8:38 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗೃಹಿಣಿ ಮೇಲೆರಗಿದ ಕಾಮುಕ: ಬೊಬ್ಬೆ ಕೇಳಿ ಓಡಿ ಬಂದ ಪತಿ ಜತೆ ಪತ್ನಿಗೂ ಕುಡುಗೋಲಿನಿಂದ ಹಲ್ಲೆ

18/12/2023, 12:19

ಮೋಹನ್ ನಂಜನಗೂಡು ಮೈಸೂರು

info.reporterkarnataka@ gmail.com

ನಂಜನಗೂಡು ತಾಲೂಕಿನ ಹೊಸ ಕಡಜೇಟಿ ಗ್ರಾಮದ ಮಹದೇವಸ್ವಾಮಿ ಆತನ ಪತ್ನಿ ಸುಜಾತ ಎಂಬುವರು ಕಂದೇಗಾಲ ಸಮೀಪವಿರುವ ಮೈಸೂರು ಮೂಲದ ವ್ಯಕ್ತಿಯ ತೋಟ ಒಂದರಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.


ಕೆಲಸ ಮಾಡುವ ತೋಟದ ಒಳಭಾಗದಲ್ಲಿ ವಿದ್ಯುತ್ ಫೀಸ್ ಹಾಕಲು ತೆರಳಿದ ವಿವಾಹಿತ ಮಹಿಳೆಯ ಪತಿ ಮಹದೇವಸ್ವಾಮಿ ಇಲ್ಲದೆ ಇರುವ ಸಮಯವನ್ನೇ ನೋಡಿ ತೋಟದ ಮನೆಯ ಬಳಿ ಒಬ್ಬಂಟಿ ಮಹಿಳೆ ಇರುವುದನೆ ಗಮನಿಸಿದ ಕಾಮುಕ ನವೀನ ಎಂಬಾತ ಏಕಾಏಕಿ ತಂತಿ ಬೇಲಿಯನ್ನು ಜಿಗಿದು ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆ ಸುಜಾತ ಎಂಬುವರ ಮೇಲೇರಗಿ ಚಿರಟ ಮಾಡದಂತೆ ಬಾಯಿಗೆ ಬಟ್ಟೆಯನ್ನು ತುರುಕಿ ಬಲತ್ಕಾರಕ್ಕೆ ಮುಂದಾಗಿದ್ದಾನೆ. ಕಿರಾತಕ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಚೀರಾಟ ಮಾಡುತ್ತಿರುವುದನ್ನು ಕೇಳಿ ಸಮೀಪದಲ್ಲಿ ಇದ್ದ ಸುಜಾತಳ ಗಂಡ ಮಹದೇವಸ್ವಾಮಿ ಸ್ಥಳಕ್ಕೆ ಆಗಮಿಸಿದಾಗ ಆತನ ಮೇಲೆಯೂ ಕುಡುಗೋಲಿನಿಂದ ಹಲ್ಲೆ ಮಾಡಿ ಸ್ಥಳದಿಂದ ಕಾಮುಕ ನವೀನ ಪರಾರಿಯಾಗಿದ್ದಾನೆ.
ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಸುಜಾತ ಮತ್ತು ಆತನ ಪತಿ ಮಹದೇವಸ್ವಾಮಿ ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುಜಾತಳ ಮೈ ಭಾಗದ ವಿವಿಧ ಭಾಗಗಳಲ್ಲಿ ಕಚ್ಚಿರುವ ಗುರುತು ಮತ್ತು ಕುಡುಗೋಲಿನಿಂದ ಹಲ್ಲೆ ಮಾಡಿರುವ ದೆಸೆಯಿಂದ ನಂಜನಗೂಡು ಸರ್ಕಾರಿ ಆಸ್ಪತ್ರೆಯ ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಚಾರವಾಗಿ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಕರ್ಕಿ ಕಟ್ಟೆ ದೊಡ್ಡಯ್ಯ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಿ ಘಟನೆಯ ಸವಿವಾರವನ್ನು ತಿಳಿದು ಪ್ರಕರಣ ದಾಖಲಿಸಿಕೊಂಡು ಕಿರಾತಕ ಆರೋಪಿಯ ಬಂಧನಕ್ಕೆ ಹುಲ್ಲಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು