8:45 AM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಜಾತ್ರೆ ಭಾರತೀಯ ಪಾರಂಪರಿಕ ಸಂಸ್ಕೃತಿಯ ಪ್ರತೀಕ: ಶ್ರೀ ರೇವಣ ಸಿದ್ಧೇಶ್ವರ ಸ್ವಾಮೀಜಿ

11/08/2024, 21:36

ಸಂತೋಷ್ ಬೆಳಗಾವಿ

info.reporterkarnataka@gmail.com
ಜಾತ್ರೆ ಭಾರತೀಯ ಪಾರಂಪರಿಕ ಸಂಸ್ಕೃತಿಯ ಪ್ರತೀಕವಾಗಿದೆ. ಬಾಂಧವ್ಯ ಬೆಸೆಯುವ ಅದ್ಭುತ ಅಸ್ತ್ರ , ಬೇಧ ಭಾವ ಮರೆತು ಬಾಂಧವ್ಯ ಬೆಸೆಯುವದು ಜಾತ್ರೆಗಳಲ್ಲಿ ಕಾಣಬಹುದು ಎಂದು ರೇವಣ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಅವರು ಹಳ್ಳೂರ ಗ್ರಾಮದ ಶ್ರೀ ಬಸವ ನಗರ ಕ್ರಾಸ್ ನಲ್ಲಿರುವ ಶ್ರೀ ಭೀರಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿ, ಜಾತ್ರೆಗಳು ಹುಗ್ಗಿ ಜಾತ್ರೆಗಳಾಗದೆ ಮಹಾತ್ಮರನ್ನು ಕರೆಸಿ ಒಳ್ಳೆಯ ಆಚಾರ ವಿಚಾರ ಧಾರ್ಮಿಕ ಕಾರ್ಯಕ್ರಮ ನಡೆಸಿ ಸನ್ಮಾರ್ಗದಲ್ಲಿ ಸಾಗಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಗ್ರಾಮದಲ್ಲಿ ಪ್ರತೀ ವರ್ಷ ಗ್ರಾಮದಲ್ಲಿಯೇ ವಿಶೇಷವಾಗಿ ಜರುಗುತ್ತಿದೆಂದು ಹೇಳಿದರು. ಸಿದ್ದೇಶ್ವರ ಶರಣರು ಮಾತನಾಡಿ ಶ್ರಾವಣ ಮಾಸ ಶ್ರೇಷ್ಠವಾದದ್ದು ಸತ್ಸಂಗದಲ್ಲಿ ಬಾಗವಹಿಸಿ ಪ್ರಪಂಚ ಮಾಡಿ ಪಾರಮಾರ್ಥ ಗೆದ್ದು ಮಾನವ ಜೀವನ ಸಾರ್ಥಕ ಮಾಡಿಕೊಳ್ಳುರೆಂದು ಹೇಳಿದರು.
ಈ ಸಮಯದಲ್ಲಿ ಅರ್ಚಕರಾದ ಮಲ್ಲಪ್ಪ ಅಲಗೊಂಡ. ಅಧ್ಯಕ್ಷರಾದ ಸಿದರಾಯ ಬೆಣಚಿನಮರಡಿ, ಉಪಾಧ್ಯಕ್ಷ ಬಸಪ್ಪ ಮಾಲಗಾರ. ಶಿವಪ್ಪ ಕೋoಗಾಲಿ. ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ. ಕರೆಪ್ಪ ಹನಗಂಡಿ. ಸಂಜಯ ಹೊಸಟ್ಟಿ, ಗಂಗಾಧರ ಮಣ್ಣಾಪುರ, ಬಸವರಾಜ ಹೊಸಟ್ಟಿ, ಸಿದ್ದಪ್ಪ ಮಾಳಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು