ಇತ್ತೀಚಿನ ಸುದ್ದಿ
ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಡ್ರೈವರ್ ಜತೆ ಲವ್: ಮಗಳಿಗೆ ಆಯ್ಕೆಯ ಸ್ವಾತಂತ್ರ್ಯವಿದೆ ಎಂದ ಹೈಕೋರ್ಟ್
15/06/2022, 09:44
ಮುಂಬೈ(reporterkarnataka.com): ಮಗಳು ವಯಸ್ಕಳಾಗಿರುವುದರಿಂದ ಆಯ್ಕೆಯ ಸ್ವಾತಂತ್ರ್ಯವಿದೆ. ಹೀಗಾಗಿ ಮಗಳನ್ನು ಪೋಷಕರ ಸುಪರ್ದಿಗೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ತಿರಸ್ಕರಿಸಿದೆ.
ಡ್ರೈವರ್ ಜೊತೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿ ಪುತ್ರಿಗಾಗಿ ತಂದೆ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು.
ಈ ಬಗ್ಗೆ ಹೈಕೋರ್ಟ್ ಚರ್ಚೆ ವಿಚಾರಣೆ ನಡೆಸಿ, ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ತಂದೆ-ತಾಯಿಯರಿದ್ದಾರೆ. ತಂದೆ-ತಾಯಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಮಕ್ಕಳಿದ್ದಾರೆ. ಪರಸ್ಪರ ಪ್ರೀತಿಯಿದ್ದರೆ ಇಂತಹ ಸ್ಥಿತಿ ಉದ್ಭವಿಸುವುದಿಲ್ಲ. ತಂದೆ ತಾಯಿಗಿಂತ ದೇವರಿಲ್ಲ, ಅವರ ಋಣ ತೀರಿಸಲಾಗಲ್ಲ ಎಂದು ಮನುಸ್ಮೃತಿಯಲ್ಲಿನ ವಾಕ್ಯವನ್ನು ಉಲ್ಲೇಖಿಸಿದೆ.
ಪ್ರೇಮ ಕುರುಡಾಗಿರುವುದರಿಂದ ಪೋಷಕರ ಪ್ರೀತಿ ಕಾಣುವುದಿಲ್ಲ. ಇಂದು ಹೆತ್ತವರಿಗೆ ಮಾಡಿದ್ದೇ ನಾಳೆ ಮಕ್ಕಳಿಗೂ ಆಗಬಹುದು ಎಂದು ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್.ಹೇಮಲೇಖಾರ ಪೀಠ ಅಭಿಪ್ರಾಯ ಪಟ್ಟಿದೆ.
ಮಗಳು ವಯಸ್ಕಳಾಗಿರುವುದರಿಂದ ಆಯ್ಕೆಯ ಸ್ವಾತಂತ್ರ್ಯವಿದೆ. ಹೀಗಾಗಿ ಮಗಳನ್ನು ಪೋಷಕರ ಸುಪರ್ದಿಗೆ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ತಿರಸ್ಕರಿಸಿದೆ.
ಇತ್ತ ಪೋಷಕರೊಂದಿಗೆ ತೆರಳಲು 19 ವರ್ಷದ ಮಗಳು ನಕಾರ ಮಾಡಿದ್ದು ವಯಸ್ಕಳಾಗಿರುವುದರಿಂದ ಪ್ರೀತಿಸಿ ವಿವಾಹವಾಗಿರುವುದಾಗಿ ಹೇಳಿದ್ದಾಳೆ. ಹಾಗೂ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಪ್ರಿಯಕರ ಕೂಡ ಕೋರ್ಟ್‌ಗೆ ಭರವಸೆ ನೀಡಿದ್ದಾನೆ.