ಇತ್ತೀಚಿನ ಸುದ್ದಿ
ಐತಿಹಾಸಿಕ ಗುಜ್ಜರಕೆರೆ ಅತಿಕ್ರಮಣ ತೆರವಿಗೆ ಶೀಘ್ರದಲ್ಲೇ ಸರ್ವೆ: ಮೇಯರ್ ಪ್ರೇಮಾನಂದ ಶೆಟ್ಟಿ ಭರವಸೆ
02/06/2021, 06:52
ಮಂಗಳೂರು(reporterkarnataka news): ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಗುಜ್ಜರಕೆರೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಮೇಯರ್ ಪ್ರೇಮಾನಂದ ಶೆಟ್ಟಿ ಅವರು ನಡೆಸಿದರು.
ಈ ಸಂದರ್ಭ ಕೆರೆಯ ಭೂ ಅತಿಕ್ರಮಣ, ಕೆರೆಯ ಸುತ್ತಲು ಅಗತ್ಯಕ್ಕಿಂತ ಅಗಲ ಮಣ್ಣು ಹಾಕಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವ ಕುರಿತು ಸ್ಥಳೀಯರು ಮೇಯರ್ ಗಮನಕ್ಕೆ ತಂದರು. ಈ ಬಗ್ಗೆ ಎಂಜಿನಿಯರ್ ಅವರಿಂದ ಮಾಹಿತಿ ಪಡೆದ ಮೇಯರ್ ಅವರು ಆದಷ್ಟು ಶೀಘ್ರದಲ್ಲಿ ಕೆರೆಯ ಜಮೀನು ಸರ್ವೇ ಕಾರ್ಯ ನಡೆಸುವ ಕುರಿತಾಗಿ ಸ್ಥಳೀಯರಿಗೆ ಭರವಸೆ ನೀಡಿದರು.
ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಭಾನುಮತಿ ಪಿ.ಎಸ್. , ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಕುಮಾರ್ ಜೆಪ್ಪು, ಪ್ರಧಾನ ಕಾರ್ಯದರ್ಶಿ ಪಿ. ನೇಮು ಕೊಟ್ಟಾರಿ ಗುಜ್ಜರಕೆರೆ ಹಾಗೂ ಸ್ಥಳೀಯರಾದ ಮಾಧವ ಗುಜ್ಜರಕೆರೆ , ಉದಯ ಶಂಕರ್ ಇನ್ನಿತರರು ಉಪಸ್ಥಿತರಿದ್ದರು.