11:41 PM Saturday4 - October 2025
ಬ್ರೇಕಿಂಗ್ ನ್ಯೂಸ್
ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್

ಇತ್ತೀಚಿನ ಸುದ್ದಿ

ಜನವರಿ 25ರಂದು ನಭೋ ಮಂಡಲದಲ್ಲಿ ನಡೆಯಲಿದೆ ವಿಸ್ಮಯ: 5 ಗ್ರಹಗಳ ಅಪರೂಪದ ಸಂಯೋಗ

19/01/2025, 21:26

ನವದೆಹಲಿ(reporterkarnataka.com): ಈ ತಿಂಗಳ ಮೂರನೇ ವಾರದ ವಾರಾಂತ್ಯದಲ್ಲಿ ಆಗಸದಲ್ಲಿ ಕೌತುಕವೊಂದು ಏರ್ಪಡಲಿದೆ.
ಈ ವಿಸ್ಮಯವನ್ನು ನೋಡಲು ವಿಶ್ವದ ವಿಜ್ಞಾನಿಗಳ ಜತೆ ಖಗೋಳ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
ಜನವರಿ 25ರಂದು ಖಗೋಳದಲ್ಲಿ ಈ ವಿಸ್ಮಯ ನಡೆಯಲಿದೆ. 25ರಂದು 5 ಗ್ರಹಳು ಕಾಣಿಸಿಕೊಳ್ಳಲಿದೆ. ಇದು ಬಹಳ ಅಪರೂಪದಲ್ಲಿ ನಡೆಯುವ ಗ್ರಹಗಳ ಸಂಯೋಗ ಆಗಲಿದೆ.
ಸೌರಮಂಡಲದ ಗ್ರಹಗಳಾದ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಅಪರೂಪವಾದ ಸ್ಥಿತಿಯಲ್ಲಿ ತಮ್ಮ ಸಂಚಾರ ಮಾಡಲಿದೆ.
ಸೂರ್ಯಾಸ್ತದ ನಂತರ ಶುಕ್ರ ಮತ್ತು ಗುರು ಗ್ರಹಗಳು ಸಾಕಷ್ಟು ಪ್ರಕಾಶಮಾನವಾಗಿ ಹೊಳೆಯಲಿದೆ. ಇದರಲ್ಲಿ ಮಂಗಳ ಗ್ರಹ ಇನ್ನಷ್ಟು ಹೊಳಪಿನಲ್ಲಿ ಗೋಚರಿಸಲಿದೆ. ಬೇರೆ ಖಗೋಳ ಘಟನೆಗಳಿಗಿಂತ ವಿಭಿನ್ನವಾಗಿ ಈ ಗ್ರಹಗಳ ಸಂಯೋಗ ನಡೆಯಲಿದೆ. ಇದನ್ನು ಬರಿ ಕಣ್ಣಿನಲ್ಲೇ ನೋಡಬಹುದಾಗಿದೆ ಎಂದು ಖಗೋಳ
ತಜ್ಞರು ಹೇಳಿದ್ದಾರೆ.
ಸೌರಮಂಡಲದ ಹಲವು ಗ್ರಹಗಳು ಸಾಲಾಗಿ ಹತ್ತಿರ ಹತ್ತಿರವಿದ್ದಾಗೆ ಗೋಚರಿಸಲಿದೆ. ವಾಸ್ತವದಲ್ಲಿ ಇದು ಕೋಟಿಗಟ್ಟಲೆ ಮೈಲು ಅಂತರದಲ್ಲಿರುತ್ತದೆ.
ಈ ಅಪರೂಪದ ಘಟನೆಯಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಆದರೆ, ಒಂದೇ ನೇರ ಸಾಲಿನಲ್ಲಿ ಇರುವುದಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು