8:05 PM Wednesday17 - December 2025
ಬ್ರೇಕಿಂಗ್ ನ್ಯೂಸ್
ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…

ಇತ್ತೀಚಿನ ಸುದ್ದಿ

ಹೋರ್ಡಿಂಗ್ಸ್: ಅಧಿಕೃತ ಎಷ್ಟು? ಅನಧಿಕೃತ ಎಷ್ಟು? ಪಾಲಿಕೆ ಬರುವ ಆದಾಯ ಎಷ್ಟು? ಸೋರಿಕೆ ಎಷ್ಟು?

06/07/2023, 19:24

ಆಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಕೆಲವರಿಗೆ ಪ್ರಿಯವಾದ, ಹಲವರಿಗೆ ಅಪ್ರಿಯವಾದ ರಸ್ತೆ ಬದಿಯ ಹೋರ್ಡಿಂಗ್ಸ್ ಇದೀಗ ಸದ್ದು ಮಾಡುತ್ತಿದೆ. ನಗರದ ಬಿಕರ್ಣಕಟ್ಟೆಯಲ್ಲಿ ಬೃಹತ್ ಹೋರ್ಡಿಂಗ್ ಪತನಗೊಳ್ಳುವ ಮೂಲಕ ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರಪಾಲಿಕೆ ಪ್ರಭುತ್ವಕ್ಕೆ ಬಿಸಿ ಮುಟ್ಟಿಸಿದೆ. ಅಸುರಕ್ಷಿತ ಹೋರ್ಡಿಂಗ್ಸ್ ಗಳನ್ನು ತಕ್ಷಣ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಗರದೊಳಗೆ ರಸ್ತೆ ಬದಿಯ, ವಾಣಿಜ್ಯ ಕಟ್ಟಡಗಳಿಗೆ ಅಂಟಿಕೊಂಡಿರುವ, ಕಟ್ಟಡಗಳ ಟೆರಿಸ್ ಮೇಲೆ ಟೆರರಿಸ್ಟ್ ತರಹ ತಲೆ ಎತ್ತಿರುವ ಬೃಹತ್
ಜಾಹೀರಾತು ಫಲಕಗಳು/ಹೋರ್ಡಿಂಗ್ಸ್ ಹಗಲಿಗಿಂತಲೂ ರಾತ್ರಿ ವೇಳೆ ಜಗಮಗಿಸುತ್ತವೆ. ಅಂಗಡಿ, ವಾಣಿಜ್ಯ ಸಂಕೀರ್ಣ, ಹೋಟೇಲ್, ಬಾರ್, ಪಬ್ ಗಳು ಬಂದ್ ಆದ ಬಳಿಕ ಕಡಲನಗರಿಯ
ಖಾಲಿ ಖಾಲಿ ರಸ್ತೆಯಲ್ಲಿ ಸಂಚರಿಸುವಾಗ ಈ ಹೋರ್ಡಿಂಗ್ಸ್ ಗಳೆಲ್ಲ ಅಂದವಾಗಿ ಕಾಣುತ್ತವೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆದ ಸುಮಾರು 700 ಹೋರ್ಡಿಂಗ್ಸ್ ಗಳಿವೆ. ಒಂದು ಅಂದಾಜು ಪ್ರಕಾರ ಸುಮಾರು 300ಕ್ಕೂ ಹೆಚ್ಚು ಅನಧಿಕೃತ ಹೋರ್ಡಿಂಗ್ಸ್ ಗಳಿವೆ. ಪಾಲಿಕೆಯ ಮೂಲಗಳ ಪ್ರಕಾರ ಈ ಅಧಿಕೃತ 700 ಹೋರ್ಡಿಂಗ್ಸ್ ಗಳಲ್ಲಿ ಪಾಲಿಕೆಗೆ ವಾರ್ಷಿಕ ಸುಮಾರು 1.50 ಕೋಟಿ ರೂ. ಆದಾಯ ಬರುತ್ತದೆ. ಉಳಿದ ಸುಮಾರು 300ರಷ್ಟು ಹೋರ್ಡಿಂಗ್ಸ್ ನ ಆದಾಯ ಸೋರಿಕೆಯಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಮಂಗಳೂರು ಮಹಾನಗರಪಾಲಿಕೆ ಮೊದಲೇ
ಭ್ರಷ್ಡಾಚಾರಕ್ಕೆ ಸಾಕಷ್ಟು ಕುಖ್ಯಾತಿಯನ್ನು ಪಡೆದಿದೆ.
ಅಜಿತ್ ರೈ ತರಹದ ವ್ಯಕ್ತಿಗಳು ಇಲ್ಲಿ ಸಾಕಷ್ಟು ಇದ್ದಾರೆ. ಇಲ್ಲಿನ ಸಿಬ್ಬಂದಿಗಳನ್ನು ಲೋಕಾಯುಕ್ತ ಹಿಡಿಯುವುದು, ಮಾಧ್ಯಮಗಳಲ್ಲಿ ಫೋಟೋ ಸಹಿತ ದೊಡ್ಡದಾಗಿ ಸುದ್ದಿ ಬರುವುದು, 6 ತಿಂಗಳ ಬಳಿಕ ಅವರು ಮತ್ತೆ ಡ್ಯೂಟಿಗೆ ಬರುವುದು, ಹಳೆ ದಂಧೆಯನ್ನು ಮುಂದುವರಿಸುವುದು ಇದನ್ನೆಲ್ಲ ಕಂಡು ಮಂಗಳೂರಿನ ನಾಗರಿಕರು ಈಗಾಗಲೇ ಭ್ರಮನಿರಸನರಾಗಿದ್ದಾರೆ. ಇದೀಗ ಹೋರ್ಡಿಂಗ್ಸ್ ವಿಷಯದಲ್ಲಿಯೂ ನಡೆದಿರುವುದು ಕೂಡ ಅದೇ. ಪಾಲಿಕೆಯ ಕಂದಾಯ ವಿಭಾಗದ ವ್ಯಾಪ್ತಿಗೆ ಹೋರ್ಡಿಂಗ್ಸ್ ಬರುತ್ತದೆ. ಕಂದಾಯ ವಿಭಾಗದಲ್ಲಿ ಸಾಕಷ್ಟು ರೆವೆನ್ಯೂ ಇನ್ಸ್ ಪೆಕ್ಟರ್ ಗಳಿದ್ದಾರೆ. ಕಂದಾಯ ಅಧಿಕಾರಿ ಇದ್ದಾರೆ. ಸಹಾಯಕ ಕಂದಾಯ ಅಧಿಕಾರಿ ಇದ್ದಾರೆ. ಸುಪರಿಟೆಂಡೆಂಟ್, ಕ್ಲರ್ಕ್ ಗಳಿದ್ದಾರೆ. ಇವರಿಗೆಲ್ಲ ಹೆಡ್ ಮಾಸ್ಟರ್ ಆಗಿ ಕಮಿಷನರ್ ಇದ್ದಾರೆ. ಇಷ್ಟೆಲ್ಲ ಸರಕಾರದ ಗಟ್ಟಿ ವ್ಯವಸ್ಥೆ ಇದ್ದರೂ ಇಲ್ಲಿ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಲು ಸಾಧ್ಯವಾಗಲಿಲ್ಲ. ಇದಕ್ಕೆಲ್ಲ ಕಾರಣ ಇಲ್ಲಿ ಪ್ರತಿ ಸೆಕ್ಷನ್ ನಲ್ಲಿ ದಶಕಗಳಿಂದ ಟೆಂಟ್ ಹಾಕಿ ಕೂತಿರುವ ಖಾಯಂ ಸಿಬ್ಬಂದಿಗಳು. ಹೀಗೆಂತ ಸಾರ್ವಜನಿಕರು ಬಾಯಿ ಬಿಟ್ಟು ಆರೋಪ ಮಾಡುತ್ತಾರೆ.
ಅದೇನೆ ಇರಲಿ, ನಾವು ಮತ್ತೆ ಹೋರ್ಡಿಂಗ್ಸ್ ವಿಷಯಕ್ಕೆ ಬರುವುದಾದರೆ ಎರಡು ಮೂರು ಕಂಪನಿಗಳು ಮಂಗಳೂರಿನಲ್ಲಿ ಪ್ರಭುತ್ವ ಪಡೆದಿವೆ. ಇವರು ಒಂದು ಹೋರ್ಡಿಂಗ್ಸ್ ಗೆ 6 ತಿಂಗಳಿಗೆ 1 ಲಕ್ಷ ರೂ. ಪಡೆಯುತ್ತಾರೆ. ಅಂದರೆ ವರ್ಷಕ್ಕೆ 2 ಲಕ್ಷ ರೂ. ಇದರಲ್ಲಿ ಪಾಲಿಕೆಗೆ 15- 20 ಸಾವಿರ ರೂ. ಶುಲ್ಕ ಪಾವತಿಸುತ್ತಾರೆ. ಇದು ಕೂಡ ಅಡ್ವಾನ್ಸ್ ಪೇಮೆಂಟ್ ಇಲ್ಲ. ವರ್ಷದ ಬಳಿಕ ಪಾವತಿಸುವುದು. ಪಾಲಿಕೆ ಸಿಬ್ಬಂದಿಗಳು ಕಟ್ಟುನಿಟ್ಟಾಗಿ ಸಂಗ್ರಹಿಸಿದರೆ ಆದಾಯ ಬಂತು. ಇಲ್ಲದಿದ್ದರೆ ಅದು ಕೂಡ ಇಲ್ಲ.
ನಾಗರಿಕ ಸಮಿತಿಯ ಹನುಮಂತ ಕಾಮತ್ ಅವರು ಈ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಆದರೆ ಪಾಲಿಕೆಗೆ ಇಷ್ಟರವರೆಗೆ ಬಂದ ಕಮಿಷನರ್ ಗಳಿಗೆ ಇದನ್ನೆಲ್ಲ ಸರಿ ಮಾಡಲು ಆಗಲಿಲ್ಲ. ಯಾಕೆಂದರೆ ಅವರು ಎಸಿ ಚೇಂಬರ್ ಬಿಟ್ಟು ನಗರ ಪ್ರದಕ್ಷಿಣಿ ಮಾಡಿದಿಲ್ಲ. ಇದೀಗ ಸೇನೆಯಲ್ಲಿ ದುಡಿದು ಬಂದ ನೂತನ ಕಮಿಷನರ್ ಏನು ಮಾಡುತ್ತಾರೆ ಎಂದು ಕಾದು ನೋಡೋಣ.

ಇತ್ತೀಚಿನ ಸುದ್ದಿ

ಜಾಹೀರಾತು