4:11 AM Wednesday27 - August 2025
ಬ್ರೇಕಿಂಗ್ ನ್ಯೂಸ್
ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು

ಇತ್ತೀಚಿನ ಸುದ್ದಿ

ಹರ್ ಘರ್ ತಿರಂಗ: ರುಡ್ ಸೆಟ್ ನಲ್ಲಿ ಭರದಿಂದ ಸಾಗಿದ ರಾಷ್ಟ್ರಧ್ವಜ ಸಿದ್ದಪಡಿಸುವ ಕಾರ್ಯ

23/07/2022, 12:04

ಮಂಗಳೂರು(reporterkarnataka.com): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್ 11 ರಿಂದ 17 ರವರೆಗೆ ಹಮ್ಮಿಕೊಂಡಿರುವ ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ದೇಶದ ಮನೆ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ, ರಾಷ್ಟ್ರಪ್ರೇಮ ಅಭಿವ್ಯಕ್ತಗೊಳಿಸಲು ಅನುಕೂಲವಾಗುವಂತೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್  ರಾಷ್ಟ್ರಧ್ವಜ ಹೊಲಿದು ಸಿದ್ದಪಡಿಸಿ ನೀಡುವಂತೆ ಜಿಲ್ಲೆಯ ಸಂಜೀವಿನಿ ಗ್ರಾಮ ಪಂಚಾಯತ್ ಮತ್ತು ಅದರ ಒಕ್ಕೂಟಗಳಿಗೆ ಆದೇಶ ನೀಡಿದೆ.

ಈ ನಿಟ್ಟಿನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಸಿದ್ಧಪಡಿಸಲು ಅನುಕೂಲವಾಗುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ರುಡ್ ಸೆಟ್ ನಲ್ಲಿ ಮಹಿಳಾ ಸ್ವ ಸಹಾಯ ಸಂಘದ 62 ಸದಸ್ಯರಿಗೆ ಧ್ವಜ ಸಂಹಿತೆಯನ್ನು ತಿಳಿಸಿಕೊಟ್ಟು, ರಾಷ್ಟ್ರಧ್ವಜವನ್ನು ಹೊಲಿಯುವ ತರಬೇತಿ ಕಾರ್ಯಕ್ರಮವನ್ನು ಜುಲೈ 22ರ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. 

ಹೊಲಿಗೆಯನ್ನು ತಿಳಿದಿರುವ 62 ಮಹಿಳೆಯರಿಗೆ ಧ್ವಜ ಸಿದ್ದಪಡಿಸಲು ಉಡುಪಿಯಿಂದ ಸಂಪನ್ಮೂಲ ವ್ಯಕ್ತಿಯೊಬ್ಬರನ್ನು ನಿಯೋಜಿಸಲಾಗಿತ್ತು. ಅವರು ಮೊದಲಿಗೆ ಧ್ವಜ ಸಂಹಿತೆಯನ್ನು ತಿಳಿಸಿ, ಧ್ವಜವನ್ನು ಸಿದ್ಧಪಡಿಸುವ ತರಬೇತಿ ನೀಡಿದರು.

ರಾಷ್ಟ್ರಧ್ವಜ ಸಿದ್ಧಪಡಿಸಲು ಅಗತ್ಯವಿರುವ ಸಾಮಗ್ರಿಗಳನ್ನು ಜಿಲ್ಲೆಯಿಂದಲೇ ಖರೀದಿಸಿ ನೀಡಲಾಗಿತ್ತು. ಧ್ವಜವನ್ನು ಹೊಲಿದ ನಂತರ ಸ್ಕ್ರಿನ್ ಪ್ರಿಂಟ್ ಮೂಲಕ ಮಧ್ಯ ಭಾಗದಲ್ಲಿ ಅಶೋಕ ಚಕ್ರವನ್ನು ಮುದ್ರಿಸಲಾಗುವುದು.

ಇಲ್ಲಿ ತರಬೇತಿ ಪಡೆದ ಮಹಿಳೆಯರು, ವಿವಿಧ ಗ್ರಾಮ ಪಂಚಾಯತ್ ಗಳು ಹಾಗೂ ಮನೆಗಳಲ್ಲಿಯೂ ಧ್ವಜಗಳನ್ನು ಹೊಲಿದು, ಸಿದ್ಧಪಡಿಸಿ ಸಂಜೀವಿನಿ ಒಕ್ಕೂಟಗಳ ಮೂಲಕ ಅವುಗಳನ್ನು ಮಾರಾಟ ಕೇಂದ್ರಕ್ಕೆ ತಲುಪಿಸಲಿದ್ದಾರೆ.

ಸುಳ್ಯ ತಾಲೂಕಿನ ಆರಂತೋಡು ಗ್ರಾಮ ಪಂಚಾಯಿತಲ್ಲೇ ಈಗಾಗಲೇ 1,500 ದ್ವಜ ಸಿದ್ಧಪಡಿಸಲು ಆದೇಶ ನೀಡಲಾಗಿದ್ದು ಅದರಲ್ಲಿ 150 ಈಗಾಗಲೇ ಸಿದ್ಧಗೊಂಡಿದೆ, ಸುಳ್ಯದ ಜಾಲಸೂರು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲೂ ಕೂಡ ಧ್ವಜ ಸಿದ್ಧಪಡಿಸುವ ಕಾರ್ಯ ಬರದಿಂದ ಸಾಗಿದೆ.

2021ರಲ್ಲಿ ತರಲಾದ ತಿದ್ದುಪಡಿ ಪ್ರಕಾರ ರಾಷ್ಟ್ರ ಧ್ವಜವನ್ನು ಹತ್ತಿ, ರೇಷ್ಮೆ ಹಾಗೂ ಪಾಲಿಸ್ಟರ್ ಬಟ್ಟೆಯಲ್ಲಿ ಧ್ವಜವನ್ನು ಸಿದ್ಧಪಡಿಸಬಹುದಾಗಿದೆ.

ಧ್ವಜವನ್ನು ಸಿದ್ಧಪಡಿಸಲು ಅಗತ್ಯವಿರುವ ಕಚ್ಚಾ ವಸ್ತುವನ್ನು ಮಂಗಳೂರಿನ ಸೌರಾಷ್ಟ್ರ ಹಾಗೂ ಸ್ಕೂಲ್ ಬುಕ್ ಕಂಪೆನಿಗಳಿಂದ ಖರೀದಿಸಲಾಗುತ್ತಿದೆ ಹಾಗೂ ಬೆಂಗಳೂರಿನಲ್ಲಿಯೂ ಖರೀದಿಸಿ ತರಲಾಗುತ್ತಿದೆ, ಇದೀಗ ಸಿದ್ದ ಪಡಿಸುತ್ತಿರುವ ಹತ್ತಿ ಬಟ್ಟೆಯ ಧ್ವಜಕ್ಕೆ 60 ರೂಪಾಯಿ ಹಾಗೂ ಪಾಲಿಸ್ಟರ್ ಧ್ವಜಕ್ಕೆ 35 ರೂ.ಗಳಾಗಲಿದ್ದು,  ಅವುಗಳನ್ನು 30×20 ಹಾಗೂ 16×24 ಹಾಗೂ 6 x9 ಇಂಚುಗಳ ಅಳತೆಯಲ್ಲಿ ಹೊಲಿಯಲಾಗುತ್ತಿದೆ ಎಂದು ಎನ್ ಆರ್ ಎಲ್ ಎಂ ನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ತಿಳಿಸುತ್ತಾರೆ.

ರುಡ್ ಸೆಟ್ ನಿರ್ದೇಶಕರಾದ ಸುರೇಶ್ ಕೆ.ಎಂ., ಎನ್.ಆರ್.ಎಲ್.ಎಂ. ವಲಯ ಮೇಲ್ವಿಚಾರಕ ಜಯಾನಂದ್ ಹಾಗೂ ಸಂಪನ್ಮೂಲ ವ್ಯಕ್ತಿ ವೀಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು