4:50 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಹೊಸ್ಮಾರುವಿನಲ್ಲಿ ಕಾಂಪ್ಲೆಕ್ಸ್‌ಗೆ ಪ್ರಥಮ ಬಾರಿ ತುಲುಲಿಪಿ ನಾಮಫಲಕ

22/08/2021, 18:08

ಹೊಸ್ಮಾರು(reporterkarnataka.com); ರವೀಂದ್ರ ಪೂಜಾರಿ ಮಾಲಿಕತ್ವದ ಹೊಸ್ಮಾರು ಈದು ಕ್ರಾಸ್ ಬಳಿಯಿರುವ ಮನ್ವಿತ್ ಕಾಂಪ್ಲೆಕ್ಸ್‌ಗೆ ಜೈ ತುಲುನಾಡ್ ರಿ. ಸಂಘಟನೆ ಕಾರ್ಲ ಘಟಕದ ಸಹಕಾರದೊಂದಿಗೆ ತುಲು ಲಿಪಿಯಲ್ಲಿ ನಾಮಫಲಕ ಅಳವಡಿಸಲಾಯಿತು.


ಈದು ಗ್ರಾಮದಲ್ಲಿ ಪ್ರಥಮ ಬಾರಿ ಕಾಂಪ್ಲೆಕ್ಸ್‌ಗೆ ತುಲುಲಿಪಿ ಅಳವಡಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಯಿತು. ರವೀಂದ್ರ ಪೂಜಾರಿಯವರು ತುಲುಲಿಪಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದು ತಾನು ಹೊರ ದೇಶದಲ್ಲಿದ್ದರೂ ಕೂಡ ತುಲು ಲಿಪಿಯನ್ನು ಕಲಿಯುತ್ತಿದ್ದಾರೆ ಮತ್ತು ಅವರ ಪತ್ನಿ ಮಕ್ಕಳು ತುಲುಲಿಪಿಯನ್ನು ಕಲಿಯುತ್ತಿದ್ದಾರೆ.

ನಾಮ ಫಲಕದ ಉದ್ಘಾಟನೆಯನ್ನು ಪೂರ್ಣಿಮಾ ರವೀಂದ್ರ ಪೂಜಾರಿ ನೆರೆವೇರಿಸಿದರು. ಈ ಸಂದರ್ಭದಲ್ಲಿ ಜೈ ತುಲುನಾಡ್ ರಿ. ಕೇಂದ್ರ ಸಂಘಟನಾ ಕಾರ್ಯದರ್ಶಿ ಆರ್‌.ಸಿ   ದುರ್ಗಾನಗರ, ಕಾರ್ಲ ಯುನಿಟ್‌ನ ಸಂಚಾಲಕರಾದ ವಿಶು ಶ್ರೀಕೇರ, ಶೇಖರ್ ಶ್ರೀಗಂಗೆ, ನಾರಾವಿ  ಸಂತ ಅಂತೋನಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರದೀಪ್ ಬಿ.

ಹಾಗೂ ಸದಸ್ಯರಾದ ಪ್ರಶಾಂತ್ ಶ್ರೀನಿಧಿ, ಪ್ರೀತಂ ಕೋಟ್ಯಾನ್ ಬಜಗೋಳಿ, ದಿವಾಕರ್ ಈದು, ಗಣೇಶ್ ಈದು, ಲಕ್ಮೀ , ಹೋಟೆಲ್ ನ್ಯೂ ಸುರಕ್ಷಾ ಮಾಲಕರಾದ ಗುಲಾಬಿ ಗೋಪಾಲ್, ಶೃಂಗಾರ ಪ್ಯಾನ್ಸಿ& ಪಾರ್ಲರ್ ಮಾಲಕರಾದ ವೀಣಾ ಸತೀಶ್ ಪಾಲ್ಗೊಂಡಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು