ಇತ್ತೀಚಿನ ಸುದ್ದಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಕುಂದಾಪುರ ಉಪವಿಭಾಗ ಅಧಿಕಾರಿಯಾಗಿ ವರ್ಗಾವಣೆ
30/01/2023, 16:29

ಮಂಗಳೂರು(reporterlarnataka.com): ದ.ಕ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿದ್ದ ರಶ್ಮಿ ಎಸ್.ಆರ್.ಅವರು ಕುಂದಾಪುರ ಉಪವಿಭಾಗದ ಉಪವಿಭಾಗ ಅಧಿಕಾರಿಯಾಗಿ ಮುಂಬಡ್ತಿಯಾಗಿ ವರ್ಗಾವಣೆಯಾಗಿದ್ದಾರೆ.
ಕೆಲ ಸಮಯದಿಂದ ಮಂಗಳೂರಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಶ್ಮಿ ಎಸ್ .ಆರ್.ಅವರು ಇತ್ತೀಚೆಗೆ ಎ.ಸಿ.ಯಾಗಿ ಮುಂಬಡ್ತಿ ಹೊಂದಿದ್ದರು. ಬಂಟ್ವಾಳ ತಾಲೂಕಿನ ದಂಡಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ ಅವರು ವರ್ಷಗಳ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು.
ಇನ್ನು ಕೊರೊನಾ ಸಂಕಷ್ಟದ ದಿನಗಳಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಒರ್ವ ಮಹಿಳಾ ಅಧಿಕಾರಿಯಾಗಿದ್ದರು.