5:25 PM Saturday7 - March 2026
ಬ್ರೇಕಿಂಗ್ ನ್ಯೂಸ್
Kodagu | ಮಹಿಳೆಯ ಗರ್ಭಾಶಯದಲ್ಲಿ 7 ಕೆಜಿ ಗೆಡ್ಡೆ: ಶಸ್ತ್ರಚಿಕಿತ್ಸೆ ಮೂಲಕ ಹೊರಕ್ಕೆ Kodagu | ದೊಡ್ಡಕೊಡ್ಲಿ ಗ್ರಾಮದಲ್ಲಿ ಕೋವಿಯಿಂದ ಗುಂಡು ಸಿಡಿದು ಯುವಕ ಸಾವು ರಾಜ್ಯದ 17ನೇ ಬಜೆಟ್: ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ; ಡಾ. ಯು.… ಮತ್ತೆ ಮರಳಲಿದೆ ಕ್ಯಾಂಪಸ್ ಪಾಲಿಟಿಕ್ಸ್: ರಾಜ್ಯದ ಎಲ್ಲಾ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ… ಮಂಗಳೂರು ಮೀನುಗಾರಿಕೆ ಮಹಾವಿದ್ಯಾಲಯ ಸ್ಥಾಪನೆ: ರಾಜ್ಯ ಬಜೆಟ್ ನಲ್ಲಿ‌ ಘೋಷಣೆ ಎಣ್ಣೆಪ್ರಿಯರಿಗೆ ಶಾಕ್ ನೀಡಿದ ಬಜೆಟ್‌: ಮದ್ಯದ ಮೇಲೆ ಹೊಸ ರೂಪದ ತೆರಿಗೆ ಕೋರ್ಟು ಅಲೆದಾಟ ತಪ್ಪಿಸಲು 10 ಕೋಟಿ ವೆಚ್ಚದಲ್ಲಿ ಇ ಕೋರ್ಟ್‌ ಸ್ಥಾಪನೆ 1,000 ಕೋಟಿ ವೆಚ್ಚದ ‘ಕಲ್ಯಾಣ ಪಥ’ ಯೋಜನೆಡಿ ರಸ್ತೆ ಅಭಿವೃದ್ಧಿ:ಮುಖ್ಯಮಂತ್ರಿ ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ

ಇತ್ತೀಚಿನ ಸುದ್ದಿ

ಹಿರಿಯಡ್ಕ: ಎಂಡೋ ಸಲ್ಫಾನ್ ಸಂತ್ರಸ್ತರಿಗೆ ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿ ಫಿಸಿಯೋಥೆರಪಿ ‌ಸೌಲಭ್ಯ

20/01/2024, 13:01

ಉಡುಪಿ(reporterkarnataka.com): ಎಂಡೋ ಸಲ್ಫಾನ್ ಸಂತ್ರಸ್ತರಿಗೆ ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿ ಹಿರಿಯಡ್ಕದಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಫಿಸಿಯೋಥೆರಪಿ ‌ಸೌಲಭ್ಯ ಒದಗಿಸಲಾಗಿದೆ.
80ರ ದಶಕದಲ್ಲಿ ಗೋಡಂಬಿ ಕೃಷಿಗೆ ಬಳಸಿದ ಕೀಟನಾಶಕದ ದುಷ್ಪರಿಣಾಮಗಳ ಬಗ್ಗೆ ನಮಗರಿವಿದೆ. ಆ ಕೀಟನಾಶಕದ ಬಳಕೆ ಈಗ ನಿಷೇಧವಿದೆ. ಆದರೆ ಆಗ ಸಿಂಪಡಿಸಿದ ಎಂಡೋಸಲ್ಫಾನ್ ನಿಂದ ಆ ಭಾಗದ ಜನರು ನರ ದೌರ್ಬಲ್ಯ, ಮಾಂಸ ಖಂಡಗಳ ಸೆವೆತ, ಬುದ್ದಿ ಮಾಂದ್ಯತೆ, ಬಂಜೆತನ ಇನ್ನಿತ್ಯಾದಿ ಸಮಸ್ಯೆ ಗಳಿಂದ ಬಳಲುತ್ತಿದ್ದಾರೆ. ಎಂಡೋ ಸಲ್ಫಾನ್ ಪೀಡಿತರ ಹಲವು ಬೇಡಿಕೆಗಳಲ್ಲಿ ಉತ್ತಮ ಫಿಸಿಯೋಥೆರಪಿ ‌ಸೌಲಭ್ಯ ಕೂಡ ಒಂದು. ಅದು ಮನೆಗೆ ಹತ್ತಿರವಿದ್ದರೆ ಒಳಿತು. ಎಂಡೋ ಸಲ್ಫಾನ್ ಪೀಡಿತರಿಗೆ ಆರೋಗ್ಯ ಚಿಕಿತ್ಸೆ ಶಿಬಿರ ನಡೆಸಿದ ಒನ್ ಗುಡ್ ಸ್ಟೆಪ್ ಸಂಸ್ಥೆಯು ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ, ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಡಿ ನಿರ್ಮಿಸಿರುವ ಕಟ್ಟಡದಲ್ಲಿ ಸುಸಜ್ಜಿತ ಆಧುನಿಕ ಫಿಸಿಯೋಥೆರಪಿ ಸೌಲಭ್ಯಗಳನ್ನು ಪ್ರಾರಂಭಿಸುತ್ತಿದೆ. ದಿನಾಂಕ ಜನವರಿ ೨೦ ರಂದು ಮದ್ಯಾಹ್ನ 2ಗಂಟೆಗೆ ಉಡುಪಿ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಾದ ಡಾ ವಿದ್ಯಾ ಕುಮಾರಿಯವರು ಈ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ ಐ.ಪಿ. ಗಡದ್, ವಲಯಾಧಿಕಾರಿ ಡಾ ಪ್ರಶಾಂತ್ ಭಟ್, ಧನಸಹಾಯ ಮಾಡಿದ ಜೆನಿಸಿಸ್ ಪ್ಯಾಕೇಜಿಂಗ್ ಪ್ರೈ ಲಿ ನ ಮಾಲಕ ಕೌಶಲ್ ವೋರಾ, ಒನ್ ಗುಡ್ ಸ್ಟೆಪ್ ಸಂಸ್ಥೆಯ ನಿರ್ದೇಶಕಿ ಅಮಿತಾ ಪೈ,ಎಂಡೋ ಸಲ್ಫಾನ್ ಸಂತ್ರಸ್ತ ರ ಬೇಡಿಕೆಗಳಿಗಾಗಿ ಶ್ರಮಿಸುತ್ತಿರುವ ಡಾ ರವೀಂದ್ರ ನಾಥ್ ಶಾನುಭಾಗ್, ಎಂಸಿಎಚ್ ಪಿಯ ಡೀನ್ ಡಾ ಅರುಣ್ ಮಯ್ಯ, ಶ್ರೀ ರಾಜೇಶ್ ನಾವಡ, ಡಾ ಪಿ.ವಿ. ಭಂಡಾರಿ ಇನ್ನಿತರರು ಇರುತ್ತಾರೆ.
ಮುಂದಿನ ದಿನಗಳಲ್ಲಿ ಜಿಲ್ಲೆಯ ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಿಸಿಯೋಥೆರಪಿ ಸೌಲಭ್ಯಗಳನ್ನು ಪ್ರಾರಂಭಿಸುವ ಯೋಜನೆಯಿದೆ, ಎಂಡೋ ಸಲ್ಫಾನ್ ಸಂತ್ರಸ್ಥರಲ್ಲದೆ ಫಿಸಿಯೋಥೆರಪಿ ಅಗತ್ಯ ಇರುವ ಸುತ್ತ ಮುತ್ತಲಿನ ಪರಿಸರದ ಜನ ಈ ಸೌಲಭ್ಯ ಗಳನ್ನು ಬೆಳೆಸಿಕೊಳ್ಳುವಂತೆ ಒನ್ ಗುಡ್ ಸ್ಟೆಪ್ ಸಂಸ್ಥೆಯ ನಿರ್ದೇಶಕಿ ಅಮಿತಾ ಪೈ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು