ಇತ್ತೀಚಿನ ಸುದ್ದಿ
ಹಿರಿಯೂರು: ಭಗವತಿ ಅಮ್ಮ ದೇವತೆಯ ಕುಂಬಾಭಿಷೇಕ ಮಹೋತ್ಸವ; ಮಾಜಿ ಸಚಿವ ಡಿ. ಸುಧಾಕರ್ ಭಾಗಿ
24/11/2021, 15:17
ಗೋಪಾಹಳ್ಳಿ ಶಿವಣ್ಣ ಚಳ್ಳಕೆರೆ ಚಿತ್ರದುರ್ಗಾ
info.reporterkarnataka@gmail.com
ಹಿರಿಯೂರು ತಾಲ್ಲೂಕಿನಲ್ಲಿ ಸಮೃದ್ಧ ಮಳೆಯಾಗಿ, ಎಲ್ಲ ಕೆರೆ, ಚೆಕ್ ಡ್ಯಾಂಗಳು ತುಂಬಿಕೊಂಡಿದ್ದು, ಮುಂದಿನ ದಿನಗಳಲ್ಲಿ ರೈತರ ಭವಿಷ್ಯ ಉಜ್ವಲವಾಗಲಿದೆ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ಶ್ರೀ ಭಗವತಿ ಅಮ್ಮ (ಪೌದಿಯಮ್ಮ) ದೇವತೆಯ ಕುಂಬಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷ ಬಿ.ಎಲ್.ಪ್ರಕಾಶ್, ನಗರಸಭಾ ಸದಸ್ಯರಾದ ಸುರೇಖಾಮಣಿ , ಮಮತಾ, ಅಜಯ್ ಕುಮಾರ್, ಈರಲಿಂಗೇಗೌಡ , ಮಾಜಿ ಅಧ್ಯಕ್ಷ ಎ.ಮಂಜುನಾಥ್, ಆರ್ಮುಗಮ್, ಆರ್.ನಾಗೇಂದ್ರನಾಯ್ಕ, ಅಮೃತೇಶ್ವರ ಸ್ವಾಮಿ, ಜಿ.ಎಲ್.ಮೂರ್ತಿ, ಅಶೋಕ್, ಕಲ್ಲಹಟ್ಟಿ ಹರೀಶ್, ಬಾನುಪ್ರಕಾಶ್, ದಿಂಡಾವರ ಶ್ರೀನಿವಾಸ್, ತಿಪ್ಪೇಸ್ವಾಮಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಸಕಲ ಭಕ್ತಾಧಿಗಳು ಉಪಸ್ಥಿತರಿದ್ದರು.














