ಇತ್ತೀಚಿನ ಸುದ್ದಿ
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 51.25 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ
19/04/2025, 21:52

ಬೆಂಗಳೂರು (reporterkarnataka.com): ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ.51.25 ಕೋಟಿ ಅಂದಾಜು ಮೌಲ್ಯದ ಒಟ್ಟು 13 ಎಕರೆ 0.26 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ವಶಕ್ಕೆ ಪಡೆಯಲಾಯಿತು.
ಇಂದು ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ಹದ್ದುಗಿಡದಹಳ್ಳ, ಮುಫತ್ ಕಾವಲ್, ಸರ್ಕಾರಿ ಕುಂಟೆ, ಶ್ರೀಬಸವಣ್ಣ ದೇವರ ಇನಾಂ, ಗುಂಡು ತೋಪು, ಸರ್ಕಾರಿ ಬೀಳು, ಸರ್ಕಾರಿ ಖರಾಬು ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಹೋಬಳಿಯ ಹಗದೂರು ಗ್ರಾಮದ ಸ.ನಂ 159ರ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆಯಾಗಿದ್ದು, ಅಂದಾಜು ಮೌಲ್ಯ ರೂ 10.00 ಕೋಟಿಗಳಾಗಿರುತ್ತದೆ. ಬಿದರಹಳ್ಳಿ ಹೋಬಳಿಯ ಶೀಗೆಹಳ್ಳಿ ಗ್ರಾಮದ ಸ.ನಂ: 30, 31 ಮತ್ತು 45 ರ ಹದ್ದುಗಿಡದಹಳ್ಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.50 ಕೋಟಿಗಳಾಗಿರುತ್ತದೆ. ಬಿದರಹಳ್ಳಿ ಹೋಬಳಿಯ ಕಿತ್ತಗನೂರು ಗ್ರಾಮದ ಸ.ನಂ: 165 ರ ಮುಫತ್ ಕಾವಲ್ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.10 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.70 ಕೋಟಿಗಳಾಗಿರುತ್ತದೆ. ವರ್ತೂರು ಹೋಬಳಿಯ ಕೈಕೊಂಡ್ರಹಳ್ಳಿ ಗ್ರಾಮದ ಸ.ನಂ: 6 ರ ಗುಂಡು ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.01 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.20 ಕೋಟಿಗಳಾಗಿರುತ್ತದೆ.
ಆನೇಕಲ್ ತಾಲ್ಲೂಕಿನ ಕಸಬಾ-1 ಹೋಬಳಿಯ ಮೆಣಸಿಗನಹಳ್ಳಿ ಗ್ರಾಮದ ಸ.ನಂ 111ರ ಗುಂಡು ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.20 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.30 ಕೋಟಿಗಳಾಗಿರುತ್ತದೆ. ಅತ್ತಿಬೆಲೆ-1 ಹೋಬಳಿಯ ಹಳೇಹಳ್ಳಿ ಗ್ರಾಮದ ಸ.ನಂ 52ರ ಸರ್ಕಾರಿ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.04 ಗುಂಟೆಗಳಾಗಿದ್ದು,ಅಂದಾಜು ಮೌಲ್ಯ ರೂ 0.05 ಕೋಟಿಗಳಾಗಿರುತ್ತದೆ. ಸರ್ಜಾಪುರ-2 ಹೋಬಳಿಯ ಮುತ್ತಾನಲ್ಲೂರು ಗ್ರಾಮದ ಸ.ನಂ 132,129,128,127,124,117 ಮತ್ತು 118 ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 0.13 ಕೋಟಿಗಳಾಗಿರುತ್ತದೆ. ಸರ್ಜಾಪುರ-3 ಹೋಬಳಿಯ ನರಿಗಾ ಗ್ರಾಮದ ಸ.ನಂ 211ರ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.10 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 0.15 ಕೋಟಿಗಳಾಗಿರುತ್ತದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಮಾದಾಪಟ್ಟಣ ಗ್ರಾಮದ ಸ.ನಂ 32ರ ಶ್ರೀಬಸವಣ್ಣ ದೇವರ ಇನಾಂ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 2.40 ಕೋಟಿಗಳಾಗಿರುತ್ತದೆ. ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸ.ನಂ 21ರ ಗುಂಡು ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.01 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.30 ಕೋಟಿಗಳಾಗಿರುತ್ತದೆ. ಉತ್ತರಹಳ್ಳಿ ಹೋಬಳಿಯ ರಾವುಗೋಡ್ಲು ಗ್ರಾಮದ ಸ.ನಂ 8ರ ಗುಂಡು ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.18 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.70 ಕೋಟಿಗಳಾಗಿರುತ್ತದೆ. ಕೆಂಗೇರಿ ಹೋಬಳಿಯ ಕಂಬೀಪುರ ಗ್ರಾಮದ ಸ.ನಂ 151ರ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.21ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 1.00 ಕೋಟಿಗಳಾಗಿರುತ್ತದೆ.
ಯಲಹಂಕ ತಾಲ್ಲೂಕಿನ ಜಾಲ-3 ಹೋಬಳಿಯ ಬಿ.ಕೆ.ಅಮಾನಿಕರೆ ಗ್ರಾಮದ ಸ.ನಂ 2ರ ಸರ್ಕಾರಿ ಬೀಳು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1ಎಕರೆ 0.07 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 5.00 ಕೋಟಿಗಳಾಗಿರುತ್ತದೆ. ಜಾಲ-1 ಹೋಬಳಿಯ ಹುತ್ತನಹಳ್ಳಿ ಗ್ರಾಮದ ಸ.ನಂ. 73ರ ಒಟ್ಟು ಒತ್ತುವರಿ ತೆರವುಗೊಳಿಸಿರುವ 1 ಎಕರೆಯಾಗಿದ್ದು, ಅಂದಾಜು ಮೌಲ್ಯ ರೂ 2.20 ಕೋಟಿಗಳಾಗಿರುತ್ತದೆ. ಹೆಸರುಘಟ್ಟ-2 ಹೋಬಳಿಯ ಕಾಮಾಕ್ಷಿಪುರ ಗ್ರಾಮದ ಸ.ನಂ. 10 ರ ಗುಂಡು ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.15 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 1.25 ಕೋಟಿಗಳಾಗಿರುತ್ತದೆ.
ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಕಡಬಗೆರೆ ಗ್ರಾಮದ ಸ.ನಂ 22ರ ಸರ್ಕಾರಿ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.30 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 3.00 ಕೋಟಿಗಳಾಗಿರುತ್ತದೆ. ದಾಸನಪುರ ಹೋಬಳಿಯ ಕದರನಹಳ್ಳಿ ಗ್ರಾಮದ ಸ.ನಂ 38 ಸರ್ಕಾರಿ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 3 ಎಕರೆ 0.36 ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 20.00 ಕೋಟಿಗಳಾಗಿರುತ್ತದೆ. ದಾಸನಪುರ ಹೋಬಳಿಯ ಕುಕ್ಕನಹಳ್ಳಿ ಗ್ರಾಮದ ಸ.ನಂ 40ರ ಸರ್ಕಾರಿ ಬೀಳು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆ 0.12ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 1.50 ಕೋಟಿಗಳಾಗಿರುತ್ತದೆ. ದಾಸನಪುರ ಹೋಬಳಿಯ ಕುಕ್ಕನಹಳ್ಳಿ ಗ್ರಾಮದ ಸ.ನಂ 51ರ ಸರ್ಕಾರಿ ಬೀಳು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆ 0.15ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 1.50 ಕೋಟಿಗಳಾಗಿರುತ್ತದೆ. ದಾಸನಪುರ ಹೋಬಳಿಯ ಗಟ್ಟಿಸಿದ್ದನಹಳ್ಳಿ ಗ್ರಾಮದ ಸ.ನಂ 16ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05ಗುಂಟೆಗಳಾಗಿದ್ದು ಅಂದಾಜು ಮೌಲ್ಯ ರೂ 0.25 ಕೋಟಿಗಳಾಗಿರುತ್ತದೆ. ದಾಸನಪುರ ಹೋಬಳಿಯ ಗಟ್ಟಿಸಿದ್ದನಹಳ್ಳಿ ಗ್ರಾಮದ ಸ.ನಂ 17ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.03ಗುಂಟೆಗಳಾಗಿದ್ದು,ಅಂದಾಜು ಮೌಲ್ಯ ರೂ 0.12 ಕೋಟಿಗಳಾಗಿರುತ್ತದೆ.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕರು ಮತ್ತು ಬೆಂಗಳೂರು ನಗರ ಜಿಲ್ಲೆಯ ವಿವಿಧ ತಾಲ್ಲೂಕಿನ ತಹಶೀಲ್ದಾರ್ ರವರು ಉಪಸ್ಥಿತರಿದ್ದರು.