ಇತ್ತೀಚಿನ ಸುದ್ದಿ
ಹೋಂಡ ಕಂಪನಿ ಕಾರ್ಮಿಕನ ಮೇಲೆ ಹೊರ ರಾಜ್ಯದ ಕಾರ್ಮಿಕರಿಂದ ಮಾರಣಾಂತಿಕ ಹಲ್ಲೆ; ಕ್ರಮಕ್ಕೆ ಕರವೇ ಆಗ್ರಹ
05/12/2021, 13:44
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.com
ಹೋಂಡ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿನ ಮೇಲೆ ಹೊರ ರಾಜ್ಯ ಮೂಲದ ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕಾರ್ಮಿಕನ ಪೋಷಕರು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಸಮ್ಮುಖದಲ್ಲಿ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ . ಶ್ರೀನಿವಾಸಪುರ ತಾಲ್ಲೂಕಿನ ವಳಗೇರನಹಳ್ಳಿ ಗ್ರಾಮದ ಚಮತ್‌ರೆಡ್ಡಿ ಮಾಲೂರು ತಾಲ್ಲೂಕಿನ ಹೋಂಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು , ಹೋಂಡ ಕಂಪನಿಯಲ್ಲೇ ಕೆಲಸ ಮಾಡುತ್ತಿರುವ ಓಡಿಸ್ಸಾ ಮೂಲದವರ ಜೊತೆಯಲ್ಲಿ ಕರಿನಾಯಕನಹಳ್ಳಿ ಚಿನ್ನಪ್ಪನಾಯ್ಡು ಬಿಲ್ಡಿಂಗ್‌ನಲ್ಲಿ ವಾಸ ಇದ್ದರು. ನ .8ರಂದು ಕೆಲಸ ಮುಗಿಸಿಕೊಂಡು ರೂಂಗೆ ಬಂದಾಗ ಸುಮಾರು ಸಂಜೆ 5.30 ಸಮಯದಲ್ಲಿ ಮರಣಾಂತಿಕ ಹಲ್ಲೆ ನಡೆಸಿ , ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದರು. ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಯಿತು . ತೀವ್ರವಾಗಿ ಗಾಯಗೊಂಡಿರುವ ಚಮತ್‌ರೆಡ್ಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ . ಹಲ್ಲೆ ಮಾಡಿರುವ ಆರೋಪಿಗಳ ಮಾಹಿತಿಯನ್ನು ಪೊಲೀಸರ ಗಮನಕ್ಕೆ ತಂದರೂ ಯಾವುದೇ ರೀತಿ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಮಾತನಾಡಿ, ನರಸಾಪುರ , ಮಾಲೂರು ಕೈಗಾರಿಕಾ ಪ್ರದೇಶದಲ್ಲಿ ಹೊರರಜ್ಯಗಳಿಂದ ಬಂದಿರುವ ಕಾರ್ಮಿಕರಿಂದ ಇಂತಹ ಕೃತ್ಯಗಳು ಪದೇಪದೇ ಸಂಭವಿಸುತ್ತಿದೆ.ಆದರೂ ಸಹ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.
ಕಂಪನಿಗಳವರು ಸ್ಥಳೀಯರಿಗೆ ಆದ್ಯತೆ ನೀಡಿದ್ದರೆ ಇಂತಹ ಕೃತ್ಯಗಳನ್ನು ತಡೆಯಬಹುದಿತ್ತು . ಆದರೆ ಕಾರ್ಮಿಕರ ನೇಮಕಾತಿ ಜವಾಬ್ದಾರಿಯನ್ನು ಗುತ್ತಿಗೆದಾರರಿ ವಹಿಸಲಾಗಿದೆ . ಗುತ್ತಿಗೆದಾರರು ಹೊರ ಓಡಿಸ್ಸಾ , ಮಹಾರಾಷ್ಟ್ರ , ತಮಿಳುನಾಡು , ಆಂಧ್ರ ರಾಜ್ಯಗಳಿವರಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ . ಹಲ್ಲೆ ಮಾಡಿರುವ ಕಾರ್ಮಿಕರನ್ನು ನೇಮಕ ಮಾಡಿರುವ ಕಂಪನಿ ಮತ್ತು ಗುತ್ತಿಗೆದಾರನ ವಿರುದ್ಧ ಕ್ರಮ ಜರುಗಿಸಬೇಕು. ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರನ್ನು ಕೂಡಲೇ ವಾಪಸ್ ಕಳುಹಿಸಬೇಕು ಎಂದು ಒತ್ತಾಯಿಸಿದರು . ಚಮತ್‌ರೆಡ್ಡಿ ಹೋಂಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ . ಚಮತ್ ರೆಡ್ಡಿ ಜೊತೆಗೆ ಇದ್ದ ರೂಂನವರೆ ಹಲ್ಲೆ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಆ ವ್ಯಕ್ತಿಗಳ ಆಧಾರ್ ಕಾರ್ಡ್ ,ಕಂಪನಿಯ ಗುರುತಿನ ಚೀಟಿ ಸಮೇತ ಮಾಲೂರು ಠಾಣೆಗೆ ದೂರು ನೀಡಿದ್ದರು ಯಾಕೆ ಬಂಧಿಸಲು ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಚಮತ್ ರೆಡ್ಡಿ ಈಗಲು ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದಾನೆ . ಚಮತ್‌ರೆಡ್ಡಿ ಮೇಲೆ ಯಾರು ಹಲ್ಲೆ ಮಾಡಿದ್ದಾರೆ ಎಂದು ಅನುಮಾನಸ್ಪದ ವ್ಯಕ್ತಿಗಳ ಆಧಾರ್ ಕಾರ್ಡ್ ಮತ್ತು ಕಂಪನಿ ಗುರುತಿನ ಚೀಟಿ ತೋರಿಸಿದರೆ ಇವರೇ ಎಂದು ಸನ್ನೇ ಮಾಡುತ್ತಾರೆ. ಆದರೆ ಗಾಯಾಳು ಬಾಯಿ ಮಾತಿನಲ್ಲಿ ಹೇಳಿಕೆ ನೀಡಿದರೆ ಮಾತ್ರ ದಾಖಲು ಮಾಡುವುದಾಗಿ ಪೊಲೀಸರು ಹೇಳುತ್ತಾರೆ. ಇಂತಹ ಗಂಭೀರ ಪ್ರಕರಣವನ್ನು ಯಾಕೆ ಉದಾಸೀನವಾಗಿ ನೋಡುತ್ತಿದ್ದಾರೆ ಎಂದು ಆರೋಪಿಸಿದರು.
ಚಮತ್ ರೆಡ್ಡಿ ಮೇಲೆ ಮರಾಣಾಂತಿಕ ಹಲ್ಲೆ ನಡೆಸಿ ತಲೆ ಮೇಲೆ ಬಲವಾದ ಎರಡು ಗಾಯಗಳಾಗಿವೆ . ಸೊಂಟಕ್ಕೆ ಪೆಟ್ಟು ಬಿದಿದ್ದೆ . ಆದರೆ ಮೂರ್ಛ ಬಂದು ಕೆಳಕ್ಕೆ ಬಿದ್ದು ಆಗಿರುವ ಗಾಯ ಎಂದು ಪೊಲೀಸರು ಹೇಳಿ ಕೇವಲ ಕಾಯ್ದೆ ೩೦೭ ರಡಿ ಪ್ರಕರಣ ದಾಖಲು ಮಾಡಲಾಗಿದೆ . ಈ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಪೊಲೀಸರು ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು .
ಹಿಂದೆ ರಾಜ್ಯದಲ್ಲಿ ಕಾವೇರಿ ವಿಚಾರವಾಗಿ ಹೊರ ರಾಜ್ಯದವರನ್ನು ಓಡಿಸಲು ಹೋರಾಟ ಮಾಡಲಾಗಿತ್ತು . ಒಂದುವಾರದೊಳಗೆ ಚಮತ್‌ರೆಡ್ಡಿ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಒಂದು ವಾರದೊಳಗೆ ಬಂಧಿಸದಿದ್ದರೆ ಕಂಪನಿ ಮತ್ತು ಎಸ್ಪಿ ಕಚೇರಿ ಎದುರು ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು .