ಇತ್ತೀಚಿನ ಸುದ್ದಿ
ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಗೆ 2022ರ ಕರ್ನಾಟಕದ ಬೆಸ್ಟ್ ಚಾರಿಟೇಬಲ್ ಹಾಸ್ಪಿಟಲ್ ಪ್ರಶಸ್ತಿ
27/06/2022, 10:22
ಮಂಗಳೂರು(reporterkarnataka.com): ನಗರದ ಹೊರವಲಯದ ದೇರಳಕಟ್ಟೆಯಲ್ಲಿರುವ ಪ್ರತಿಷ್ಠಿತ ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಗೆ ನ್ಯೂಸ್ 18 ವತಿಯಿಂದ 2022 ರ ಕರ್ನಾಟಕದ ಬೆಸ್ಟ್ ಚಾರಿಟೇಬಲ್ ಆಸ್ಪತ್ರೆ ಪ್ರಶಸ್ತಿ ನೀಡಲಾಗಿದೆ.
ನಿಟ್ಟೆ ಪರಿಗಣಿತ ವಿಶ್ವ ವಿದ್ಯಾಲಯದ ಸಹ ಕುಲಾಧಿಪತಿಗಳಾದ ಡಾ. ಶಾಂತಾರಾಮ ಶೆಟ್ಟಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಆರೋಗ್ಯ ಸೇವೆಯಲ್ಲಿ ಆಸ್ಪತ್ರೆಯ ನಿಸ್ವಾರ್ಥ ಸೇವೆಗೆ ಈ ಪ್ರಶಸ್ತಿಯು ಇನ್ನೊಂದು ಗರಿಯನ್ನು ಮೂಡಿಸಿದೆ.