ಇತ್ತೀಚಿನ ಸುದ್ದಿ
ಜಪ್ಪಿನಮೊಗರು: ಯುವತಿ ನಾಪತ್ತೆ; ಪತ್ತೆಗೆ ಸಾರ್ವಜನಿಕರಲ್ಲಿ ಕೋರಿಕೆ
23/02/2023, 21:32
ಜಪ್ಪಿನಮೊಗರು: ಯುವತಿ ನಾಪತ್ತೆ; ಪತ್ತೆಗೆ ಸಾರ್ವಜನಿಕರಲ್ಲಿ ಕೋರಿಕೆ
ಮಂಗಳೂರು,ಫೆ.23(ಕ.ವಾ):- ನಗರದ ಜಪ್ಪಿನಮೊಗರು ಪ್ರಜ್ಞಾ ಸ್ವಾಧಾರ ಗೃಹದಲ್ಲಿದ್ದ ರೂಪ (26 ವರ್ಷ) 2022ರ ಅಕ್ಟೋಬರ್ 15 ರಿಂದ ಕಾಣೆಯಾಗಿರುವ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: 6 ಅಡಿ ಎತ್ತರ, ದುಂಡು ಮುಖ, ಕಪ್ಪು ಕೂದಲು, ಸಾಧಾರಣಾ ಶರೀರ ಹೊಂದಿರುತ್ತಾರೆ. ಕಾಣೆಯಾದ ದಿನ ಆಕಾಶ ನೀಲಿ ಬಣ್ಣದ ಟಾಪ್, ಕಪ್ಪು ಬಣ್ಣದ ಪ್ಯಾಂಟ್ ಹಾಗೂ ನೀಲಿ ಜಾಕೇಟ್ ಧರಿಸಿರುತ್ತಾರೆ ಇವರು ಕನ್ನಡ ಮಾತನಾಡುತ್ತಾರೆ.
ಇವರ ಪತ್ತೆಯಾದಲ್ಲಿ ಕಂಕನಾಡಿ ಪೊಲೀಸ್ ಠಾಣೆ ದೂ.ಸಂಖ್ಯೆ: 0824-2220529, 9480805354, 0824-2220800 ಸಂಪರ್ಕಿಸುವಂತೆ ಕಂಕನಾಡಿ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














