2:04 PM Sunday12 - October 2025
ಬ್ರೇಕಿಂಗ್ ನ್ಯೂಸ್
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೃಷಿ ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;…

ಇತ್ತೀಚಿನ ಸುದ್ದಿ

ಐಪಿಎಲ್ ಹರಾಜು: ಸಚಿನ್ ಪುತ್ರ 30 ಲಕ್ಷಕ್ಕೆ ಬಿಕರಿ; ಖರೀದಿಯಾಗದೆ ಉಳಿದ ಸುರೇಶ್ ರೈನಾ

14/02/2022, 14:01

ಹೊಸದಿಲ್ಲಿ(reporterkarnataka.com): 2022ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂ.ಗೆ ಖರೀದಿ ಮಾಡಿದೆ.

ಆದರೆ 2008ರಿಂದ 2021ರವರೆಗೆ ಐಪಿಎಲ್ ನಲ್ಲಿದ್ದ ಖ್ಯಾತ ಆಟಗಾರ, ಚಿನ್ನ ತಲಾ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ ಅವರನ್ನು ಯಾವುದೇ ತಂಡಗಳೂ ಖರೀದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಮೆಲುಕುಹಾಕುತ್ತಿರುವ ಅವರ ಅಪಾರ ಪ್ರಮಾಣದ ಅಭಿಮಾನಿಗಳು, ಕಾಲ ಬದಲಾಗಲಿದೆ ಸಂತಸದಿಂದಿರಿ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ.

ಬಿಕರಿಯಾಗದ ಸುರೇಶ್ ರೈನಾ: ಅಭಿಮಾನಿಗಳಿಂದ ಟ್ವೀಟ್ ಪ್ರತಿಕ್ರಿಯೆ..?

ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.

ನೀವಿಲ್ಲದ ಈ ಬಾರಿಯ ಪಂದ್ಯಾವಳಿಯ ಇತಿಹಾಸ ಬರಿದಿರಲಿದೆ.

ನೀವಿಲ್ಲದೆ ಐಪಿಎಲ್ ಪೂರ್ತಿ ಎನಿಸಲ್ಲ, ಅಲಭ್ಯತೆ ನಂಬಲಾಗುತ್ತಿಲ್ಲ.

ಎಂದೆಂದಿಗೂ ನೀವೇ ನಮ್ಮ ಚಿನ್ನ ತಲಾ.2021ರಲ್ಲಿ ಸಿಎಸ್ ಕೆ ಗೆದ್ದರೆ ಎಂ.ಎಸ್.ಧೋನಿ ಅವರನ್ನು 2022ರಲ್ಲೂ ಆಡಿ ಎಂದು ಮನವೊಲಿಸುವೆ ಎಂದು ರೈನಾ ಹೇಳಿದ್ದರು. ಈಗ ಧೋನಿ ಆಟವಾಡಲಿದ್ದಾರೆ. ಆದರೆ ರೈನಾ ಅಲಭ್ಯರಾಗಿದ್ದಾರೆ. ಸಿಎಸ್ ಕೆ ಗೆ ಇದೆಂಥಾ ಆಘಾತ..?ಪ್ರಕ್ರಿಯೆಯಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡವು 30 ಲಕ್ಷ ರೂ.ಗೆ ಖರೀದಿ ಮಾಡಿದೆ.

ಆದರೆ 2008ರಿಂದ 2021ರವರೆಗೆ ಐಪಿಎಲ್ ನಲ್ಲಿದ್ದ ಖ್ಯಾತ ಆಟಗಾರ, ಚಿನ್ನ ತಲಾ ಎಂದೇ ಖ್ಯಾತಿ ಪಡೆದಿದ್ದ ಸುರೇಶ್ ರೈನಾ ಅವರನ್ನು ಯಾವುದೇ ತಂಡಗಳೂ ಖರೀದಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಾಧನೆಯನ್ನು ಮೆಲುಕುಹಾಕುತ್ತಿರುವ ಅವರ ಅಪಾರ ಪ್ರಮಾಣದ ಅಭಿಮಾನಿಗಳು, ಕಾಲ ಬದಲಾಗಲಿದೆ ಸಂತಸದಿಂದಿರಿ ಎಂದು ಅಭಿಮಾನದ ಮಾತುಗಳನ್ನಾಡಿದ್ದಾರೆ.

ಬಿಕರಿಯಾಗದ ಸುರೇಶ್ ರೈನಾ: ಅಭಿಮಾನಿಗಳಿಂದ ಟ್ವೀಟ್ ಪ್ರತಿಕ್ರಿಯೆ..?

ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ.

ನೀವಿಲ್ಲದ ಈ ಬಾರಿಯ ಪಂದ್ಯಾವಳಿಯ ಇತಿಹಾಸ ಬರಿದಿರಲಿದೆ.

ನೀವಿಲ್ಲದೆ ಐಪಿಎಲ್ ಪೂರ್ತಿ ಎನಿಸಲ್ಲ, ಅಲಭ್ಯತೆ ನಂಬಲಾಗುತ್ತಿಲ್ಲ.

ಎಂದೆಂದಿಗೂ ನೀವೇ ನಮ್ಮ ಚಿನ್ನ ತಲಾ.2021ರಲ್ಲಿ ಸಿಎಸ್ ಕೆ ಗೆದ್ದರೆ ಎಂ.ಎಸ್.ಧೋನಿ ಅವರನ್ನು 2022ರಲ್ಲೂ ಆಡಿ ಎಂದು ಮನವೊಲಿಸುವೆ ಎಂದು ರೈನಾ ಹೇಳಿದ್ದರು. ಈಗ ಧೋನಿ ಆಟವಾಡಲಿದ್ದಾರೆ. ಆದರೆ ರೈನಾ ಅಲಭ್ಯರಾಗಿದ್ದಾರೆ. ಸಿಎಸ್ ಕೆ ಗೆ ಇದೆಂಥಾ ಆಘಾತ..?

ಇತ್ತೀಚಿನ ಸುದ್ದಿ

ಜಾಹೀರಾತು