ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ತೀವ್ರಗೊಂಡ ಆನೆ ಮಾನವ ಸಂಘರ್ಷ | ಮಾಜಿ ಶಾಸಕರ ವಿರುದ್ಧ ಹಾಲಿ ಶಾಸಕರ ಆಕ್ರೋಶ
22/03/2026, 08:48
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಬಿಜೆಪಿ ಮಾಜಿ ಶಾಸಕರು ರಸ್ತೆ ತಡೆ ಮಾಡಿ ಅರಣ್ಯ ಸಚಿವರ ಬಗ್ಗೆ ಕೀಳಾಗಿ ಮಾತಾಡಿದ್ದಾರೆ.
ಸಾವಿನ ಮೇಲೆ ಬಿಜೆಪಿ ರಾಜಕೀಯ ಮಾಡುತ್ತಿದೆ.
ಯಾರೇ ಸಾವನ್ನಪ್ಪಿದ್ರು ನನಗೆ ಕುಟುಂಬ ಸದಸ್ಯರನ್ನು ಕಳೆದುಕೊಂಡಷ್ಟು ಬೇಜಾರಾಗುತ್ತದೆ. 25 ವರ್ಷಗಳಿಂದ ಬಿಜೆಪಿ ಕೊಡಗಿನಲ್ಲಿ ಅಧಿಕಾರದಲ್ಲಿದ್ದಾಗ ಆನೆ ಮಾನವ ಸಂಘರ್ಷ ಆಗಿಲ್ಲವೆ?ನನ್ನ ಬಳಿ ಅದಕ್ಕೆದಾಖಲೆ ಇದೆ.
ಅವರು ಸತ್ತಾಗ ಆಗ ಶಾಸಕರಾಗಿದ್ದವರು ಏನು ಮಾಡಿದರು. ಆವಾಗಿನ ಅರಣ್ಯ ಸಚಿವರು ಯಾವ ಝೂನಲ್ಲಿರಬೇಕು? ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ. ಎಸ್ ಪೊನ್ನಣ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬಜೆಟ್ ನಂತರ ಕೊಡಗು ಜಿಲ್ಲೆಯ ತಮ್ಮ ವಿರಾಜಪೇಟೆ ಕ್ಷೇತ್ರ ಪ್ರವಾಸದಲ್ಲಿರುವ ಎ ಎಸ್ ಪೊನ್ನಣ್ಣ ಮಡಿಕೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಕೊಡಗಿನಲ್ಲಿ ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಯಾವತ್ತೂ ಈ ರೀತಿ ಯಾಗಿ ವರ್ತಿಸಿರಲಿಲ್ಲ.
ಅವರಿಗೆ ನಾನು ನೇರವಾಗಿ ಪ್ರಶ್ನೆ ಮಾಡ್ತೇನೆ. ಇವರ ಅವಧಿಯಲ್ಲಿ ಸಾವು ಸಂಭವಿಸಿದಾಗ ಏನು ಮಾಡಿದರು ಎಂಬುದನ್ನು ತಿಳಿಸಲಿ. ನಾವೂ ಅದನ್ನೇ ಮಾಡುತ್ತೇವೆ.ಎಲ್ಲರೂ ಸಕಾರಾತ್ಮಕ ವಾಗಿ ಸ್ಪಂದಿಸಿ,ನಮ್ಮಜೊತೆ ಕೈ ಜೋಡಿಸಿ ಇವತ್ತಿನ ಸಂಘರ್ಷ ಕ್ಕೆ ಕಾಂಗ್ರೆಸ್ ಕಾರಣನಾ?
ಅರಣ್ಯದ ವಿಚಾರದಲ್ಲಿ ಕೇಂದ್ರದ್ದೂ ಹೊಣೆಗಾರಿಕೆ ಇದೆ.ಕೇಂದ್ರದಲ್ಲಿ ಅರಣ್ಯ ಸಚಿವರಿದ್ದಾರೆ. ಅವರು ಕೇವಲ ಷೋ ಮಾಡಲು ಇರುವುದಾ? ಇವರ ಸರ್ಕಾರ ಬಂದು 12 ವರ್ಷ ಆಯ್ತು.
ಕೇಂದ್ರ ಪ್ರಾಯೋಜಿತ ಯೋಜನೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ. ಇದನ್ನ ಮಾಜಿ ಸ್ಪೀಕರ್ ಬಿಡುಗಡೆ ಮಾಡಲಿ ಎಂದು ಕೆ. ಜಿ ಬೋಪಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇರಳಕ್ಕೆ ಅತಿಹೆಚ್ಚು ಅನುದಾನ ಹೋಗಿದೆ. ರಾಜ್ಯಕ್ಕೆ ಎಷ್ಟು ಬಂದಿದೆ ಎಂಬುದನ್ನು ನಮ್ಮ ಮಹಾನುಭಾವರು ಹೇಳಲಿ ಎಂದು ಸವಾಲು ಹಾಕಿದ ಅವರು, ಆನೆ ಮಾನವ ಸಂಘರ್ಷ ತಡೆಗೆ ಕೇಂದ್ರ ಸರ್ಕಾರದ್ದೂ ಬಹುದೊಡ್ಡ ಜವಾಬ್ದಾರಿ ಇದೆ. ಆನೆ ಯೋಜನೆ ಮತ್ತು ಹುಲಿ ಯೋಜನೆಗೆ 290 ಕೋಟಿ ರೂ ಮೀಸಲಿಟ್ಟಿದೆ. ಇದರಲ್ಲಿ ಶೇ 30ರಷ್ಟು ಹಣ ಮಾತ್ರವಿನಿಯೋಗವಾಗಿದೆ.
ಕೊಡಗಿಗೆ ಕೇಂದ್ರ ಸರ್ಕಾರ ಒಂದೇ ಒಂದು ಪೈಸೆ ಅನುದಾನ ನೀಡಿಲ್ಲ. ಆನೆ ಮಾನವ ಸಂಘರ್ಷ ತಡಯಲು ಈಗಾಗಲೆ ಉನ್ನತ ಮಟ್ಟದ ಸಭೆ ನಡೆಸಿದ್ದೇನೆ.ರೈಲ್ವೆ ಬ್ಯಾರಿಕೇಡ್, ಸೋಲಾರ್ ಲೈನ್, ಆನೆ ಕಂದಕ ನಿರ್ಮಾಣಕ್ಕೆ 290 ಕೋಟಿ ರೂ ಬೇಕಾಗಿದೆ. ಕೇಂದ್ರ ಸರ್ಕಾರ ದಲ್ಲಿ ಶೇ 70 ರಷ್ಟು ಹಣ ಉಳಿದಿದೆ.ಅದನ್ನು ಕೊಡಲಿ. ಮುಂದಿನ ಐದು ವರ್ಷದಲ್ಲಿ 150 km ರೈಲ್ವೆ ಬ್ಯಾರಿಕೇಡ್, 102 km ಸೋಲಾರ್ ಫೆನ್ಸಿಂಗ್ 23 ಕಿಮಿ ಆನೆ ಕಂದಕ ಯೋಜನೆ ಹಾಕಲಾಗಿದೆ.ಕಾಡಾನೆ ಸೆರೆ ಹಿಡಿದರೆ ನಮ್ಮ ಮೇಲೆ ಪರಿಸರವಾದಿಗಳು ಕೇಸ್ ಹಾಕುತಾರೆ ಇವೆಲ್ಲವನ್ನ ನಾವು ಬ್ಯಾಲೆನ್ಸ್ ಮಾಡಬೇಕು.
ಯಾವುದೇ ಸರ್ಕಾರ ಇರಲಿ ಹೋಗಲಿ, ಆನೆ ಮಾನವ ಸಂಘರ್ಷ ಕೊನೆಯಾಗಬೇಕು.
ಬೆಟ್ಟತೂರು ಆನೆ ದಾಳಿ ಯಲ್ಲಿ ವಿದ್ಯಾರ್ಥಿನಿ ಸಾವು ಪ್ರಕರಣದಲ್ಲಿ ನಡೆಸಿದ ಪ್ರತಿಭಟನೆ ಸಂದರ್ಭ ಮಹಿಳಾ ಅಧಿಕಾರಿ ಮೇಲೆ ಸೌಜನ್ಯ ಇಲ್ಲದೆ ವರ್ತಿಸಿದ್ದಾರೆ. ಎಂದು ಪೊನ್ನಣ್ಣ ಆರೋಪಿಸಿದರು.












