ಇತ್ತೀಚಿನ ಸುದ್ದಿ
ಚಿತ್ರದುರ್ಗ: ಇಸ್ರೋದಿಂದ ಮತ್ತೊಂದು ಮಹತ್ವದ ಸಾಧನೆ; ಪುಷ್ಪಕ್ ಆರ್ ಎಲ್ ವಿ ಯಶಸ್ವಿ ಲ್ಯಾಂಡಿಂಗ್; ಮರುಬಳಕೆ ಮಾಡಬಲ್ಲ ಲಾಂಚ್ ವೆಹಿಕಲ್ ಇದು!
24/06/2024, 18:01
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಚಂದ್ರಯಾನ ಯಶಸ್ವಿಯಾಗಿ ನಿರ್ವಹಿಸಿದ ಇಸ್ರೋ ಮತ್ತೊಂದು ಸಾಧನೆಯ ಮೈಲುಗಲ್ಲು ಸ್ಥಾಪಿಸಿದೆ. ಚಿತ್ರದುರ್ಗದಲ್ಲಿ ಮರುಬಳಕೆ ಮಾಡಬಲ್ಲ ಲಾಂಚ್ ವೆಹಿಕಲ್ ಪುಷ್ಪಕ್ ಆರ್ ಎಲ್ ವಿ ಲ್ಯಾಂಡಿಂಗ್ ಯಶಸ್ವಿಯಾಗಿ ಮಾಡಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ನಾಯಕನಹಟ್ಟಿ ಹೋಬಳಿಯ ಕುದಾಪುರ ಬಳಿ ಇರುವ ಡಿಆರ್ ಡಿಒ ಆವರಣದ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ನಡೆಸಲಾದ ಅಂತಿಮ ಪರೀಕ್ಷೆಯಲ್ಲಿ ಮರುಬಳಕೆ ಮಾಡಬಲ್ಲ ಲಾಂಚ್ ವೆಹಿಕಲ್ ಪುಷ್ಪಕ್ ಆರ್ ಎಲ್ ವಿ ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಪುಷ್ಪಕ್ ಬಳಸಿ ಉಪಗ್ರಹ ಉಡ್ಡಯನ ಮಾಡಲು ಸಾಧ್ಯವಾಗಲಿದೆ.
ಇಸ್ರೋ ವಿಜ್ಞಾನಿಗಳು ಇತ್ತೀಚೆಗೆ ಚಂದ್ರಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದರು. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತದ ನೌಕೆಯನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಲಾಗಿತ್ತು. ಇದೀಗ ಇಸ್ರೋ ಸೌರಯಾನ ನಡೆಸಿದ್ದು, ಸೂರ್ಯನ ಬಗ್ಗೆ ಅಧ್ಯಯನ ನಡೆಸುತ್ತಿದೆ.