8:01 PM Saturday6 - September 2025
ಬ್ರೇಕಿಂಗ್ ನ್ಯೂಸ್
ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ… ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5… ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ Mysore | ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಬಾನು ಮಸ್ತಾಕ್… ಜಿಎಸ್ ಟಿ ಸರಳೀಕರಣ ಗ್ರಾಹಕ ಸ್ನೇಹಿ ತೀರ್ಮಾನ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತದ ಭೀತಿ: ಸೆ. 14ವರೆಗೆ ಪ್ರವಾಸ ಮುಂದೂಡುವಂತೆ… ದಾವಣಗೆರೆಯಲ್ಲಿ ಎಸ್‌ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗದ “ಆರಂಭ”ಕ್ಕೆ ಚಾಲನೆ ಅಕ್ರಮ ಮಾದಕ ವಸ್ತು ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್: 2… ಸೌಜನ್ಯ ಪ್ರಕರಣ | ಸುಪ್ರೀಂಕೋರ್ಟ್ ಮೊರೆ ಹೋದರೆ ಸಂಪೂರ್ಣ ಬೆಂಬಲ: ಬಿಜೆಪಿ ರಾಜ್ಯಾಧ್ಯಕ್ಷ…

ಇತ್ತೀಚಿನ ಸುದ್ದಿ

IMF | ಅಂತಾರಾಷ್ಟ್ರೀಯ ಹಣಕಾಸು ನಿಧಿ ನಿಯೋಗದಿಂದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಭೇಟಿ

06/09/2025, 19:52

ಬೆಂಗಳೂರು(reporterkarnataka.com): ಭಾರತಕ್ಕೆ ಭೇಟಿ ನೀಡಿರುವ ವಾಷಿಂಗ್ಟನ್ ಡಿಸಿ ಯ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ನಿಯೋಗದ ತಂಡವು ವಾರ್ಷಿಕ ಆರ್ಟಿಕಲ್ IV ಸಮಾಲೋಚನೆಯ ಭಾಗವಾಗಿ ಇಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿತು.

ಈ ಅಂತಾರಾಷ್ಟ್ರೀಯ ಹಣಕಾಸು ನಿಧಿ ನಿಯೋಗ ತಂಡವು ಸ್ಥೂಲ ಆರ್ಥಿಕ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವುದರೊಂದಿಗೆ ಹಣಕಾಸು ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಇತರ ಸರ್ಕಾರಿ ಅಧಿಕಾರಿಗಳಿಗೆ ನೀತಿ ಸಲಹೆಗಳನ್ನು ನೀಡುತ್ತದೆ.
ರಾಜ್ಯದಲ್ಲಿ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವುದು, ಹಣಕಾಸಿನ ಸುಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು ಮಾನವ ಬಂಡವಾಳವನ್ನು ಬಲಪಡಿಸುವುದರೊಂದಿಗೆ, ಹವಾಮಾನ ಕೇಂದ್ರಿತ ನೀತಿಗಳನ್ನು ಮುಂದುವರಿಸುವ ಕುರಿತು ರಚನಾತ್ಮಕ ಸವಾಲುಗಳನ್ನು ಗುರಿಯಾಗಿರಿಸಿಕೊಂಡು ರಾಜ್ಯ ಮಟ್ಟದ ಉಪಕ್ರಮಗಳ ಬಗ್ಗೆ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ಸಹ ಹಾಜರಿದ್ದರು.
ಅಂತಾರಾಷ್ಟ್ರೀಯ ಹಣಕಾಸು ನಿಧಿ ನಿಯೋಗ ತಂಡದಲ್ಲಿ ಸಹಾಯಕ ನಿರ್ದೇಶಕ ಮತ್ತು ಮಿಷನ್ ಮುಖ್ಯಸ್ಥರಾದ ಹೆರಾಲ್ಡ್ ಫಿಂಗರ್ ಅವರೊಂದಿಗೆ ಭಾರತದ ಹಿರಿಯ ನಿವಾಸಿ ಪ್ರತಿನಿಧಿ ರನಿಲ್ ಸಲ್ಗಾಡೊ, ಏಷ್ಯಾ ಮತ್ತು ಪೆಸಿಫಿಕ್ ಇಲಾಖೆಯ ಹಿರಿಯ ಅರ್ಥಶಾಸ್ತ್ರಜ್ಞೆ ನುಜಿನ್ ಸುಫಾಫಿಫಟ್ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ನಿಯೋಗದ (IMF) ಅರ್ಥಶಾಸ್ತ್ರಜ್ಞೆ ಗೀತಿಕಾ ಡ್ಯಾಂಗ್ ಹಾಜರಿದ್ದರು.

*International Monetary Fund (IMF) delegation meets Chief Secretary Dr.Shalini Rajaneesh*

Bengaluru (reporterkarnataka.com): An International Monetary Fund (IMF) mission team from Washington DC visiting India as part of the annual Article IV consultations, met Dr. Shalini Rajneesh, Chief Secretary, Government of Karnataka on 06.09.2025. The visiting IMF team closely monitors macroeconomic developments and provides policy advice to the Ministry of Finance, the Reserve Bank of India and other government authorities.

A discussion was held with the Chief Secretary, Government of Karnataka, in which the Smt. Uma Mahadevan, Additional Chief Secretary and Development Commissioner, Government of Karnataka, was also present. The discussions covered state level initiatives aimed at attracting investment, maintaining fiscal sustainability, and structural challenges from strengthening human capital to advancing climate focused policies.

Mr Harald Finger, Assistant Director and Mission Chief was accompanied by Mr Ranil Salgado, Senior Resident Representative for India, Ms Nujin Suphaphiphat, Senior Economist, Asia and Pacific Department and Ms Geetika Dang, Economist, IMF.
#imf
#karnatakachiefsecretary
#karnatakagovt
#shalinirajanish

ಇತ್ತೀಚಿನ ಸುದ್ದಿ

ಜಾಹೀರಾತು