ಇತ್ತೀಚಿನ ಸುದ್ದಿ
ಹಿರಿಯಡ್ಕ: ಅಪರಿಚಿತ ವಾಹನ ಡಿಕ್ಕಿ; ರಸ್ತೆ ದಾಟುತ್ತಿದ್ದ ನರಿ ಸಾವು; ಸ್ಥಳಕ್ಕೆ ಬಾರದ ಅರಣ್ಯ ಅಧಿಕಾರಿಗಳು
19/02/2023, 17:24
ಹಿರಿಯಡ್ಕ(reporterkarnataka.com):
ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ನರಿಯೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯಡಕದ ಕೋಟ್ನಕಟ್ಟೆ ಸಮೀಪ ರಾತ್ರಿ ನಡೆದಿದೆ.
ಆಹಾರ ಹುಡುಕಿಕೊಂಡು ಬಂದ ನರಿಯೊಂದು ರಸ್ತೆ ದಾಟುವ ವೇಳೆ ರಭಸವಾಗಿ ಬಂದ ಯಾವುದೇ ವಾಹನ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ನರಿ ಸ್ಥಳದಲ್ಲೇ ಉಸಿರುಚೆಲ್ಲಿದೆ. ಚಾಲಕನು ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ನರಿಯ ಮೃತದೇಹವನ್ನು ರಸ್ತೆಯ ಪಕ್ಕಕ್ಕೆ ಸರಿಸಿದ್ದಾರೆ .
ಸ್ಥಳಕ್ಕೆ ಧಾವಿಸದ ಅರಣ್ಯ ಇಲಾಖೆ : ವಾಹನ ಢಿಕ್ಕಿ ಹೊಡೆದು ಮೃತಪಟ್ಟ ನರಿಯ ಕಳೆಬರಹ ವನ್ನು ತೆಗೆಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಆದರೆ ಯಾವ ಅಧಿಕಾರಿಯು ಭೇಟಿ ನೀಡಿಲ್ಲ. ಆದರೆ ಸ್ಥಳೀಯರು ಶವವನ್ನು ಪಕ್ಕಕ್ಕೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು .














