ಇತ್ತೀಚಿನ ಸುದ್ದಿ
ಜೈನ ಮುನಿ ಹತ್ಯೆಗೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಖಂಡನೆ: ಸೂಕ್ತ ತನಿಖೆಗೆ ಸರಕಾರಕ್ಕೆ ಒತ್ತಾಯ
08/07/2023, 23:25
ಕಾರ್ಕಳ(reporterkarnataka.com): ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜೈನ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ. ದಿಗಂಬರ ಮುನಿಗಳ ಹತ್ಯೆ ಮನಸ್ಸಿಗೆ ತೀವ್ರ ಅಘಾತ ತಂದಿದೆ. ಮನಸ್ಸನ್ನು ಅತೀವ ಘಾಸಿಗೊಳಿಸಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥ ಕೊಲೆಗಡುಕರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಸಾಧು, ಸಂತರು ಶಾಂತಿ ಪ್ರೀಯರು. ದೇಶದ ಒಳಿತು. ಸಂಸ್ಕಾರ, ಸನಾತನ ಧರ್ಮದ ವಿಚಾರವಾಗಿ ಮಾರ್ಗದರ್ಶನ ನೀಡುವವರು. ಅಂತಹ ಸಾಧು ಸಂತರನ್ನೆ ಈ ರೀತಿ ಹೇಯವಾಗಿ ಕ್ರತ್ಯವೆಸಗಿ ಕೊಲೆ ಮಾಡಿರುವುದನ್ನು ಸಮಾಜ ಒಪ್ಪಲು ಸಾಧ್ಯವೇ ಇಲ್ಲ. ಹತ್ಯೆ ಕುರಿತು ಸೂಕ್ತ ತನಿಖೆ ನಡೆದು ತಪ್ಲಿತಸ್ಥರಿಗೆ ಶಿಕ್ಷೆಯಾಗಬೇಕು. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ. ನಾಡಿನ ಸಾಧು ಸಂತರಿಗೆ ರಕ್ಷಣೆ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ.
ಜೈನಮುನಿಗಳ ಅಗಲುವಿಕೆಯಿಂದ ಜೈನ ಸಮಾಜವಲ್ಲದೆ ಇಡೀ ನಾಡು ದು;ಖತ್ರಪ್ತವಾಗಿದ್ದು ದಿಗಂಬರ ಮುನಿಗಳ ಅಗಲುವಿಕೆಯ ನೋವು ಸಹಿಸುವ ಶಕ್ತಿಯನ್ನು ಭಗವಂತ ಜನತೆಗೆ ಕರುಣಿಸಲೆಂದು ಅವರು ಪ್ರಾರ್ಥಿಸಿದ್ದಾರೆ.