಸದ ತೇಜಸ್ವಿ ಸೂರ್ಯ ಸಾಧನೆ
28/05/2021, 07:07
ಬೆಂಗಳೂರು(reporterkarnataka news): ಒಬ್ಬ ಸಂಸದನಿಗೆ ಇಚ್ಛಾಶಕ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಅತ್ಯುತ್ತಮ ನಿದರ್ಶನ. ಕಳೆದ 3 ವರ್ಷಗಳಿಂದ ನಿಷ್ಕ್ರಿಯವಾಗಿದ್ದ ಜಯನಗರದ ಗಾರ್ಡನ್ ಸಿಟಿ ಆಸ್ಪತ್ರೆಗೆ ಮತ್ತೆ ಕಾಯಕಲ್ಪ ನೀಡಿದ್ದಾರೆ.
ಕೇವಲ 8 ದಿನಗಳ ಅವಧಿಯಲ್ಲಿ ತೇಜಸ್ವಿ ಸೂರ್ಯ ಅವರ ಪ್ರಯತ್ನದಿಂದ ಆಸ್ಪತ್ರೆಯನ್ನು ಪುನರುಜ್ಜೀವನಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ 70 ಬೆಡ್ ಗಳಿಗೆ ಅವಕಾಶವಿದೆ. ಇದರಲ್ಲಿ 10 ಐಸಿಯು, 10 ಎಚ್ ಡಿಯು ಹಾಗೂ 50 ಆಕ್ಸಿಜನ್ ಬೆಡ್ ಗಳಿವೆ.