5:05 AM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ಹಿರಿಯ ಪತ್ರಕರ್ತ ವಾಗೀಶ್ ಇನ್ನಿಲ್ಲ: ನೇರ ನಡೆ- ನುಡಿಯ ಮಿತ್ರ ಇನ್ನು ನೆನಪು ಮಾತ್ರ

07/12/2021, 22:32

ಅಶೋಕ್ ಕಲ್ಲಡ್ಕ ಮಂಗಳೂರು

info.reporterkarnataka@gmail.com

ವಾಗೀಶ್ ….
ನನ್ನ ಮಿತ್ರ ಹಾಗೂ ಜನವಾಹಿನಿಯಲ್ಲಿ ನನ್ನ ಸಹೋದ್ಯೋಗಿ.

ಜನವಾಹಿನಿಯಲ್ಲಿ ನಾನು ವಿದೇಶಿ ಪುಟ ನೋಡಿಕೊಳ್ಳುತ್ತಿದ್ದಾಗ ವಾಗೀಶ್ ನಮ್ಗೆ ಪೇಜ್ ಮಾಡಿಕೊಡುತ್ತಿದ್ದರು. ನಂಗೆ ತಿಂಗಳಲ್ಲಿ ಎರಡು ವಾರ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯ ಪಾಳಿ ಇತ್ತು. ಸತ್ಯಾ, ರೇಶ್ಮಾ, ರೋಹಿಣಿ, ಜಗದೀಶ ಮಣಿಯಾಣಿ, ಮೇರಿ ಜೋಸೆಫ್ ನಮ್ಮ ಶಿಫ್ಟ್ ನಲ್ಲಿ ಇದ್ದರು. ವಾಗೀಶ್ ಸುಂದರವಾದ ಪುಟ ಕಟ್ಟಿಕೊಡುತ್ತಿದ್ದರು.

ಪಿಟಿಐ, ಯುಎನ್ ಐನಿಂದ ವಿದೇಶಿ ಸುದ್ದಿಗಳನ್ನು ಆಯ್ದು ಕನ್ನಡಕ್ಕೆ ಭಾಷಾಂತರ ಮಾಡಿ, ಹೆಡ್ಡಿಂಗ್

ಕೊಟ್ಟು ಪೇಜ್ ಸಿದ್ಧಪಡಿಸುತ್ತಿದ್ದೆವು. ಸಂಜೆ 6 ಗಂಟೆಗೆ ಗುರುಗಳಾದ ನಿಖಿಲ್ ಕೊಲ್ಪೆ ಅಥವಾ ಲೋಕೇಶ್ ಕಾಯರ್ಗ ಅವರು ಬಂದು ಪೇಜ್ ಫೈನಲ್ ಮಾಡುತ್ತಿದ್ದರು. 

ವಾಗೀಶ್ ಪೇಜ್ ಮಾಡುವ ಜತೆಗೆ ಬಿಡುವಿನ ಸಮಯದಲ್ಲಿ ಕೆಲವು ಟ್ರಾನ್ಸ್ ಲೇಶನ್ ಕೂಡ ಮಾಡಿಕೊಡುತ್ತಿದ್ದರು. ಕೆಲಸ ನಡುವಿನಲ್ಲಿ ಸೀರಿಯಸ್ ಜೋಕ್ಸ್ ಹೇಳುವುದು, ಚಟಾಕಿ

ಹಾರಿಸುವುದು, ಹಾಡು ಗುಣುಗುವುದು ವಾಗೀಶ್ ಕಡೆಯಿಂದ ಆಗಾಗ ನಡೆಯುತ್ತಿತ್ತು. ‘ಕಿಡಿಗೇಡಿ ಮನುಷ್ಯ’ ಅಂತಲೇ ನಾವು ಅವರನ್ನು ಕರೆಯುತ್ತಿದ್ದೆವು. 

ನಾನು ವಿಜಯ ಕರ್ನಾಟಕದಿಂದ ನಿರ್ಗಮಿಸುವ ಮುನ್ನ ಒಂದೆರಡು ಬಾರಿ ನಂಗೆ ಕರೆ ಮಾಡಿ ಮಾತನಾಡಿದ್ದರು. ಪತ್ರಿಕೆಯಲ್ಲಿ ನಡೆಯುತ್ತಿದ್ದ ಲಾಬಿ, ಜಾಹೀರಾತು ವಿಭಾಗದ ಪ್ರಭಾವ, ಬಕೆಟ್ ಸಂಸ್ಕೃತಿ, ಎಲ್ಲ ಬ್ಯುರೋಗಳ ಸ್ಥಾನೀಯ ಸಂಪಾದಕರು ಬದಲಾದರೂ ಒಂದು ಬ್ಯುರೋದ ಮುಖ್ಯಸ್ಥರು ಕುರ್ಚಿಗಂಟಿಕೊಂಡ ಬಗ್ಗೆ ಚರ್ಚಿಸುತ್ತಿದ್ದೆವು. ನಾನು ವಿಜಯ ಕರ್ನಾಟಕದಿಂದ ಹೊರ ಬಂದು ‘ರಿಪೋರ್ಟರ್ ಕರ್ನಾಟಕ’ ಶುರು ಮಾಡಿದಾಗ ಸಂಭ್ರಮಿಸಿದ ಗೆಳೆಯರಲ್ಲಿ ವಾಗೀಶ್ ಪ್ರಮುಖರು.

ವಾಗೀಶ್ …ಏನಿದ್ದರೂ ನೇರ ನಡೆ- ನುಡಿಯ ವ್ಯಕ್ತಿ. 

ಸ್ವಯಂ ಪರಿಶ್ರಮದಿಂದ ಮೇಲೆ ಬಂದವರು. ಯಾರೇ ತಪ್ಪು ಮಾಡಿದರೂ ಯಾವುದೇ ಮುಲಾಜಿಯಿಲ್ಲದೆ ನೇರವಾಗಿ ಬೊಟ್ಟು ಮಾಡಿ ತೋರಿಸುತ್ತಿದ್ದರು. ಹಾಗೆ ತನ್ನಿಂದ ತಪ್ಪಾದರೂ ತಕ್ಷಣವೇ ಒಪ್ಪಿಕೊಳ್ಳುತ್ತಿದ್ದರು. ನಾನು ವಿಜಯ ಕರ್ನಾಟಕ ಮಂಗಳೂರು ಬ್ಯುರೋದಲ್ಲಿದ್ದಾಗ ಆಡಳಿತ ಮಂಡಳಿಯ ಕೆಲವು ಧೋರಣೆಗಳನ್ನು ಸ್ಥಾನೀಯ ಸಂಪಾದಕರು ನಮ್ಮ ಮೇಲೆ ಹೇರುತ್ತಿದ್ದಾಗ ನಾನು ಅದೆಷ್ಟೋ ಬಾರಿ ವಿರೋಧಿಸಿದ್ದೆ. ವರದಿಗಾರರು ಜಾಹೀರಾತು ತರಬೇಕೆಂದು ಸ್ಥಾನೀಯ ಸಂಪಾದಕರು ಹೇಳಿದಾಗ, ಮತ್ತೆ advertisement executive ಗಳಿಗೆ ಏನು ಕೆಲಸ ಎಂದು ನಾನು ಪ್ರಶ್ನಿಸಿದ್ದೆ. ಆಡಳಿತ ಮಂಡಳಿಯ ಇಂತಹ ಹಲವು ಪತ್ರಕರ್ತ ವಿರೋಧಿ ನಿಲುವನ್ನು ನಾನು ಪ್ರಶ್ನಿಸಿದಾಗ, ನಾನು ಎತ್ತಿದ ಪ್ರಶ್ನೆ ನೈಜವಾದದ್ದು ಎಂಬ ಅರಿವಿದ್ದರೂ ನಮ್ಮ ತಂಡದ ವರದಿಗಾರರು ಯಾರೂ ನಂಗೆ ಧ್ವನಿ ಸೇರಿಸುವ ಧೈರ್ಯ ತೋರಿಸಲಿಲ್ಲ. ಬದಲಿಗೆ ನಾನೊಬ್ಬನೇ ವಿರೋಧ ಕಟ್ಟಿಕೊಳ್ಳಬೇಕಾಯಿತು.

ಇಂತಹ ಸಂದರ್ಭದಲ್ಲಿ ನೆನಪಿಗೆ ಬರುತ್ತಿದ್ದವರು ಲೋಕೇಶ್ ಕಾಯರ್ಗ ಮತ್ತು ವಾಗೀಶ್ ಮಾತ್ರ. 

ಅಸ್ತಿತ್ವಕ್ಕಾಗಿ ಕೆಲಸ ತೆಗೆಸಿಕೊಟ್ಟವರನ್ನೇ ಕೆಲಸದಿಂದ ತೆಗೆಸಿದ ವ್ಯಕ್ತಿಗಳ ನಡುವೆ ಸತ್ಯ ಹೇಳುವ ಮತ್ತು ಅನ್ಯಾಯ ವಿರೋಧಿಸುವ ಧೈರ್ಯ ಕಾಯರ್ಗ ಮತ್ತು ವಾಗೀಶ್ ಅವರಿಬ್ಬರಿಗೆ ಮಾತ್ರ ಇತ್ತು. ಅದೇ ಕಾರಣಕ್ಕೆ ವಾಗೀಶ್  ನಂಗೆ ಹೆಚ್ಚು ಆತ್ಮೀಯರಾಗಿದ್ದರು. ಇದೀಗ ಅವರಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು