11:01 AM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ಐತಿಹಾಸಿಕ ಕದ್ರಿ ಜೋಗಿ ಮಠದಲ್ಲಿ ಶ್ರೀ ಕಾಲಬೈರವ ದೇವರ ಮೂಲಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

27/08/2023, 19:13

ಮಂಗಳೂರು(reporterkarnataka.com):ನಗರದ ಕದ್ರಿಯಲ್ಲಿರುವ ಐತಿಹಾಸಿಕ ಜೋಗಿ ಮಠದಲ್ಲಿ ಶ್ರೀ ಕಾಲ ಬೈರವ ದೇವರ ಮೂಲಮೂರ್ತಿ ಪ್ರತಿಷ್ಠಾಪಿಸುವಂತೆ ಆಗ್ರಹಿಸಿ ಭಾನುವಾರ ಜೋಗಿ ಸಮಾಜದ ಆಶ್ರಯದಲ್ಲಿ ಉಪವಾಸ ಸತ್ಯಾಗ್ರಹವನ್ನು ಭಜನೆಯ ಮೂಲಕ ನಡೆಸಲಾಯಿತು.
ಕದ್ರಿ ಜೋಗಿಮಠ ಹಿತರಕ್ಷಣಾ ಸಮಿತಿ, ದಕ್ಷಿಣ ಕನ್ನಡ ಜೋಗಿ ಸಮಾಜ ಸುಧಾರಕ ಸಂಘ, ಕದ್ರಿ ಶ್ರೀ ಜೋಗಿಮಠ ಜೀರ್ಣೋದ್ಧಾರ ಮತ್ತು ನಿರ್ವಹಣಾ ಸಮಿತಿಯ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.
ಕಾಲಭೈರವದೇವರಿಗೆ ಬ್ರಹ್ಮಕಲಶೋತ್ಸವ ಹಾಗೂ ಮೂರ್ತಿ ಪುನಃ ಪ್ರತಿಷ್ಠಾಪನೆ ಕಳೆದ ಫೆಬ್ರವರಿಯಲ್ಲಿ ನಡೆದಿದ್ದು, ಸಾವಿರಾರು ವರ್ಷ ಇತಿಹಾಸ ಇರುವ ಮೂಲ ಮೂರ್ತಿಯನ್ನು ಬಿಟ್ಟು ಯಾರೋ ಮಾರ್ವಾಡಿಗಳು ಕೊಡಮಾಡಿದ ಅಮೃತ ಶಿಲೆಯನ್ನು ಇಟ್ಟು ಬ್ರಹ್ಮಕಲಶ ಮಾಡಿದ್ದು, ಬಹುದೊಡ್ಡ ಅಪಚಾರವಾಗಿದೆ. ತಕ್ಷಣ ಈ ಬಗ್ಗೆ ಪುರಾ ತತ್ವ ಇಲಾಖೆ ನೀಡಿದ ಆದೇಶ ಜಾರಿ ಮಾಡಿ ಶ್ರೀ ಕಾಲಬೈರವ ದೇವರ ಮೂಲ ಮೂರ್ತಿ ಪ್ರತಿಷ್ಠಾಪನೆ ಆಗಬೇಕು ಎಂದು ಹರಿನಾಥ್ ಜೋಗಿ ಒತ್ತಾಯಿಸಿದರು.
ಈಗಿನ ನಿರ್ಮಲನಾಥ ಸ್ವಾಮೀಜಿ ಮಠಾಧಿಪತಿಗಳು ಕಾಲಬೈರವನ ಆರಾಧಕರಾದ ಸ್ಥಳೀಯ ಜೋಗಿ ಸಮಾಜದ ಬಂಧುಗಳ ಮನಸ್ಸಿಗೆ ನೋವುಂಟು ಮಾಡುತ್ತಿದ್ದಾರೆ.
ರಾಜಸ್ಥಾನದ ಭಕ್ತರು ಹಾಗೂ ಕೆಲವರು ಸೇರಿಕೊಂಡು ಪುರಾತನ ಕಾಲದಿಂದ ಆರಾಧಿಸಿಕೊಂಡು ಬರುತ್ತಿದ್ದ ಕಾಲಭೈರವ ದೇವರ ವಿಗ್ರಹವನ್ನು ಬಟ್ಟೆಯಲ್ಲಿ ಸುತ್ತಿ ಬಿಸಾಡಿದ್ದರು. ಯಾವುದೇ ವಿಧಿವಿಧಾನ ಅನುಸರಿಸದೆ ಚೀಲದಿಂದ ತೆಗೆದು ಹೊಸ ವಿಗ್ರಹ ಕೂರಿಸಿದ್ದಾರೆ. ಮಠ ಜೋಗಿ ಸಮುದಾಯಕ್ಕೆ ಸೇರಿದ್ದು, ಮಠಾಧೀಶರ ನಿರ್ದೇಶನದಲ್ಲಿ ಜೋಗಿಗಳೇ ಪ್ರತಿನಿತ್ಯ ಪೂಜೆ ನಡೆಸಬೇಕು ಎಂದರು.


ಹಳೆಯ ಕಾಲಭೈರವ ದೇವರ ವಿಗ್ರಹವನ್ನು ಮಠಾಧಿಪತಿಗಳು ಮಾರಾಟಕ್ಕೆ ಯತ್ನಿಸಿದ್ದರು. ನಾವು ಪ್ರಾಚ್ಯವಸ್ತು ಇಲಾಖೆಯನ್ನು ಸಂಪರ್ಕಿಸಿ ಮಾರಾಟ ತಡೆದಿದ್ದೇವೆ. ಮೊದಲಿನ ವಿಗ್ರಹವನ್ನೇ ಪ್ರತಿಷ್ಠಾಪಿಸುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದು, ಈ ಬಗ್ಗೆ ಪ್ರತಿಕ್ರಿಯೆ ಬಂದಿಲ್ಲ. ಇದರಿಂದ ಬೇಸತ್ತು ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ಇದು ಸಾಂಕೇತಿಕವಾಗಿದ್ದು ಬೇಡಿಕೆ ಈಡೇರದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುದು ಎಂದರು.
ಕದ್ರಿ ಜೋಗಿ ಮಠ ಹಿತರಕ್ಷಣಾ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಜೀರ್ಣೋದ್ದಾರ ಮತ್ತು ಕಾರ್ಯ ನಿರ್ವಹಣ ಸಮಿತಿ ಕಾರ್ಯದರ್ಶಿ ಹರೀಶ್ ಎಸ್.ಜೋಗಿ, ಸಮಾಜದ ಪ್ರಮುಖರಾದ ಕೆ. ದಯಾನಂದ ಜೋಗಿ, ಬಾಲಕೃಷ್ಣಕದ್ರಿ, ನಾಗೇಂದ್ರ ಚಿಲಿಂಬಿ, ಸತೀಶ್ ಜೋಗಿ ಮಾಲೆಮಾರ್, ವಿದ್ಯಾ ಗಣೇಶ್, ಶರತ್ ಕುಮಾರ್,ಜಗಜೀವನ್ ದಾಸ್,ಸುರೇಶ್ ಕುಮಾರ್, ನಾಗೇಶ್, ಗಣೇಶ್, ಕಾನೂನು ಸಲಹೆಗಾರರಾದ ಹರೀಶ್ ಎಸ್., ಮೋಹನ್, ಜಯಂತ್ ಜೋಗಿ, ದಯಾನಂದ ಜೋಗಿ, ಪ್ರಮಿತ್ ಜೋಗಿ ಮತ್ತಿತರ ಪದಾಧಿಕಾರಿಗಳು ಮತ್ತಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು