ಇತ್ತೀಚಿನ ಸುದ್ದಿ
ಹೀಗೊಂದು ಕೋಮು ಸೌಹಾರ್ದತೆ: ಹಿಂದೂ ಕುಂಭಾಭಿಷೇಕಕ್ಕೆ ಮಸೀದಿಯಿಂದ ಶುಭ ಹಾರೈಕೆಯ ಫ್ಲೆಕ್ಸ್!
15/04/2022, 16:01
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಪ್ಪ ತಾಲೂಕಿನ ಜಯಪುರದ ಬದ್ರಿಯಾ ಜುಮ್ಮಾ ಮಸೀದಿ ವತಿಯಿಂದ ಮಸೀದಿ ಆವರಣದಲ್ಲಿಯೇ ಹಿಂದೂಗಳ ಕುಂಭಾಭಿಷೇಕ್ಕೆ ಶುಭ ಹಾರೈಸುವ ಫ್ಲೆಕ್ಸ್ ಹಾಕಲಾಗಿದೆ.
ಹರಿಹರಪುರದಲ್ಲಿ ನಡೆಯುತ್ತಿರುವ ಆದಿ ಶಂಕರಾಚಾರ್ಯ ಮಹಾ ಕುಂಬಾಭಿಷೇಕಕ್ಕೆ ಶುಭ ಕೋರಿ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಫೋಟೋ ಹಾಕಿದ ಮುಸ್ಲಿಂ ಬಾಂಧವರು ಫ್ಲೆಕ್ಸ್ ಹಾಕಿದ್ದಾರೆ. ಹಿಂದೂ-ಮುಸ್ಲಿಂ ಸೌಹಾರ್ದತೆಗೆ ಮುಸ್ಲಿಂ ಸಮುದಾಯ ತೆಗೆದುಕೊಂಡ ಕ್ರಮ ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ.