ಇತ್ತೀಚಿನ ಸುದ್ದಿ
ಹಣಕ್ಕಾಗಿ ಪರ ಪುರುಷರ ಜತೆ ದೈಹಿಕ ಸಂಪರ್ಕ ನಡೆಸುವಂತೆ ಪತಿಯಿಂದಲೇ ಒತ್ತಾಯ: ಕಾನ್ಸ್‌ಸ್ಟೇಬಲ್ ಅಂದರ್
17/07/2025, 10:33

ಮಂಗಳೂರು(reporterkarnataka.com): ಹಣಕ್ಕಾಗಿ ಪರ ಪುರುಷರ ಜತೆ ದೈಹಿಕ ಸಂಪರ್ಕ ನಡೆಸುವಂತೆ ಸ್ವಂತ ಪತಿಯೇ ಪತ್ನಿಯನ್ನು ಒತ್ತಾಯಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆಘಾತಕ್ಕಾರಿ ವಿಷಯವೊಂದು ನಡೆದಿದೆ.
ಬೇರೆಯವರ ಜೊತೆಗಿದ್ದ ಪತ್ನಿಯ ಖಾಸಗಿ ವೀಡಿಯೋ ಸೆರೆ ಹಿಡಿದು, ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹತ್ತಾರು ಜನರ ಜೊತೆ ದೈಹಿಕ ಒತ್ತಾಯಿಸುತ್ತಿದ್ದ ಘಟನೆಯೊಂದು ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಂಕನಾಡಿ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ಜು.೧೫ರಂದು ಹಾಜರಾಗಿ ಲಿಖಿತ ದೂರು ನೀಡಿದ್ದಾರೆ.
ತನ್ನ ಗಂಡನು ಹಣಕ್ಕಾಗಿ ಒತ್ತಾಯಪೂರ್ವಕವಾಗಿ ಬೇರೊಬ್ಬ ಪುರುಷನೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಮಾಡಿ, ಅದರ ವಿಡಿಯೋವನ್ನು ಚಿತ್ರೀಕರಣ ಮಾಡಿ, ಇತರರೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಇಲ್ಲವಾದಲ್ಲಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯ ಬಿಡುವುದಾಗಿ ಬೆದರಿಸುತ್ತಿದ್ದ, ಸಂತ್ರಸ್ತ ಮಹಿಳೆಯು ತನಗೆ ಪರಿಚಯವಿರುವ ಕಾವೂರು ಪೊಲೀಸ್ ಠಾಣೆಯ ಕಾನ್ಸ್‌ಸ್ಟೇಬಲ್ ಚಂದ್ರನಾಯ್ಕ್‌ನಿಗೆ ಈ ಬಗ್ಗೆ ತಿಳಿಸಿದಾಗ, ಚಂದ್ರನಾಯ್ಕ್‌ನು ಸಂತ್ರಸ್ತೆಯ ಮನೆಗೆ ಹೋಗಿ ಗಂಡನ ಮೊಬೈಲ್ ಲ್ಲಿದ್ದ ಪೋಟೋ ಮತ್ತು ವಿಡಿಯೋವನ್ನು ಅಳಿಸಿದ್ದಾನೆ. ನಂತರ ಸಂತ್ರಸ್ತೆಯ ಗಂಡನ ದುಷ್ಪ್ರೇರಣೆಯಂತೆ ಚಂದ್ರನಾಯ್ಕ್‌ನು ಸಂತ್ರಸ್ತ ಮಹಿಳೆಯ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತೆಯ ದೂರಿನ ಹಿನ್ನಲೆಯಲ್ಲಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆಯ ಗಂಡ ಮತ್ತು ಕಾವೂರು ಠಾಣಾ ಪೊಲೀಸ್ ಕಾನ್ಸ್‌ಸ್ಟೇಬಲ್ ಚಂದ್ರನಾಯ್ಕ್‌ನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ.