ಇತ್ತೀಚಿನ ಸುದ್ದಿ
ಜಪ್ಪಿನಮೊಗರು ಸಾರ್ವಜನಿಕ ಗಣೇಶೋತ್ಸವ: ಧಾರ್ಮಿಕ ಸಭೆ ಸಂಪನ್ನ; ಸಾಧಕರಿಗೆ ಸನ್ಮಾನ
09/09/2024, 12:25
ಮಂಗಳೂರು(reporterkarnataka.com): ಜಪ್ಪಿನಮೊಗರು ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ನಡೆಯುವ ಗಣೇಶೋತ್ಸವದ ಅಂಗವಾಗಿ ಧಾರ್ಮಿಕ ಸಭೆ ಜರುಗಿತು.
ಕಾರ್ಯಕ್ರಮವನ್ನು ಈಶ್ವರಿ ಕನ್ಸ್ಟ್ರಕ್ಷನ್ ನ ಪ್ರೊಪ್ರೈಟರ್ ಕವಿತಾ ಕೋಟ್ಯಾನ್ ಮತ್ತು ನಿಶಾನ್ ಪೂಜಾರಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ, ಸಾರ್ವಜನಿಕ ಗಣೇಶೋತ್ಸವ ಸೌಹಾರ್ದತೆಯ ಹಬ್ಬ. ಎಲ್ಲ ಜಾತಿ ಧರ್ಮದವರು ಒಟ್ಟು ಗೂಡಿ ಹಬ್ಬವನ್ನು ಆಚರಿಸುತ್ತಾರೆ ಎಂದು ಅವರು ಹೇಳಿದರು.
ಅತಿಥಿಗಳಾಗಿ ಮಂಗಳೂರು ಮಂಡೋವಿ ಮೋಟರ್ಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆರೂರು ಸಂಜಯ್ ರಾವ್, ಪುತ್ತೂರು ಪರ್ಲಡ್ಕ ದುರ್ಗಾ ಕ್ಲಿನಿಕ್ ಡಾ. ಹರಿಕೃಷ್ಣ ಪಾಣಾಜೆ, ಬಿಜೆಪಿ ನಾಯಕ ಚಂದ್ರಹಾಸ್ ಉಚ್ಚಿಲ್ ಮತ್ತಿರರರು ಉಪಸ್ಥಿತರಿದ್ದರು.
ಕಂಬಳ ಕ್ಷೇತ್ರದ ನಂದಳಿಕೆ ಶ್ರೀ ಕಾಂತ್ ಭಟ್, ಈಜುಪಟು ಪೂರ್ವಿ ಎಂ. ಕೋಡಿಕಲ್ ಹಾಗೂ ಇತರ ಸಾಧಕರನ್ನು ಸನ್ಮಾನಿಸಲಾಯಿತು.