9:54 AM Monday28 - July 2025
ಬ್ರೇಕಿಂಗ್ ನ್ಯೂಸ್
ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;…

ಇತ್ತೀಚಿನ ಸುದ್ದಿ

ಜನಪರ ಕಾಳಜಿಯ ಉಳ್ಳಾಲ ಪತ್ರಕರ್ತರ ಜತೆಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ: ಜಿಲ್ಲಾಧಿಕಾರಿ

28/08/2023, 19:19

ಉಳ್ಳಾಲ(reporterkarnataka.com) : ಪತ್ರಕರ್ತರ ಕರ್ತವ್ಯ ನಿಭಾಯಿಸುವುದರ ಜೊತೆಗೆ ಜನರ ಕಾಳಜಿ ವಹಿಸಿಕೊಂಡು ಉಳ್ಳಾಲ ಪತ್ರಕರ್ತರ ತಂಡ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಮುಲೈ ಮುಹಿಲನ್‌ ಹೇಳಿದರು.
ತೊಕ್ಕೊಟ್ಟು ಕಾಪಿಕಾಡಿನ ಗಟ್ಟಿ ಸಮಾಜ ಭವನದಲ್ಲಿ ನಡೆದ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈವರೆಗಿನ ಸಾಮಾಜಿಕ ಚಟುವಟಿಕೆಗಳ ಚಿತ್ರಣವನ್ನು ಕಂಡ ನಂತರ ಸಾರ್ವಜನಿಕ ಕೆಲಸಗಳಲ್ಲಿ ಉಳ್ಳಾಲ ಪತ್ರಕರ್ತರ ಘಟಕದ ದೃಷ್ಟಿಕೋನ ಉತ್ತಮವಾಗಿ ಮುಂದುವರಿಯಲಿದ್ದು, ಜಿಲ್ಲಾಡಳಿತ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದು ಜಿಲ್ಲಾಧಿಕಾರಿ ನುಡಿದರು.


ಮೊಬೈಲ್‌ ಫೋನ್‌, ವಾಟ್ಸ್ಯಾಪ್‌ ಬಂದ ನಂತರ ಎಲ್ಲರ ಕೆಲಸ ಸಂಪೂರ್ಣ ಬದಲಾವಣೆ ಆಗಿದೆ. ಯಾರು ಎಲ್ಲಿ ಬೇಕಾದರೂ ಮಾಹಿತಿಗಳನ್ನು ಪಡೆಯಬಹುದಾದ ವಾತಾವರಣದಲ್ಲಿ ಪತ್ರಕರ್ತರ ಕರ್ತವ್ಯದಲ್ಲಿ ಬಹಳಷ್ಟು ಸವಾಲುಗಳಿದೆ. ಆಡಳಿತ ವ್ಯವಸ್ಥೆಯ ಕಿವಿ ಹಾಗೂ ಕಣ್ಣಿನಂತ ಇರುವ ಪತ್ರಕರ್ತರು ಸಮಾಜಕ್ಕೆ ಪೂರಕವಾದ ಮಾಹಿತಿಗಳನ್ನು ಸೂಕ್ತ ರೀತಿಯಲ್ಲಿ ಸಮಾಜದ ಮುಂದಿಡುವ ಜವಾಬ್ದಾರಿಯಿದೆ. ಉಳ್ಳಾಲದ ಪತ್ರಕರ್ತರು ಪ್ರಸ್ತುತ ಪಾರಂಪರ್ಯ ರೀತಿಯಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ. ಆವಿಷ್ಕಾಕಾರ, ನಾವೀನ್ಯತೆಯ ಜೊತೆಗೆ ಹೆಜ್ಜೆಯನ್ನಿಡಬೇಕಿದೆ. ಸಮಾಜದ ಕಾಳಜಿಯಿಂದ ಮಾಡಿರುವ ನಿರ್ಧಾರಗಳನ್ನು ಮುಂದಿಟ್ಟು ನೀತಿಗಳನ್ನು ಅನುಷ್ಠಾನ ಮಾಡುವ ಮುಖೇನ ಧ್ವನಿಯಿಲ್ಲದವರಿಗೆ ಧ್ವನಿಯಾಗಬೇಕಿದೆ. ಗ್ರಾಮ ಸಂಪರ್ಕ ಅಭಿಯಾನ ಅದ್ಭುತವಾತ ಕಾರ್ಯಕ್ರಮವಾಗಿದ್ದು, ಗ್ರಾಮದಲ್ಲಿರುವ ಜನರ ಸಮಸ್ಯೆಗೆ ನೇರವಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ಜೊತೆಗೆ ಸೇರಿಕೊಂಡು ಪರಿಹಾರವನ್ನು ಹುಡುಕುವ ಕಾರ್ಯ ಜವಾಬ್ದಾರಿಯುತ ಪ್ರಯತ್ನವಾಗಿದೆ. ಸಮನ್ವಯ ಸಾಧಿಸುವ ಕಾರ್ಯದಲ್ಲಿ ಜಿಲ್ಲಾಡಳಿತದ ಬೆಂಬಲ ಇದೆ ಎಂದರು.
ನಿವೇಶನಕ್ಕೆ10 ಲಕ್ಷ ರೂ ಅನುದಾನ: ಸಂಸದ ನಳಿನ್‌ ಕುಮಾರ್‌ ಕಟೀಲ್‌
ಉಳ್ಳಾಲದ ಪತ್ರಕರ್ತರ ನಿವೇಶನದ ಎಲ್ಲಾ ಕಾರ್ಯಗಳು ಶೀಘ್ರವೇ ಪೂರ್ಣಗೊಂಡರೆ ಸಂಸದರ ನಿಧಿಯಿಂದ ರೂ.10 ಲಕ್ಷ ಬಿಡುಗಡೆ ಮಾಡುವುದಾಗಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಘೋಷಣೆ ಮಾಡಿದರು.
ತನ್ನನ್ನು ರಾಜ್ಯಾಧ್ಯಕ್ಷ , ಲೋಕಸಭಾ ಸದಸ್ಯನಾಗಿ ಎತ್ತರಕ್ಕೆ ಕೊಂಡೊಯ್ಯುವಲ್ಲಿ ದ.ಕ ಜಿಲ್ಲೆಯ ಪತ್ರಕರ್ತರ ಕಾರ್ಯ ಬಹಳಷ್ಟಿದೆ. ಸಾಮಾಜಿಕ ಜಾಲತಾಣಗಳ ಮಧ್ಯೆ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಕರ್ತರಿದ್ದು, ಸವಾಲುಗಳ ಮಧ್ಯೆ ಬದುಕುವ ಅನಿವಾರ್ಯತೆ ಇದೆ. ಈ ಮಧ್ಯೆ ಒಗ್ಗಟ್ಟಾಗಿ ಸಂಘಟನೆ ರಚಿಸಿ ಆ ಮೂಲಕ ಕ್ಷೇಮನಿಧಿ , ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ. ಸಾಮಾಜಿಕವಾಗಿ ತೊಡಗಿಸಿಕೊಂಡವರನ್ನು ತಿದ್ದುವವರು ತಿವುಡುವವರು ಪತ್ರಕರ್ತರು. ಅವರಿಂದಾಗಿ ವ್ಯಕ್ತಿತ್ವ ವಿಕಸನದಲ್ಲಿ ಪಾತ್ರ ದೊಡ್ಡದಾಗಿರುತ್ತದೆ. ಪತ್ರಕರ್ತರ ಒಂದು ಮುಖವನ್ನು ಮಾತ್ರ ನೋಡಿದ್ದೆ. ಇಂದಿನ ಕಾರ್ಯಕ್ರಮದಲ್ಲಿ ಕಲೆಯ ಮುಖ ಅನಾವರಣಗೊಂಡಿದೆ. ಟೀಕೆ ಮಾಡಿದರೂ, ಬೈದರೂ ನಿಮ್ಮ ಜತೆಗೆ ಸದಾ ಇದ್ದೇವೆ ಎಂದರು.
ಸಂಸದ, ಬಿಜೆಪಿ‌ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪತ್ರಕತ್ರರ ಕ್ಷೇಮಾಭಿವೃದ್ಧಿ ನಿಧಿ ಸಂಚಯನಕ್ಕೆ ಚಾಲನೆ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಹಿರಿಯ ಪತ್ರಕರ್ತ ಎನ್.ಟಿ. ಬಾಳೆಪುಣಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಉಳ್ಳಾಲದ ಪತ್ರಕರ್ತರ ಮಕ್ಕಳಿಗೆ ಶೈಕ್ಷಣಿಕ ನಿಧಿಯನ್ನು ವಿತರಿಸಲಾಯಿತು.
ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಬೆಂಗಳೂರು ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಗಟ್ಟಿ ಸಮಾಜದ ಮೇಲ್ಡರು ಹರಿಶ್ಚಂದ್ರ ಗಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಚ ಪಿ.ಬಿ. ಹರೀಶ್ ರೈ, ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಕೊಲ್ಯ ಕುಲಾಲ ಸಮುದಾಯ ಭವನ ಕಟ್ಟಡ ಸಮಿತಿ ಅಧ್ಯಕ್ಷ ಅನಿಲ್ ದಾಸ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಸ್ವಾಗತಿಸಿದರು. ಅಧ್ಯಕ್ಷ ವಸಂತ ಕೊಣಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಡಾ. ಸತೀಶ್ ಕೊಣಾಜೆ ವಂದಿಸಿದರು. ಉಪಾಧ್ಯಕ್ಷ ದಿನೇಶ್ ನಾಯಕ್ ತೊಕ್ಕೊಟ್ಟು ವಿದ್ಯಾನಿಧಿ ಪುರಸ್ಕೃತರ ಹೆಸರು ವಾಚಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.
ಸಂಗೀತ ವೈಭವ: ಕಾರ್ಯಕ್ರಮದ ಅಂಗವಾಗಿ ಸತೀಶ್ ಇರಾ, ಸಂತೋಷ್ ಬೇಂಕ್ಯೆ, ಬಾಬು ಜಾರ್ಜ್, ರಿಷಿಕಾ ಕುಂದೇಶ್ವರ, ತೃಪ್ತಿ ಉಚ್ಚಿಲ್ ಅವರಿಂದ ಕರೋಕೆ ಸಂಗಿತ ವೈಭವ, ಕೊಲ್ಯ ಕುಲಾಲ ಸಮಾಜದ ಸದಸ್ಯರ ಮಕ್ಕಳಿಂದ ಯಕ್ಷಗಾನ ನೃತ್ಯ ವೈಭವ, ಅಬ್ಬಕ್ಕ ಟಿವಿ ಸಂಕಲನಕಾರ್ತಿ ಗಾಯತ್ರಿ ಮನೋಜ್ ಹಾಗೂ ಶರಣ್ಯ ಪಿ. ಬಂಗೇರ ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಗ್ರಾಮ ಸಂಪರ್ಕ ಅಭಿಯಾನದಡಿ ಕೊರೊನಾ, ನೆರೆ ಹಾವಳಿ ಸಂದರ್ಭ ಕಂಗೆಟ್ಟ ಕುಟುಂಬಗಳಿಗೆ ಆಹಾರ ಪೊಟ್ಟಣ, ದಿನಸಿ ಸಾಮಗ್ರಿ, ವಸ್ತ್ರ ವಿತರಣೆ, ಸಹಾಯ ಹಸ್ತ ಸೇರಿದಂತೆ ಮಾನವೀಯ ಸೇವೆಗೈದ ವಿಡಿಯೋ ತುಣುಕು ಪ್ರದರ್ಶಿಸಲಾಯಿತು.
ನಿರೂಪಕ ಹಾಗೂ ಕಲಾವಿದ ಚೇತನ್ ಶೆಟ್ಟಿ ಪಿಲಿಕುಲ ಸಾಂಸ್ಕೃತಿಕ ಕಾರ್ಯಕ್ರಮ‌ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು