ಇತ್ತೀಚಿನ ಸುದ್ದಿ
ಐಕ್ಯತಾ ಸಪ್ತಾಹ: ಎಸ್ ಡಿಎಂ ಬಿಸ್ನೆಸ್ ಮ್ಯಾನೇಜ್ಮೆಂಟ್ ಕಾಲೇಜಿನ ಎನ್ನೆಸ್ಸೆಸ್ ನಿಂದ ಸುಲ್ತಾನ್ ಬತ್ತೇರಿ ಸಮುದ್ರ ತೀರ ಸ್ವಚ್ಛತೆ
20/11/2022, 23:40
ಮಂಗಳೂರು(reporterkarnataka.com): ಐಕ್ಯತ ಸಪ್ತಾಹ ಪ್ರಯುಕ್ತ ಮಂಗಳೂರಿನ ಎಸ್.ಡಿ.ಎಂ. ಬಿಸ್ನೆಸ್ ಮ್ಯಾನೇಜ್ಮೆಂಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕ ಸೇವಕಿಯರಿಂದ ಇಂದು ನಗರದ ಸುಲ್ತಾನ್ ಬತ್ತೇರಿ ಸಮುದ್ರ ತೀರವನ್ನು ಸ್ವಚ್ಛಗೊಳಿಸಿದರು.
ಸುಮಾರು 70 ಸ್ವಯಂ ಸೇವಕ ಸೇವಕಿಯರು ಈ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.ವಿಶೇಷ ಎಂದರೆ ರಜಾ ದಿನವಾದ ಇಂದು ಭಾನುವಾರ ಎಂದು ಲೆಕ್ಕಿಸದೆ ಸ್ವಯಂ ಸೇವಕ ಸೇವಕಿಯರು.70 ಸ್ವಯಂ ಸೇವಕಿಯರನ್ನು ಒಳಗೊಂಡ ಟೀಮ್ ಸಮುದ್ರ ತೀರಾವನ್ನು ಸ್ವಚ್ಛ ಗೊಳಿಸಿದ ವಿದ್ಯಾರ್ಥಿಗಳ ಕಾರ್ಯ ಮೆಚ್ಚುವಂತ್ತದ್ದು . ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿ ಸಂಜನಾ, ಅಕ್ಷಿತ್ ಸ್ವಯಂ ಸೇವಕಿಯರಿಗೆ ಸಾಥ್ ನೀಡಿದ್ದರು.