ಇತ್ತೀಚಿನ ಸುದ್ದಿ
ಮಂಗಳೂರು ವಿವಿ ಕಾಲೇಜಿನಲ್ಲಿ ‘ವಂದೇ ಮಾತರಂ ಹಾಡಿನ ಮಹತ್ವ’: ರಸ ಪ್ರಶ್ನೆ ಸ್ಪರ್ಧೆ
13/12/2025, 11:13
ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ವಂದೇಮಾತರಂ ಹಾಡಿನ ೧೫೦ ವರ್ಷ ಹಾಗೂ ಭಾಷಾ ದಿನದ ಪ್ರಯುಕ್ತ ಹಿಂದಿ ವಿಭಾಗ, ಭಾಷಾ ಸಂಘ, ಸಂಸ್ಕೃತ ಸಂಘ ಹಾಗೂ ಬರೋಡ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ನಗರದ ಹಂಪನಕಟ್ಟೆಯಲ್ಲಿರುವ ವಿವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ವಂದೇ ಮಾತರಂ ಹಾಡಿನ ಮಹತ್ವ ಅರಿವು ಮೂಡಿಸಲು ರಸ ಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.






ಬರೋಡಾ ಬ್ಯಾಂಕಿನ ಮುಖ್ಯ ಪ್ರಬಂಧಕ ಡಾ. ಬಾಲ ಮುರುಗನ್ ಉದ್ಘಾಟಿಸಿ, ಮಾತನಾಡಿ, ಮಹಾಕವಿ ಸುಬ್ರಮಣ್ಯ ಅವರು ಭಾರತೀಯವರ ಜೀವನದ ಪ್ರಮುಖ ವಿಚಾರಗಳನ್ನು ವಿವರಿಸಿದರು. ವಂದೇಮಾತರಂ ಬರೀ ಗೀತೆ ಅಲ್ಲ ಅದು ಭಾವ ಎಂದ ಅವರು ಈ ಗೀತೆಯನ್ನು ತಮಿಳಿನಲ್ಲಿ ಹಾಡಿ ವಿದ್ಯಾರ್ಥಿಗಳ ಗಮನ ಸೆಳೆದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ ವಹಿಸಿ ಮಾತನಾಡಿ, ವಂದೇ ಮಾತರಂ ಹಾಡಿನ ಮಹತ್ವವನ್ನು ತಿಳಿಸಿದ ಅವರು, ಜೀವನದುದ್ದಕ್ಕೂ ಗೌರವಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಕೃತ ವಿಭಾಗ ಮುಖ್ಯಸ್ಥ ಪ್ರೊ. ಕುಮಾರ ಸುಬ್ರಮಣ್ಯ ಭಟ್ ಉಪಸ್ಥಿತರಿದ್ದರು.
ಹಿಂದಿ ವಿಭಾಗ ಮುಖ್ಯಸ್ಥೆ ಪ್ರೊ. ಸುಮಾ ಟಿ.ಆರ್. ಸ್ವಾಗತಿಸಿ, ಉಪಾಧ್ಯಕ್ಷೆ ಪ್ರೊ. ನಾಗರತ್ನ ಎನ್. ರಾವ್ ವಂದಿಸಿದರು. ದ್ವಿತೀಯ ಬಿ.ಎ ವಿದ್ಯಾರ್ಥಿನಿ ರೆಯೋನ ಕಾರ್ಯಕ್ರಮ ನಿರೂಪಿಸಿದರು.
೩೫ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.












