ಇತ್ತೀಚಿನ ಸುದ್ದಿ
Hot Sun | ಕರಾವಳಿಗೆ ಹೀಟ್ ವೇವ್ ಭೀತಿ: ನಾಳೆ, ನಾಳಿದ್ದು ತಾಪಮಾನ ಇನ್ನಷ್ಟು ಏರಿಕೆ ಸಾಧ್ಯತೆ: ಐಎಂಡಿ ಎಚ್ಚರಿಕೆ
26/02/2025, 21:06

ಮಂಗಳೂರು(reporterkarnataka.com): ಜಾಗತಿಕ ತಾಪಮಾನದಲ್ಲಿ ಮತ್ತೆ ವೈಪರಿತ್ಯ ಉಂಟಾಗಿದ್ದು, ಕರ್ನಾಟಕದ ಕರಾವಳಿ ಮೇಲೆ ಇದರ ನೇರ ಪರಿಣಾಮ ಬೀರಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಬಿಸಿಗಾಳಿ(ಹೀಟ್ ವೇವ್)
ಬೀಸುವ ಸಾಧ್ಯತೆಯ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.
ಫೆಬ್ರವರಿ 26 ಮತ್ತು 27 ರಂದು ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣದ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ತಾಪಮಾನದಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಬಗ್ಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಯಲ್ಲೋ ಅಲರ್ಟ್ ನೀಡಲಾಗಿದೆ. ಗರಿಷ್ಠ ತಾಪಮಾನವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಗಳಿವೆ.
ದಕ್ಷಿಣ ಕನ್ನಡದ ಸುಳ್ಯದ ಸುಳ್ಯ1ರಲ್ಲಿ 40.6, ಪುತ್ತೂರು ಉಪ್ಪಿನಂಗಡಿಯಲ್ಲಿ 40.4, ಬಂಟ್ಯಾಳದ ಪಾಣೆ ಮಂಗಳೂರಿನಲ್ಲಿ ಹಾಗೂ ಪತ್ತೂರು 1ರಲ್ಲಿ 39.7 ಡಿ.ಸೆ ದಾಖಲಾಗಿದೆ. ರಾಯಚೂರಿನ ಗುರ್ಗುಂಟಾದಲ್ಲಿ 39.3, ಉಡುಪಿಯ ಕಾರ್ಕಳದ ಅಜೆಕಾರಿಲ್ಲಿ 40.3, ಕುಂದಾಪುರದ ವಂಡ್ಸೆಯಲ್ಲಿ 40.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ.
ಇನ್ನು ಮುಂದಿನ ಐದು ದಿನಗಳವರೆಗೂ ಈ ಗರಿಷ್ಠ ತಾಪಮಾನ ಮುಂದುವರಿಯಲಿದ್ದು, ಉತ್ತರ ಕನ್ನಡ, ದಕ್ಷಿಣಕ ನ್ನಡ ಮತ್ತು ಉಡುಪಿಯಲ್ಲಿ 3 ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆ ಇರುವ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ಎಚ್ಚರಿಕೆ ನೀಡಿದೆ.