ಇತ್ತೀಚಿನ ಸುದ್ದಿ
ಇತಿಹಾಸದಲ್ಲೇ ದಾಖಲೆ ಮಳೆ: ಕಾಫಿನಾಡು ಚಿಕ್ಕಮಗಳೂರು ಕಂಗಾಲು; ಒಂದೇ ತಾಸಿನಲ್ಲಿ 200 ಮಿ.ಮೀ.ಗೂ ಅಧಿಕ ಮಳೆ
05/09/2022, 19:19
ಚಿಕ್ಕಮಗಳೂರು(reporterkarnataka.com): ಕೇವಲ ಒಂದು ತಾಸು ಸುರಿದ ರಕ್ಕಸ ಮಳೆಗೆ ಕಾಫಿನಾಡಿನ ಜನರು ತತ್ತರಿಸಿ ಹೋಗಿದ್ದಾರೆ. ಸಾರಗೋಡಿನಲ್ಲಿ ಒಂದೇ ಗಂಟೆಗೆ 200 ಮಿ.ಮೀ.ಗೂ ಅಧಿಕ ಮಳೆಯಾಗಿದೆ.
ಚಿಕ್ಕಮಗಳೂರು ಸಾರಗೋಡು, ಹುಯಿಗೆರೆ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಸಾರಗೋಡಿನಲ್ಲಿ ಒಂದೇ ಗಂಟೆಗೆ 200 ಮಿ.ಮೀ.ಗೂ ಅಧಿಕ ಮಳೆ ಸುರಿದಿದೆ.
ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ನೀರಿನ ರಭಸಕ್ಕೆ ಕಾಂಪೌಂಡ್ ಗಳು ಕುಸಿತಗೊಂಡಿವೆ. ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿಯುತ್ತಿದ್ದು, ಒಂದೇ ಗಂಟೆಗೆ ದಾಖಲೆ ಮಳೆ ಕಂಡು ಕಾಫಿನಾಡಿಗರು ಕಂಗಾಲಾಗಿದ್ದಾರೆ.