12:46 AM Sunday6 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ

ಇತ್ತೀಚಿನ ಸುದ್ದಿ

ಇಂಧನ ಇಲಾಖೆಯಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಚಿಂತನೆ: PIAGGIO ಸಂಸ್ಥೆಯ ವಿದ್ಯುತ್ ಚಾಲಿತ‌ ತ್ರಿಚಕ್ರ ವಾಹನ‌ ಶೋ ರೂಂ ಉದ್ಘಾಟಿಸಿ ಸಚಿವ ಸುನಿಲ್ 

16/10/2021, 18:43

ಮಂಗಳೂರು(reporterkarnataka.com): ರಾಜ್ಯ ಸರಕಾರದ ಇಂಧನ ಇಲಾಖೆಯಲ್ಲಿ ಬಳಕೆ ಮಾಡುತ್ತಿರುವ ಸರ್ಕಾರಿ ವಾಹನಗಳು‌ ವಿದ್ಯುತ್ ಚಾಲಿತ ವಾಹನಗಳಾಗಬೇಕು‌ ಎನ್ನುವ ಚಿಂತನೆಯಿದೆ ಎಂದು ಇಂಧನ ಸಚಿವ ವಿ‌. ಸುನಿಲ್‌ ಕುಮಾರ್ ಹೇಳಿದರು.

ಅವರು ಶನಿವಾರ ನಗರದ ಪಂಪ್ ವೆಲ್ ಬಳಿ ನೂತನ PIAGGIO ಸಂಸ್ಥೆಯ ವಿದ್ಯುತ್ ಚಾಲಿತ‌ ತ್ರಿಚಕ್ರ ವಾಹನ‌ ಶೋ ರೂಂ ಉದ್ಘಾಟಿಸಿ ಮಾತನಾಡಿದರು.

ಇಂದು‌ ದೇಶಾದ್ಯಂತ ವಿದ್ಯುತ್ ‌ಚಾಲಿತ ವಾಹನ‌ಗಳ‌ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವೂ ಕೂಡ ಎಲ್ಲ ಹಂತದಲ್ಲಿ ವಿದ್ಯುತ್ ಚಾಲಿತ ವಾಹಗಳಿಗೆ ಹೆಚ್ಚಿನ ಒತ್ತು‌ ನೀಡುತ್ತಿದೆ‌ ಎಂದರು. ಪೆಟ್ರೋಲ್ ಹಾಗೂ ಡೀಸಲ್ ವಾಹನಗಳಿಂದಾಗಿ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ‌, ಬೆಲೆಯೂ ಹೆಚ್ಚು ಎನ್ನು‌ವ ಕೂಗುಗಳು ಕೇಳಿ ಬರುತ್ತವೆ. ಹೀಗಿರುವಾಗ ವಿದ್ಯುತ್ ಚಾಲಿತ ವಾಹನಗಳು ಇಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ.

ಇಂಧನ ಇಲಾಖೆ‌ ವಹಿಸಿಕೊಂಡ‌ ನಂತರ ವಿದ್ಯುತ್ ಚಾಲಿತ ವಾಹನ ತಯಾರಕ ಕಂಪನಿಗಳ‌ ಸಭೆ‌ ನಡೆಸಲಾಗಿತ್ತು. ವಿದ್ಯುತ್ ಚಾಲಿತ ವಾಹನಗಳು ಮುನ್ನಲೆಗೆ ಬರಬೇಕು, ಜನರು ಹೆಚ್ಚು ಆಕರ್ಷಿತರಾಗಬೇಕು. ಇಂದಿನ‌ ವ್ಯವಸ್ಥೆಯಿಂದ‌ ಸುಧಾರಣೆ ಹೊಂದಬೇಕೆಂದು.  ಪೆಟ್ರೋಲ್‌, ಡೀಸಲ್ ವಾಹನಗಳಿಂದ ವಿದ್ಯುತ್ ಚಾಲಿತ ವಾಹನಗಳ‌ ಕಡೆ‌ ಮುಖ ಮಾಡೋದು ಸುಧಾರಣೆಯ ಒಂದು ಭಾಗ, ಜನರು ಬದಲಾವಣೆ ಕಡೆಗೆ ಹೆಜ್ಜೆಯನ್ನ‌ ಇಡಬೇಕು ಎಂದರು.

ವಿದ್ಯುತ್ ಚಾಲಿತ ವಾಹನಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ೨೦-೪೦% ಸಬ್ಸಿಡಿ ನೀಡಲಾಗುತ್ತಿದೆ. ತ್ರಿಚಕ್ರ ವಾಹನಗಳಿಗೆ ಸುಮಾರು 60 ಸಾವಿರ ರೂ. ಸಬ್ಸಿಡಿ‌ ದೊರೆಯುವುದರಿಂದ ಗ್ರಾಹಕರಿಗೆ‌‌ ಹೆಚ್ಚಿನ‌ ಅನುಕೂಲವಾಗಲಿದೆ ಎಂದು‌ ಸಚಿವರು ಅಭಿಪ್ರಾಯ ಪಟ್ಟರು. 

ಇನ್ನು‌ ಇಲಾಖೆ ರಾಜ್ಯದ ವಿವಿಧ ಭಾಗಗಳಲ್ಲಿ ಒಂದು ಸಾವಿರ ವಿದ್ಯುತ್ ವಾಹನ‌ ಚಾರ್ಜಿಂಗ್ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.


ವಾಹನಗಳ ವಿಚಾರದಲ್ಲಿ ವಿದ್ಯುತ್ ವಾಹನಗಳು‌ ಮುಂದಿನ‌ ಭವಿಷ್ಯ,ಹಾಗಾಗಿ ಆ ನಿಟ್ಟಿನಲ್ಲಿ ಆಲೋಚನೆ‌ ಮಾಡಬೇಕಿದೆ. ವಿದ್ಯುತ್ ಚಾಲಿತ ವಾಹನಗಳ‌ ಬಳಕೆಗೆ ಉತ್ತೇಜನ‌ ಇಂಧನ ಇಲಾಖೆಯಿಂದಲೇ‌ ಆರಂಭವಾಗಲೆಂದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಳಸುವ ಸರ್ಕಾರಿ ವಾಹನಗಳು ವಿದ್ಯುತ್ ಚಾಲಿತ ವಾಹನಗಳಾಗಬೇಕು ಎನ್ನುವ ಚಿಂತನೆ‌ ಇದೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು