ಇತ್ತೀಚಿನ ಸುದ್ದಿ
ಹೋಮ್ ಐಸೋಲೇಶನ್ ಬೇಡ, ಕೋವಿಡ್ ಕೇರ್ ಸೆಂಟರ್ ಗಳಿಗೆ ಕಳುಹಿಸಿ: ಸಿಎಂ ಬೊಮ್ಮಾಯಿ ಖಡಕ್ ಸೂಚನೆ
12/08/2021, 15:43
ಮಂಗಳೂರು(reporterkarnataka.com): ಕೊರೊನಾ ಸೋಂಕು ಹಬ್ಬುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಹೋಮ್ ಐಸೋಲೇಶನ್ ಬಿಟ್ಟು ಕೋವಿಡ್ ಕೇರ್ ಸೆಂಟರ್ ಗಳಿಗೆ ಸೋಂಕಿತರನ್ನು ವರ್ಗಾಯಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಪ್ರಸ್ತುತ ಶೇ.80ರಷ್ಟು ಕೊರೊನಾ ಸೋಂಕು ಪೀಡಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಇದರಿಂದ ಸೋಂಕು ಹರಡುವ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗುರುವಾರ ಮಂಗಳೂರಿನಲ್ಲಿ ಮಾತನಾಡಿದ ಸಿಎಂ ನೀಡಿದರು.
ಮತ್ತೊಮ್ಮೆ ಲಾಕ್ ಡೌನ್ ಆಗುವುದನ್ನು ತಪ್ಪಿಸಲು ನಾವು ಈಗಿಂದೀಗಲೇ ಕ್ರಮ ಕೈಗೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆ ಇಡೀ ರಾಜ್ಯದಲ್ಲೇ ಹೆಚ್ಚು ತೊಂದರೆಗೀಡಾದ ಪ್ರದೇಶವಾಗಿದೆ ಎಂದು ಅವರು ನುಡಿದರು.